HOME » NEWS » Coronavirus-latest-news » CORONAVIRUS NEWS QUARANTINED NIZAMUDDIN TABLIGHI JAMAAT ATTENDEES MISBEHAVE SPIT AT DOCTORS IN DELHI SCT

ವೈದ್ಯರ ಮೇಲೇ ಉಗುಳ್ತಾರೆ!; ಇದು ದೆಹಲಿ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡವರ ಅಸಭ್ಯ ವರ್ತನೆ

Nizamuddin Crisis: ರೈಲ್ವೆ ಬೋಗಿಗಳಲ್ಲಿ ಕ್ವಾರಂಟೈನ್​ನಲ್ಲಿರುವ ಸಭೆಯಲ್ಲಿ ಪಾಲ್ಗೊಂಡ ಜನರು ವೈದ್ಯರ ಮೇಲೆ ಉಗುಳಿ, ಕಂಡಲ್ಲೆಲ್ಲ ಗಲೀಜು ಮಾಡಿ ಮತ್ತಷ್ಟು ಕೊರೋನಾ ಭೀತಿ ಸೃಷ್ಟಿಸುತ್ತಿದ್ದಾರೆ.

Sushma Chakre | news18-kannada
Updated:April 2, 2020, 11:38 AM IST
ವೈದ್ಯರ ಮೇಲೇ ಉಗುಳ್ತಾರೆ!; ಇದು ದೆಹಲಿ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡವರ ಅಸಭ್ಯ ವರ್ತನೆ
ನಿಜಾಮುದ್ದೀನ್​ ಸಭೆಯಲ್ಲಿ ಪಾಲ್ಗೊಂಡು ಕ್ವಾರಂಟೈನ್​ನಲ್ಲಿರುವ ಜನರು.
  • Share this:
ನವದೆಹಲಿ (ಏ. 2): ದೆಹಲಿಯ ನಿಜಾಮುದ್ದೀನ್​ನ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಂದ ಕೊರೋನಾ ಸೋಂಕು ದೇಶದೆಲ್ಲೆಡೆ ಹರಡಲಾರಂಭಿಸಿದೆ. ಇದರಿಂದಾಗಿ ಆ ಸಭೆಯಲ್ಲಿ ಪಾಲ್ಗೊಂಡವರನ್ನು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸಾವಿರಾರು ಜನಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರಿಂದ ದೆಹಲಿಯ ಆಸ್ಪತ್ರೆಗಳಲ್ಲಿ ಜಾಗ ಸಾಕಾಗದೆ ರೈಲಿನ ಕಂಪಾರ್ಟ್​ಮೆಂಟ್​ಗಳನ್ನೇ ಕ್ವಾರಂಟೈನ್​ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಆದರೆ, ಆ ರೈಲಿನಲ್ಲಿ ತಮಗೆ ಸರಿಯಾದ ವ್ಯವಸ್ಥೆ ನೀಡಿಲ್ಲ ಎಂದು ವೈದ್ಯರು ಮತ್ತು ನರ್ಸ್​ಗಳ ಮೇಲೆ ಉಗುಳುವ ಮೂಲಕ ಕ್ವಾರಂಟೈನ್​ನಲ್ಲಿರುವ ನಿಜಾಮುದ್ದೀನ್​ ಸಭೆಯಲ್ಲಿ ಪಾಲ್ಗೊಂಡ ಜನರು ಅಸಭ್ಯ ವರ್ತನೆ ತೋರುತ್ತಿದ್ದಾರೆ.

ಕೊರೋನಾ ಶಂಕೆಯಿಂದ ಸುಮಾರು 160 ಜನರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಈ ವೇಳೆ ಅವರು ಸ್ವಚ್ಛತೆ ಕಾಯ್ದುಕೊಳ್ಳಬೇಕೆಂದು ಮಾಸ್ಕ್​, ಗ್ಲೌಸ್​ಗಳನ್ನು ನೀಡಲಾಗಿದೆ. ಆದರೆ, ರೈಲ್ವೆ ಬೋಗಿಗಳಲ್ಲಿ ಕ್ವಾರಂಟೈನ್​ನಲ್ಲಿರುವ ಸಭೆಯಲ್ಲಿ ಪಾಲ್ಗೊಂಡ ಜನರು ವೈದ್ಯರ ಮೇಲೆ ಉಗುಳಿ, ಕಂಡಲ್ಲೆಲ್ಲ ಗಲೀಜು ಮಾಡಿ ಮತ್ತಷ್ಟು ಕೊರೋನಾ ಭೀತಿ ಸೃಷ್ಟಿಸುತ್ತಿದ್ದಾರೆ. ಇವರ ಈ ವರ್ತನೆಯಿಂದ ಬೇಸತ್ತಿರುವುದಾಗಿ ವೈದ್ಯರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಕೊರೋನಾ ಸ್ಕ್ರೀನಿಂಗ್‌ಗೆ ಮುಂದಾದ ವೈದ್ಯರ ಮೇಲೆ ಹಲ್ಲೆ; ಕಲ್ಲೆಸೆದು ಪ್ರತಿರೋಧಿಸಿರುವ ಮಧ್ಯಪ್ರದೇಶದ ಜನ

ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 167 ಜನರನ್ನು ತುಘಲಕಾಬಾದ್​ನ ರೈಲುಗಳಲ್ಲಿ ಕ್ವಾರಂಟೈನ್​ಲ್ಲಿ ಇರಿಸಲಾಗಿದೆ. ಆ ರೈಲ್ವೆ ಕಾಲೋನಿಯಲ್ಲಿರುವ ಜನರಿಗೂ ಈ ವರ್ತನೆಯಿಂದ ಆತಂಕ ಶುರುವಾಗಿದೆ. ಸಾಂಕ್ರಾಮಿಕವಾಗಿ ಹರಡುವ ಕೊರೋನಾ ಸೋಂಕಿನಿಂದ ಬೇರೆಯವರಿಗೆ ತೊಂದರೆ ಆಗಬಾರದೆಂದು ಮಾಸ್ಕ್​ ಧರಿಸಲು ಸೂಚಿಸಲಾಗುತ್ತದೆ. ಆದರೆ, ಕಂಡಲ್ಲೆಲ್ಲ ಉಗುಳುವುದರಿಂದ ಬೇರೆಯವರಿಗೆ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಕ್ವಾರಂಟೈನ್​ ಕೇಂದ್ರಗಳಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲ, ಸರಿಯಾದ ಊಟ ಸಿಗುತ್ತಿಲ್ಲ ಎಂದು ವೈದ್ಯರ ಮೇಲೆ ಕಿಡಿಕಾರಿರುವ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡವರು ವೈದ್ಯರ ಮೇಲೆ ಉಗುಳಿರುವ ಘಟನೆ ನಡೆದಿದೆ. ಹಾಗೇ, ಕ್ವಾರಂಟೈನ್​ ಕೇಂದ್ರದಲ್ಲೇ ಇರಲು ನಿರಾಕರಿಸುತ್ತಿರುವ ಅವರು ಹೊರಗೆಲ್ಲ ಓಡಾಡತೊಡಗಿದ್ದಾರೆ. ಅವರನ್ನು ನಿಯಂತ್ರಿಸುವುದೇ ಕಷ್ಟಕರವಾಗಿದೆ ಎಂದು ದೆಹಲಿಯ ದೈಲ್ವೆ ಇಲಾಖೆಯ ವಕ್ತಾರ ದೀಪಕ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Nirmal Singh: ಕೊರೋನಾ ಸೋಂಕಿಗೆ ಪದ್ಮಶ್ರೀ ಪುರಸ್ಕೃತ ಗಾಯಕ ನಿರ್ಮಲ್ ಸಿಂಗ್ ಬಲಿ

ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಾಡಾಗಿರುವ ರೈಲ್ವೆ ಬೋಗಿಗಳಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಮನವಿ ಮಾಡಲಾಗಿದೆ. ಅಥವಾ ಅವರನ್ನು ಬೇರೆ ಯಾವುದಾದರೂ ಜಾಗಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ.ಧಾರ್ಮಿಕ ಸಭೆ ನಡೆದ ನಿಜಾಮುದ್ದೀನ್​ನಲ್ಲೂ ಸರಿಯಾಗಿ ಸ್ವಚ್ಛಾ ಕಾರ್ಯ ನಡೆದಿಲ್ಲ. ನಿಜಾಮುದ್ದೀನ್​ ಪ್ರದೇಶದಲ್ಲಿದ್ದವರನ್ನು ಬಸ್​ಗಳಲ್ಲಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡುವಾಗಲೂ ಬಸ್​ನ ಹೊರಗೆ ಉಗುಳಿ, ಅಸಭ್ಯವಾಗಿ ವರ್ತಿಸಲಾಗಿದೆ. ಇದರಿಂದ ಬೇರೆಯವರಿಗೂ ಸೋಂಕು ಹರಡುತ್ತದೆ ಎಂಬ ಜ್ಞಾನವೂ ಅವರಿಗಿಲ್ಲ ಎಂದು ನಿಜಾಮುದ್ದೀನ್​ ನಿವಾಸಿಗಳು ಬೇಸರ ಹೊರಹಾಕಿದ್ದಾರೆ.

ದೆಹಲಿಯೊಂದರಲ್ಲೇ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡ 24 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಕೋವಿಡ್​​​-19 ಅತ್ಯಂತ ಮಾರಕ ಮತ್ತು ಸಾಂಕ್ರಾಮಿಕ ರೋಗ: ನೀವು ತಿಳಿದುಕೊಳ್ಳಲೇ ಬೇಕಾದ ಅಂಶಗಳಿವು
Youtube Video
First published: April 2, 2020, 11:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories