Coronavirus | ನಾಳೆಯಿಂದ ಮಧ್ಯಪ್ರದೇಶದ ಬೋಪಾಲ್, ಇಂದೋರ್​ನಲ್ಲಿ ನೈಟ್ ಕರ್ಫ್ಯೂ ಜಾರಿ!

ಕೇರಳ ರಾಜ್ಯದಲ್ಲಿ 1970 ಕೊರೋನಾ ಪಾಸಿಟಿವ್ ಪ್ರಕರಣಗಳು ಇಂದು ವರದಿಯಾಗಿವೆ. 2884 ಪ್ರಕರಣಗಳು ಹುಷಾರಾಗಿದ್ದರೆ, 15 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳದಲ್ಲಿ ಒಟ್ಟಾರೆ 26,127 ಆಕ್ಟೀವ್​ ಪ್ರಕರಣಗಳಿದ್ದು, 10,63,444 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಮಹಾಮಾರಿ ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರ ದೇಶದ ಹಲವೆಡೆ ಜೋರಾಗಿದೆ. ಕೊರೋನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಪಂಜಾಬ್​ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದ ಬಳಿಕ ಇದೀಗ ಮಧ್ಯಪ್ರದೇಶದಲ್ಲೂ ಪ್ರಕರಣಗಳಲ್ಲಿ ಆತಂಕಕಾರಿಯಾದ ಏರಿಕೆಯ ದೃಷ್ಟಿಯಿಂದ ಹಲವಾರು ಜಿಲ್ಲೆಗಳಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಧಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

  ಮಧ್ಯಪ್ರದೇಶದಲ್ಲೂ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯದ ಬೋಪಾಲ್ ಹಾಗೂ ಇಂದೋರ್​ ನಗರಗಳಲ್ಲಿ ಮಾರ್ಚ್ 17ರಿಂದ ಮುಂದಿನ ಆದೇಶದವರೆಗೂ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ಮಾರುಕಟ್ಟೆ ಎಂಟು ನಗರಗಳಾದ ಜಬಲಪುರ್​, ಗ್ವಾಲಿಯರ್, ಉಜ್ಜೈನಿ, ರಟ್ಲಾಮ್, ಬುರ್ಹಾನ್​ಪುರ್, ಛಿಂದವಾರ, ಬೆತಲ್, ಖಾರ್ಗೊನ್ ನಗರಗಳು ಮಾರ್ಚ್ 17ರಿಂದ ರಾತ್ರಿ 10 ಗಂಟೆಗೆ ಸಂಪೂರ್ಣ ಮುಚ್ಚಲಿವೆ. ಈ ನಗರಗಳಲ್ಲಿ ಕರ್ಫ್ಯೂ ಇರುವುದಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿರುವುದಾಗಿ ಎಎನ್​ಐ ಸುದ್ದಿ ಮಾಡಿದೆ.

  ರಾಜ್ಯದ ಬೆಂಗಳೂರಿನಲ್ಲಿ ಸೋಮವಾರ 550 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿರುವುದು ಗಂಭೀರ ವಿಷಯವಾಗಿದೆ ಮತ್ತು ಮಾರಕ ಸೋಂಕುಗಳ ನಿಯಂತ್ರಣಕ್ಕೆ ಕಠಿಣ ಕ್ರಮಗಳು ಅನಿವಾರ್ಯ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

  ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಸೋಂಕು ಹತೋಟಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಹಾಗೂ ಮದುವೆ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರ ಸೇರದಂತೆ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ನಿಗದಿಗಿಂತ ಹೆಚ್ಚು ಜನರು ಪ್ರಯಾಣಿಸದಂತೆ ಆದೇಶಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ದಂಡ ಹಾಕುವ ಎಚ್ಚರಿಕೆಯನ್ನು ಸಿಎಂ ಬಿಎಸ್​ವೈ ಅವರು ನೀಡಿದ್ದಾರೆ.

  ಪಂಜಾಬ್​ನ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಕೋವಿಡ್ -19 ಪಾಸಿಟಿವ್ ವರದಿ ಬಂದಿದೆ. ಕಳೆದ ಕೆಲವು ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೋವಿಡ್ -19 ಪರೀಕ್ಷೆಗೆ ಒಳಗಾಗುವಂತೆ ಸುಖ್ಬೀರ್ ಸಿಂಗ್ ಅವರು ಮನವಿ ಮಾಡಿಕೊಂಡಿದ್ದಾರೆ.

  ಇದನ್ನು ಓದಿ: ಬೆಳಗಾವಿ ಲೋಕಸಭಾ, ಎರಡು ವಿಧಾನಸಭೆ ಸೇರಿ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿ  ಕೇರಳ ರಾಜ್ಯದಲ್ಲಿ 1970 ಕೊರೋನಾ ಪಾಸಿಟಿವ್ ಪ್ರಕರಣಗಳು ಇಂದು ವರದಿಯಾಗಿವೆ. 2884 ಪ್ರಕರಣಗಳು ಹುಷಾರಾಗಿದ್ದರೆ, 15 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳದಲ್ಲಿ ಒಟ್ಟಾರೆ 26,127 ಆಕ್ಟೀವ್​ ಪ್ರಕರಣಗಳಿದ್ದು, 10,63,444 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
  Published by:HR Ramesh
  First published: