ದೇಶವೇ ಲಾಕ್ ಡೌನ್ ಇದ್ದರೂ ಇಲ್ಲಿ 24 ತಾಸು ಕೆಲಸ; ಸರ್ಜಿಕಲ್ ಕಿಟ್ ಸಿದ್ಧಪಡಿಸಲು ಹಗಲಿರುಳು ಶ್ರಮ

ವ್ಯವಹಾರಿಕವಾಗಿ ಕಿಟ್ ಉತ್ಪಾದನೆಯನ್ನು ನೋಡದೆ ಸೇವೆಯ ಉದ್ದೇಶಕ್ಕಾಗಿ ಸಂಸ್ಥೆಯ ಮುಖ್ಯಸ್ಥರು ಹಗಲು ರಾತ್ರಿ ನಡೆಸುತ್ತಿದ್ದಾರೆ.

news18-kannada
Updated:April 4, 2020, 10:52 PM IST
ದೇಶವೇ ಲಾಕ್ ಡೌನ್ ಇದ್ದರೂ ಇಲ್ಲಿ 24 ತಾಸು ಕೆಲಸ; ಸರ್ಜಿಕಲ್ ಕಿಟ್ ಸಿದ್ಧಪಡಿಸಲು ಹಗಲಿರುಳು ಶ್ರಮ
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು (ಸಾಂದರ್ಭಿಕ ಚಿತ್ರ)
  • Share this:
ಉಡುಪಿ(ಏ.04) : ಕೊರೋನಾದಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ರಾಜ್ಯದ ಎಲ್ಲಾ ಫ್ಯಾಕ್ಟರಿಗಳು ಲಾಕ್ ಡೌನ್ ಆಗಿ ನೌಕರ ವರ್ಗ ಮನೆಯಲ್ಲಿ ಉಳಿದಿದೆ. ಆದರೆ ಉಡುಪಿ ಜಿಲ್ಲೆಯಲ್ಲಿರುವ ಈ ಫ್ಯಾಕ್ಟರಿಯೊಂದು ಲಾಕ್ ಡೌನ್ ಆಗದೆ ದಿನದ 24 ಗಂಟೆ ಉತ್ಪಾದನೆಯಲ್ಲಿ ನಿರತವಾಗಿದೆ.

ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಈ ಫ್ಯಾಕ್ಟರಿ ಲಾಕ್ ಡೌನ್ ಸಂದರ್ಭ ತನ್ನ ಉತ್ಪಾದನೆ ನಿಲ್ಲಿಸುವ ಬದಲು ಹೆಚ್ಚಿಸಿದೆ. ಹಗಲಿನ ಪಾಳಿಯಲ್ಲಿ ಮಾತ್ರ ನಡೆಸುತ್ತಿದ್ದ ಫ್ಯಾಕ್ಟರಿ ಈಗ ಸೇವಾ ಮನೋಭಾವದಿಂದ ರಾತ್ರಿಯೂ ಕೂಡ ಉತ್ಫಾದನೆ ಮಾಡುತ್ತಿದೆ. ಹಾಗಂತ ಇಲ್ಲಿ ಯಾವುದೇ ಬಟ್ಟೆ, ಬೇಕರಿ ಪದಾರ್ಥಗಳು ತಯಾರಾಗುತ್ತಿಲ್ಲ. ಇಲ್ಲಿ ತಯಾರಾರುತ್ತಿರುವ ಕೊರೋನಾ ಸುರಕ್ಷತಾ ಕಿಟ್​ಗಳು.

ವೈದ್ಯಕೀಯ ಭಾಷೆಯಲ್ಲಿ ಪಿಪಿಇ ಕಿಟ್ ಎಂದು ಕರೆಯುವ ಈ ಕಿಟ್ ವೈದ್ಯರಿಗೆ ಈ ಸಂದರ್ಭದಲ್ಲಿ ಅತೀ ಅಗತ್ಯವಾದ ಸಾಧನಾ ಎಂದೇ ಹೇಳಬಹುದು. ಯಾವುದೇ ಸಾಂಕ್ರಾಮಿಕ ರೋಗವಿರಲಿ, ಯಾವುದೇ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಇರಲಿ ಆ ಸಂದರ್ಭದಲ್ಲಿ ಈ ಪಿಪಿಇ ಕಿಟ್ ಅನ್ನು ವೈದ್ಯರು ಧರಿಸಿಕೊಂಡೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಅಂತಹ ಕಿಟ್ ಅನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್​ ಅವರ ವಿಶೇಷ ಅನುಮತಿ ಮೇರೆಗೆ ಸುಮುಖ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ರಾಶಿ ರಾಶಿಯಾಗಿ ಉತ್ಪಾದನೆ ಮಾಡಲಾಗುತ್ತದೆ.

ಮಾರಕ ರೋಗ ಕೊರೋನಾ ವಕ್ಕರಿಸಿದ ದಿನದಿಂದ ಸುಮುಖ ಸರ್ಜಿಕಲ್ ಫ್ಯಾಕ್ಟರಿಗೆ ಬಿಡುವೆ ಇಲ್ಲ ಎನ್ನುವಂತಾಗಿದೆ. ಈ ತುರ್ತು ಸಂದರ್ಭದಲ್ಲಿ ವ್ಯವಹಾರಿಕವಾಗಿ ಕಿಟ್ ಉತ್ಪಾದನೆಯನ್ನು ನೋಡದೆ ಸೇವೆಯ ಉದ್ದೇಶಕ್ಕಾಗಿ ಸಂಸ್ಥೆಯ ಮುಖ್ಯಸ್ಥರು ಹಗಲು ರಾತ್ರಿ ನಡೆಸುತ್ತಿದ್ದಾರೆ. ಈ ಕಿಟ್ ನಲ್ಲಿ ವೈದ್ಯರಿಗೆ ಗ್ಲೌಸ್, ತಲೆಗೆ ಧರಿಸುವ ಟೋಪಿ, ಮಾಸ್ಕ್, ಗೌನ್, ಶೂ ಲೆಗ್ಗಿಂಗ್, ಏಪ್ರಾನ್​ಗಳು ಬರುತ್ತವೆ. ಇದನ್ನು ವಿವಿಧ ಸ್ಥರಗಳಲ್ಲಿ ಇಲ್ಲಿ ಉತ್ಪಾದಿಸಲಾಗುತ್ತಿದೆ.

ಇದನ್ನೂ ಓದಿ :  ಲಾಕ್ ಡೌನ್ ಉಲ್ಲಂಘಿಸಿದವರಿಗೆ ಯೋಗ ಶಿಕ್ಷೆ - ಮೇಣದ ಬತ್ತಿ ಕೊಟ್ಟು ನಾಳೆ ಬೆಳಗುವಂತೆ ಸೂಚನೆ

ಇಲ್ಲಿನ ನೌಕರರ ಆರೋಗ್ಯವನ್ನು ಮನದಲ್ಲಿರಿಸಿ ಅವರಿಗೆ ವೈದ್ಯಕೀಯ ಪರೀಕ್ಷೆ, ಧರಿಸಲು ಮಾಸ್ಕ್, ಗ್ಲೌಸ್, ತಲೆಗೆ ಸ್ಕಾರ್ಪ್ ನೀಡಲಾಗುತ್ತಿದೆ. ಹೈಜಿನ್ ಉದ್ದೇಶಕ್ಕೆ ಬಿಸಿ ನೀರು ನೀಡಲಾಗುತ್ತಿದ್ದು, ತೊಳೆಯಲು ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತಿದೆ. ಸದ್ಯ ಸೇವಾ ಮನೋಭಾವವಿರುವ ಉತ್ಸಾಹಿ ನೌಕರರ ಸಹಕಾರದಿಂದ ಕಿಟ್ ತಯಾರಿಸಲಾಗುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಇಲ್ಲಿಂದಲೇ ಪಿಪಿಇ ಕಿಟ್ ಸರಬರಾಜು ಮಾಡಲಾಗುತ್ತಿದೆ.

ಸದ್ಯ ಉತ್ಪಾದನೆಗೆ ಕಚ್ಚಾ ಸಾಮಗ್ರಿ ಸರಬರಾಜಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಸಮಸ್ಯೆ ಉಂಟಾಗುತ್ತಿದ್ದರೂ ಅಧಿಕಾರಿ ಸಹಕಾರದಿಂದ ನಿರಂತರವಾಗಿ ಉತ್ಪಾದನೆ ಮಾಡಿ ರಾಜ್ಯದ ಮೂಲೆ ಮೂಲೆ ಕಳುಹಿಸಲಾಗುತ್ತಿದೆ. (ವರದಿ ; ಪರೀಕ್ಷಿತ್ ಶೇಟ್ )
First published: April 4, 2020, 10:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading