ವೈದ್ಯರಲ್ಲಿ ಕೊರೋನಾ ಪತ್ತೆ ಹಿನ್ನೆಲೆ; ಎಲ್ಲ ವೈದ್ಯಕೀಯ ಸಿಬ್ಬಂದಿಯ ಪರೀಕ್ಷೆಗೆ ದೆಹಲಿ ಸರ್ಕಾರ ನಿರ್ಧಾರ

ದೆಹಲಿಯ ಎಲ್ಲ ವೈದ್ಯರು, ನರ್ಸ್​ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಸ್ವೀಪರ್ಸ್ ಸೇರಿದಂತೆ ನೇರವಾಗಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡವರೆಲ್ಲರಿಗೂ‌ ವೈದ್ಯಕೀಯ ಪರೀಕ್ಷೆ ನಡೆಸಲು ಅರವಿಂದ್ ಕೇಜ್ರಿವಾಲ್ ತೀರ್ಮಾನಿಸಿದೆ.

news18-kannada
Updated:March 26, 2020, 1:50 PM IST
ವೈದ್ಯರಲ್ಲಿ ಕೊರೋನಾ ಪತ್ತೆ ಹಿನ್ನೆಲೆ; ಎಲ್ಲ ವೈದ್ಯಕೀಯ ಸಿಬ್ಬಂದಿಯ ಪರೀಕ್ಷೆಗೆ ದೆಹಲಿ ಸರ್ಕಾರ ನಿರ್ಧಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮಾ. 26): ದೆಹಲಿಯ ಮೊಹಲ್ಲಾ ಕ್ಲಿನಿಕ್​ನ ವೈದ್ಯರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಪರೀಕ್ಷೆ ನಡೆಸಲು ದೆಹಲಿ ಸರ್ಕಾರ ತೀರ್ಮಾನಿಸಿದೆ.

ದೆಹಲಿಯಲ್ಲಿ ಓರ್ವ ವೈದ್ಯರಿಗೆ ಕೊರೋನಾ ಸೋಂಕು ಖಚಿತವಾಗಿತ್ತು. ನಂತರ ಅವರ ಹೆಂಡತಿ, ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರಿಗೂ ಸೋಂಕು ಹರಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ವೈದ್ಯರ ಕುಟುಂಬ, ನರ್ಸ್​ ಸೇರಿದಂತೆ ಕ್ಲಿನಿಕ್​ಗೆ ಬಂದಿದ್ದ  ಸುಮಾರು 800 ಜನರನ್ನು ಹೋಂ ಐಸೋಲೇಷನ್​ನಲ್ಲಿ ಇರಿಸಲಾಗಿದೆ.

ವೈದ್ಯರು ಕೊರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದುವ ಸಾಧ್ಯತೆ ಹೆಚ್ಚಾಗಿರುವುದರಿಂದ ದೆಹಲಿಯ ಎಲ್ಲ ವೈದ್ಯರು, ನರ್ಸ್ ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಸ್ವೀಪರ್ಸ್ ಸೇರಿದಂತೆ ನೇರವಾಗಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡವರೆಲ್ಲರಿಗೂ‌ ವೈದ್ಯಕೀಯ ಪರೀಕ್ಷೆ ನಡೆಸಲು ಅರವಿಂದ್ ಕೇಜ್ರಿವಾಲ್ ತೀರ್ಮಾನಿಸಿದೆ.

ಇದನ್ನೂ ಓದಿ: ದೆಹಲಿ ವೈದ್ಯರಿಗೆ ಕೊರೋನಾ ಸೋಂಕು ದೃಢ​; ಅವರೊಂದಿಗೆ ಸಂಪರ್ಕ ಹೊಂದಿದ್ದ 800 ಜನಕ್ಕೆ ಗೃಹ ದಿಗ್ಬಂಧನ

ಕೊರೋನಾ ಶಂಕಿತರನ್ನು ತಪಾಸಣೆ ಮಾಡುವ ವೈದ್ಯರಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅವರಿಗೆ ಸಮಗ್ರವಾದ ಪರೀಕ್ಷೆ ನಡೆಸಲು ದೆಹಲಿ ಸರ್ಕಾರ ನಿರ್ಧಾರ ಮಾಡಿದೆ. ಲೋಕನಾಯಕ ರಾಜೀವ್ ಗಾಂಧಿ ಸೂಪರ್ ಸ್ಪೆಷಲ್ ಆಸ್ಪತ್ರೆ, ಡಿಡಿಯು, ಜಿಟಿಬಿ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ರಕ್ತ ಸಂಗ್ರಹ ಮಾಡಲಾಗುವುದು. ಬಳಿಕ, ಎನ್ ಡಿಎಂಸಿ ಆಸ್ಪತ್ರೆಯಲ್ಲಿ 24 ಗಂಟೆಯೊಳಗೆ ರಕ್ತ ಪರೀಕ್ಷೆ ನಡೆಸಲಾಗುವುದು.

ಇದನ್ನೂ ಓದಿ: ಕೊರೋನಾ ಪರಿಹಾರಕ್ಕಾಗಿ ಕೊನೆಗೂ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

ಕೊರೋನಾ ಸೊಂಕಿತ ವೈದ್ಯರು ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದರು ಎಂಬುದು ತಿಳಿದುಬಂದಿದೆ. ಆ ವ್ಯಕ್ತಿಯಿಂದಲೇ ವೈದ್ಯರಿಗೆ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ. ಈ  ಹಿನ್ನೆಲೆಯಲ್ಲಿ ಮಾರ್ಚ್ 12 ರಿಂದ 18ರವರೆಗೆ ಈ ಕ್ಲಿನಿಕ್​ಗೆ ಭೇಟಿ ನೀಡಿದವರೆಲ್ಲರಿಗೂ ಹೋಮ್ ಐಸೋಲೇಷನ್​ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

 
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ