Coronavirus: ದೇಶದಲ್ಲಿ ಈವರೆಗೆ ಕೊರೋನಾದಿಂದ ಸತ್ತಿದ್ದು 4 ಲಕ್ಷ ಅಲ್ಲ, 49 ಲಕ್ಷ ಜನ...! ಸರ್ಕಾರ ಹೇಳಿದ್ದೆಲ್ಲಾ ಸುಳ್ಳಾ?

ಕೊರೊನಾದಿಂದ ಇಷ್ಟೇ ಜನ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಭಾರತದಲ್ಲಿ 2020ರ ಜನವರಿಯಿಂದ 2021ರ ಜೂನ್‌ ಅವಧಿಯಲ್ಲಿ 34 ಲಕ್ಷದಿಂದ 49 ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ನವದೆಹಲಿ(ಜು.22): ದೇಶಕ್ಕೆ ಕೊರೋನಾ ಮಹಾಮಾರಿ ವಕ್ಕರಿಸಿದ ಬಳಿಕ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಮಾರಕ ಕೊರೋನಾಗೆ ಅದೆಷ್ಟೋ ಮಂದಿ ಬಲಿಯಾಗಿದ್ದಾರೆ. ಈವರೆಗೆ ದೇಶದಲ್ಲಿ ಕೊರೋನಾದಿಂದ 4 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂಬುದು ಅಧಿಕೃತ ವೆಬ್​ಸೈಟ್​ ನೀಡಿರುವ ಮಾಹಿತಿ. ಆದರೆ, ಹೊಸ ಅಂಕಿ-ಅಂಶಗಳ ಪ್ರಕಾರ ಸಾವಿನ ಸಂಖ್ಯೆ ಕೇವಲ 4 ಲಕ್ಷ ಅಲ್ಲ. ಹೌದು, ನೂತನ ವರದಿ ಪ್ರಕಾರ ಕೊರೋನಾ ಸೋಂಕಿನಿಂದ ಇದುವರೆಗೆ ಸುಮಾರು 34-49 ಲಕ್ಷ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ನೂತನ ವರದಿಯೊಂದು ತಿಳಿಸಿದೆ.

  ದೇಶದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಸಹ ಲೇಖಕರಾಗಿರುವ, ಅಮೆರಿಕ ಮೂಲದ ಗ್ಲೋಬಲ್‌ ಡೆವ-ಲಪ್‌ಮೆಂಟ್‌ ಸಂಸ್ಥೆಯ ಜಸ್ಟಿನ್‌ ಸ್ಯಾಂಡೆಫರ್‌ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಭಿಷೇಕ್‌ ಆನಂದ್‌ ತಯಾರಿಸಿದ ವರದಿ ಮಂಗಳವಾರ ಬಿಡುಗಡೆಯಾಗಿದೆ. ಇದರಲ್ಲಿ 34-49 ಲಕ್ಷ ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

  ಇದನ್ನೂ ಓದಿ:Karnataka SSLC Exam: ಇಂದು ಎಸ್​ಎಸ್​ಎಲ್​ಸಿ 2ನೇ ಪರೀಕ್ಷೆ; ಎಕ್ಸಾಂ ಸೆಂಟರ್​​ಗಳಿಗೆ ಸಚಿವ ಸುರೇಶ್​ ಕುಮಾರ್ ಭೇಟಿ

  ''ಕೊರೊನಾದಿಂದ ಇಷ್ಟೇ ಜನ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಆದರೆ, ಭಾರತದಲ್ಲಿ 2020ರ ಜನವರಿಯಿಂದ 2021ರ ಜೂನ್‌ ಅವಧಿಯಲ್ಲಿ 34 ಲಕ್ಷದಿಂದ 49 ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದಾರೆ. ಅಧಿಕೃತವಾಗಿ ನೀಡಿರುವ ಮಾಹಿತಿಗಿಂತ 40 ಲಕ್ಷ ಅಧಿಕ ಜನರಂತೂ ಸಾವಿಗೀಡಾಗಿದ್ದಾರೆ,'' ಎಂದು ವರದಿ ತಿಳಿಸಿದೆ.

  ''ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ನಡೆದ ಮಹಾ ದುರಂತಗಳಿಗಿಂತ ಹೆಚ್ಚಿನ ಪ್ರಮಾಣದ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಖಂಡಿತವಾಗಿಯೂ ಇದು ನೂರು, ಸಾವಿರ ಇಲ್ಲ. ಲಕ್ಷಾಂತರ ಜನ ಸೋಂಕಿಗೆ ಬಲಿಯಾಗಿದ್ದಾರೆ,'' ಎಂದು ಲೇಖಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

  ಇದನ್ನೂ ಓದಿ:Karnataka Weather Today: ಇಂದು ನಾಳೆ ರಾಜ್ಯದಲ್ಲಿ ಮಳೆಯ ಆರ್ಭಟ; ಈ ಜಿಲ್ಲೆಗಳಲ್ಲಿ ಆರೆಂಜ್​-ಯೆಲ್ಲೋ ಅಲರ್ಟ್​ ಘೋಷಣೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Latha CG
  First published: