ಮೂಕ ಪ್ರಾಣಿಗಳಿಗೆ ಮಿಡಿದ ಕೋಟೆನಾಡಿನ ಯುವಜನರ ಹೃದಯ- ಇವರು ಮಾಡಿದ್ದೇನು ಗೊತ್ತಾ?

ಪ್ರತಿದಿನ ಸ್ವಂತ ಹಣದಲ್ಲೇ ರೈತರಿಂದ ತರಕಾರಿ, ಹಣ್ಣು, ಹಾಲು, ಮೊಟ್ಟೆ ಸೇರಿದಂತೆ ವಿವಿಧ ಆಹಾರ ಕೊಳ್ಳುತ್ತಾರೆ. ಈ ಯುವಕರ ಗುಂಪು ನಿತ್ಯವೂ 4-5 ಸಾವಿರ ಪ್ರಾಣಿಗಳಿಗಾಗಿ ಹಣ ಖರ್ಚ ಮಾಡುತ್ತಿದ್ದಾರೆ.

ಹಸುಗಳು

ಹಸುಗಳು

 • Share this:
  ಚಿತ್ರದುರ್ಗ(ಏ.18): ಪ್ರಪಂಚವನ್ನೇ ತಲ್ಲಣಗೊಳಿಸಿರುವ ಕೊರೋನಾ ಎಫೆಕ್ಟ್ ಮೂಖ ಪ್ರಾಣಿಗಳ ಮೇಲೂ ಬಿದ್ದಿದ್ದು. ಬೀದಿ ನಾಯಿ ,ಹಸು, ಕೋತಿಗಳು ಹಸಿವಿನಿಂದ ಬಳುತ್ತಿವೆ. ಈ ಮೂಕ ಪ್ರಾಣಿಗಳಿಗೆ ಚಿತ್ರದುರ್ಗ ನಗರದ ಯುವಕ, ಯುವತಿಯರ ತಂಡ ಹಸಿ ತರಕಾರಿ, ಸೊಪ್ಪು ಹಾಕಿ ಅರೈಕೆ ಮಾಡಿ ಹೃದಯ ಶ್ರೀಮಂತಿಕೆಯ ಜೊತೆ ಮಾನವೀಯತೆಯನ್ನ ಮೆರೆಯುತ್ತಿದ್ದಾರೆ.

  ಸಾವಿನ ರಣಕೇಕೆ ಹಾಕುತ್ತಿರುವ ಕೊರೋನಾ ವೈರಸ್ ಭೀತಿಯಿಂದ ದೇಶವೇ ಸ್ಥಬ್ದವಾಗಿದೆ. ನಿರ್ಗತಿಕ ಜನರ ಸ್ಥಿತಿಯಂತು ಹೇಳ ತೀರದಾಗಿದೆ. ಅಷ್ಟೆ ಅಲ್ಲದೆ ಕೋತಿಗಳು ಸೇರಿದಂತೆ ಬೀದಿ ನಾಯಿಗಳು, ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ. ಅವುಗಳಿಗೆ ಸಾಮಾನ್ಯ ದಿನಗಳಲ್ಲಿ ಸಿಗುತ್ತಿದ್ದ ಆಹಾರ ಈಗ ಸಿಗದೆ ಆ ಮೂಕ ಪ್ರಾಣಿಗಳು ಸಂಕಟ ಪಡುತ್ತಿವೆ. ಈ ಮೂಕ ಪ್ರಾಣಿಗಳ ವೇದನೆ ನೋಡಿದ ಚಿತ್ರದುರ್ಗ ನಗರದ ಯುವಕರು ಆಹಾರ ನೀಡಿ ಇವುಗಳನ್ನ ರಕ್ಷಿಸುವುದಕ್ಕೆ ಪ್ರಾಣಿಗಳ ರಕ್ಷಣಾ ಕ್ಲಬ್ ಎಂಬ ತಂಡ ರಚಿಸಿಕೊಂಡಿದ್ದಾರೆ.

  15 ಜನರ ತಂಡ ನಿತ್ಯವೂ ಮೂಕ ಪ್ರಾಣಿಗಳಿಗೆ ದಾಸೋಹ ನೀಡಲು ಮುಂದಾಗಿದ್ದಾರೆ. ಬೆಂಗಳೂರು ಸೇರಿ ನಾನಾ ಕಡೆ ಕೆಲಸ ಮಾಡುತ್ತಿದ್ದ ಯುವಕ- ಯುವತಿಯರು ಲಾಕ್ ಡೌನ್ ನಲ್ಲಿ ಚಿತ್ರದುರ್ಗಕ್ಕೆ ಬಂದಿದ್ದು, ಈ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಾಡುತ್ತಿರುವ ಬೀದಿ ನಾಯಿ, ಹಸು, ಎಮ್ಮೆ, ಕೋತಿ ಸೇರಿದಂತೆ ವಿವಿಧ ಪ್ರಾಣಿಗಳಿಗೆ ಆಹಾರ ಓದಗಿಸುವ ಕಾರ್ಯಕ್ಕೆ ಮುಂದಾಗಿರುವ ಇವರು, ಪ್ರತಿದಿನ ಸ್ವಂತ ಹಣದಲ್ಲೇ ರೈತರಿಂದ ತರಕಾರಿ, ಹಣ್ಣು, ಹಾಲು, ಮೊಟ್ಟೆ ಸೇರಿದಂತೆ ವಿವಿಧ ಆಹಾರ ಕೊಳ್ಳುತ್ತಾರೆ. ಈ ಯುವಕರ ಗುಂಪು ನಿತ್ಯವೂ 4-5 ಸಾವಿರ ಪ್ರಾಣಿಗಳಿಗಾಗಿ ಹಣ ಖರ್ಚ ಮಾಡುತ್ತಿದ್ದಾರೆ. ಈ ಯುವಕ ಯುವತಿಯರು ಚಿತ್ರದುರ್ಗದವರು. ಆದರೆ, ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಆಗಿರುವುದರಿಂದ ಯುಗಾದಿ ಹಬ್ಬಕ್ಕೆ ಬಂದವರು ಊರಲ್ಲಿಯೇ ಉಳಿದಿದ್ದಾರೆ.

  ಇಂತಹ ಸಮಯದಲ್ಲಿ ನಗರದ ಬೀಡಾಡಿ ಪ್ರಾಣಿಗಳ ಮೂಕ ವೇದನೆ ಕಂಡ ಯುವ ಸಮೂಹ ಮರುಗಿದೆ. ಹಾಗಾಗಿ ಪ್ರತಿದಿನ ತರಕಾರಿ, ಹಾಲು, ಹಣ್ಣು ಖರೀದಿಸಿ ನಿತ್ಯವೂ ಆಹಾರ ತಯಾರಿಸಿ ನೀಡುತ್ತಿದ್ದಾರೆ. ಅಲ್ಲದೆ ಬೀದಿ ನಾಯಿ, ದನಕರುಗಳು ಇರುವ ಎಲ್ಲಾ ಬೀದಿಗಳಿಗೂ ಸ್ವತಃ ವಾಹನಗಳಲ್ಲಿ ತೆರಳಿ, ಹಸು ಕರು, ಕೋತಿ, ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.  ಇವರ ಕಾರ್ಯವನ್ನ ನೋಡುತ್ತಿರುವ ಚಿತ್ರದುರ್ಗದ ಕೆಲ ದಾನಿಗಳು ಕೂಡಾ ಹಣ್ಣು, ತರಕಾರಿ ವಿವಿಧ ಆಹಾರ ಪದಾರ್ಥಗಳನ್ನ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಅಲ್ಲದೆ ತನ್ನದಲ್ಲ ಕೆಲಸಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಕ್ಲಬ್ ನ ಸದಸ್ಯರಿಗೆ ಸಾಥ್ ನೀಡುತ್ತಿದ್ದಾರೆ.

  ಇದನ್ನೂ ಓದಿ : ಸಿಎಂ ಪರಿಹಾರ ನಿಧಿಗೆ ಆರು ತಿಂಗಳ ಪಿಂಚಣಿ ನೀಡಿ ಮಾದರಿಯಾದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

  ಒಟ್ಟಾರೆ ದೇಶವನ್ನ ಲಾಕ್ ಮಾಡಿಸಿರುವ ಕೊರೋನಾ ಎಪೆಕ್ಟ್ ಮೂಕ ಪ್ರಾಣಿಗಳಿಗೂ ತಟ್ಟಿದೆ. ಅನ್ನ ಆಹಾರ ವಿಲ್ಲದೆ ಪ್ರಾಣಿಗಳು ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿಗಳ ಈ ಸ್ಥಿತಿ ಕಂಡು ಕೋಟೆನಾಡಿನ ಯುವಕ ಯುವತಿಯರು ಸ್ವಂತ ಖರ್ಚಿನಲ್ಲಿ ಆಹಾರ ನೀಡುತ್ತಿರುವುದು ದುರ್ಗದ ಜನರ ಮೆಚ್ಚುಗೆಗೆ ಕಾರಣವಾಗಿದೆ.

  (ವರದಿ : ವಿನಾಯಕ ತೋಡರನಾಳ)
  First published: