Coronavirus Updates: ಭಾರತದಲ್ಲಿ ಕೊರೋನಾ ಅಟ್ಟಹಾಸ; ಕೇರಳ, ತಮಿಳುನಾಡಿನಲ್ಲಿ ಅತಿ ಹೆಚ್ಚು ಸೋಂಕು

Coronavirus Live Updates: ದೇಶದಲ್ಲಿ ಈಗ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿರುವುದು ತಮಿಳುನಾಡಿನಲ್ಲಿ. ಮಂಗಳವಾರ ತಮಿಳುನಾಡಿನಲ್ಲಿ 34.26 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದರೆ ಕೇರಳ ಎರಡನೇ‌ ಸ್ಥಾನದಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಮೇ 25: 41 ದಿನಗಳ ಬಳಿಕ ಮೊನ್ನೆ (ಮೇ 24)  ಮೊದಲ ಬಾರಿಗೆ ದೇಶದ ಕೊರೋನಾ ಪೀಡಿತರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಆಗಿತ್ತು. ಇದರಿಂದ ಇಡೀ ದೇಶವನ್ನೇ ಕಾಡಿ ಕಂಗೆಡಿಸಿದ್ದ ಎರಡನೇ ಸುತ್ತಿನ ಕೊರೋನಾ ಅಲೆ ಅಂತ್ಯದ ಸಮೀಪ ಸಾಗುತ್ತಿದೆ ಎಂದು ಹೇಳಲಾಗಿತ್ತು. ಆದರೀಗ ನಿನ್ನೆ (ಮೇ 25) ಮತ್ತೆ ದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿವೆ. ಇದೇ ರೀತಿ ಕಳೆದ 21 ದಿನಗಳ ಬಳಿಕ ಮೊನ್ನೆ 3,511 ಜನ ಕೊರೋನಾದಿಂದ ಸಾವನ್ನಪ್ಪಿದ್ದರು. ಇದರಿಂದ ಕೊರೋನಾ ಸೋಂಕು ಹರಡುವಿಕೆ ಕಡಿಮೆಯಾದರೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆತಂಕ ದೂರವಾಗಿತ್ತು. ಆದರೆ ಸಾವಿನ ವಿಷಯದಲ್ಲೂ ಮತ್ತೆ ನಿರಾಸೆಯಾಗಿದೆ. ನಿನ್ನೆ ಮತ್ತೆ 4,157 ಜನ ಕೊರೋನಾ ಮಹಾಮಾರಿಗೆ ಬಲಿ ಆಗಿದ್ದಾರೆ.

ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ಕಡೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರ ಅಭಿಪ್ರಾಯದಂತೆ ಮೇ 6ರಂದು ದೇಶದಲ್ಲಿ 4,14,188 ಪ್ರಕರಣಗಳು ಕಂಡುಬಂದಿದ್ದು ದಾಖಲೆಯಾಗಿತ್ತು. ನಂತರ ತಳಮುಖಿಯಾಗಿ ಸಾಗಿದ ಕೊರೋನಾ ಎರಡನೇ ಅಲೆಯಲ್ಲಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಮೇ 24ರಂದು ಮೊದಲ ಬಾರಿಗೆ  ಎರಡು ಲಕ್ಷಕ್ಕಿಂತ ಕಡಿಮೆ (1,96,427) ಆಗಿದ್ದವು.

ಇದನ್ನೂ ಓದಿ: ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ; ಹೈಕಮಾಂಡ್ ಭೇಟಿಗೆ ತೆರಳಿದ್ದ ಬಿಜೆಪಿ ಬಂಡಾಯ ನಾಯಕರಿಗೆ ಹಿನ್ನಡೆ

ಮಂಗಳವಾರ 2,08,921 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,71,57,795ಕ್ಕೆ ಏರಿಕೆ ಆಗಿದೆ.‌ ಮಂಗಳವಾರ 4,157 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,11,388ಕ್ಕೆ ಏರಿಕೆ ಆಗಿದೆ. ಈವರೆಗೆ 2,43,50,816 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 24,95,591 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ.‌ ಈವರೆಗೆ 20,06,62,456 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌.

ಇದನ್ನೂ ಓದಿ: PM Narendra Modi: ಕೊರೋನಾ ಲಸಿಕೆ ಕಂಡುಹಿಡಿದ ಭಾರತದ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ; ಪ್ರಧಾನಿ ಮೋದಿ

ದೇಶದಲ್ಲಿ ಈಗ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿರುವುದು ತಮಿಳುನಾಡಿನಲ್ಲಿ. ಮಂಗಳವಾರ ತಮಿಳುನಾಡಿನಲ್ಲಿ 34.26 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದರೆ ಕೇರಳ ಎರಡನೇ‌ ಸ್ಥಾನದಲ್ಲಿದೆ. ಕೇರಳದಲ್ಲಿ ನಿನ್ನೆ 29.8 ಸಾವಿರ ಪ್ರಕರಣಗಳು ಕಂಡುಬಂದಿವೆ. ಸಂಪೂರ್ಣ ನಿಯಂತ್ರಣದ ಹಾದಿಯಲ್ಲಿರುವ ಮಹಾರಾಷ್ಟ್ರ ಈಗ ಮೂರನೇ ಸ್ಥಾನದಲ್ಲಿದ್ದು ನಿನ್ನೆ 24.13 ಸಾವಿರ ಪ್ರಕರಣಗಳು ಪತ್ತೆಯಾಗಿವೆ.‌ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದ್ದು ನಿನ್ನೆ ಕರ್ನಾಟಕದಲ್ಲಿ 22.76 ಸಾವಿರ ಪ್ರಕರಣಗಳು ಗೋಚರಿಸಿವೆ.

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
Published by:Sushma Chakre
First published: