Coronavirus Updates: ಭಾರತದಲ್ಲಿ ತಗ್ಗಿದ ಕೊರೋನಾ ಹಾವಳಿ; ನಿನ್ನೆ 2.57 ಲಕ್ಷ ಕೇಸುಗಳು ಪ್ರಕರಣಗಳು ಪತ್ತೆ

Coronavirus Live Updates: ಶುಕ್ರವಾರ 2,57,299 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,62,89,290ಕ್ಕೆ ಏರಿಕೆ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಮೇ 21: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿದೆಯಾದರೂ ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಭಾರೀ ಇಳಿಮುಖ ಆಗಿಲ್ಲ.

ಶುಕ್ರವಾರ 2,57,299 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,62,89,290ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಶುಕ್ರವಾರ 4,194 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,95,525ಕ್ಕೆ ಏರಿಕೆ ಆಗಿದೆ. ಈವರೆಗೆ 2,30,70,365 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 29,23,400 ಆಕ್ಟಿವ್ ಕೇಸುಗಳಿವೆ.

ಇದನ್ನೂ ಓದಿ: Air India Server Hack: ಏರ್ ಇಂಡಿಯಾ ಡೇಟಾ ಹ್ಯಾಕ್; 45 ಲಕ್ಷ ಪ್ರಯಾಣಿಕರ ಖಾಸಗಿ ಮಾಹಿತಿ ಸೋರಿಕೆ

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.

ಎರಡನೇ ಅಲೆ ಶುರುವಾದ ಮೇಲೆ ಏಪ್ರಿಲ್ 4ರಂದು 1,03,558, ಏಪ್ರಿಲ್ 5ರಂದು 96,982, ಏಪ್ರಿಲ್ ‌6ರಂದು 1,15,736, ಏಪ್ರಿಲ್ 7ರಂದು 1,26,789, ಏಪ್ರಿಲ್ 8ರಂದು 1,31,968, ಏಪ್ರಿಲ್ 9ರಂದು 1,45,384, ಏಪ್ರಿಲ್ 10ರಂದು 1,52,879, ಏಪ್ರಿಲ್ 11ರಂದು 1,68,912, ಏಪ್ರಿಲ್ 12ರಂದು 1,61,736, ಏಪ್ರಿಲ್ 13ರಂದು 1,84,372, ಏಪ್ರಿಲ್ 14ರಂದು 2,00,739, ಏಪ್ರಿಲ್ 15ರಂದು 2,17,353, ಏಪ್ರಿಲ್ 16ರಂದು 2,34,692, ಏಪ್ರಿಲ್ 17ರಂದು 2,61,500 ಏಪ್ರಿಲ್ 18ರಂದು 2,73,810, ಏಪ್ರಿಲ್ 19ರಂದು 2,59,170, ಏಪ್ರಿಲ್ 20ರಂದು 2,95,041, ಏಪ್ರಿಲ್ 21ರಂದು 3,14,835, ಏಪ್ರಿಲ್ 22ರಂದು 3,32,730, ಏಪ್ರಿಲ್ 23ರಂದು 3,46,786, ಏಪ್ರಿಲ್ 24ರಂದು 3,49,691, ಏಪ್ರಿಲ್ 25ರಂದು 3,52,991, ಏಪ್ರಿಲ್ 26ರಂದು 3,23,144, ಏಪ್ರಿಲ್ 27ರಂದು 3,60,960, ಏಪ್ರಿಲ್ 28ರಂದು 3,23,144, ಏಪ್ರಿಲ್ 29ರಂದು 3,86,452, ಏಪ್ರಿಲ್ 30ರಂದು 4,01,993, ಮೇ 1ರಂದು 3,92,488, ಮೇ 2ರಂದು 3,68,147, ಮೇ 3ರಂದು 3,57,229, ಮೇ 4ರಂದು 3,82,315, ‌ಮೇ 5ರಂದು 4,12,262 ಪ್ರಕರಣಗಳು, ಮೇ 6ರಂದು 4,14,188, ಮೇ 7ರಂದು 4,01,078, ಮೇ 8ರಂದು 4,03,738, ಮೇ 9ರಂದು 3,66,161, ಮೇ 10ರಂದು 3,29,942, ಮೇ 11ರಂದು 3,48,421, ಮೇ 12ರಂದು 3,62,727, ಮೇ 13ರಂದು 3,43,144,  ಮೇ 14ರಂದು 3,26,098, ಮೇ 15ರಂದು 3,11,170, ಮೇ 16ರಂದು 2,81,386, ಮೇ 17ರಂದು 2,63,533, ಮೇ 18ರಂದು 2,67,334, ಮೇ 19ರಂದು 2,76,070‌‌ ಹಾಗೂ ಮೇ 20ರಂದು 2,59,591 ಪ್ರಕರಣಗಳು ಪತ್ತೆಯಾಗಿದ್ದವು. ಮೇ 21ರಂದು 2,57,299 ಪ್ರಕರಣಗಳು ಕಂಡುಬಂದಿವೆ.
Published by:Sushma Chakre
First published: