HOME » NEWS » Coronavirus-latest-news » CORONAVIRUS LIVE UPDATES INDIA REPORTS 1 64 LAKH NEW COVID19 CASES 879 CORONAVIRUS DEATHS SCT DBDEL

Coronavirus Updates: ಭಾರತದಲ್ಲಿ ನಿನ್ನೆ ಒಂದೇ ದಿನ 1.61 ಲಕ್ಷ ಕೊರೋನಾ ಕೇಸ್, 879 ಸಾವು

Covid-19 India: ಬುಧವಾರದಿಂದ ದಿನ ಒಂದರಲ್ಲಿ ಒಂದೂಕಾಲು ಲಕ್ಷಕ್ಕೂ ‌ಹೆಚ್ಚು‌ ಕೊರೋನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಈಗ ದಿನ‌ ಒಂದರಲ್ಲಿ  ಒಂದೂವರೆ ಲಕ್ಷಕ್ಕೂ ಹೆಚ್ಚು  ಪ್ರಕರಣಗಳು ಕಂಡುಬರುವ ಟ್ರೆಂಡ್ ಮುಂದುವರೆದಿದೆ.

news18-kannada
Updated:April 13, 2021, 10:18 AM IST
Coronavirus Updates: ಭಾರತದಲ್ಲಿ ನಿನ್ನೆ ಒಂದೇ ದಿನ 1.61 ಲಕ್ಷ ಕೊರೋನಾ ಕೇಸ್, 879 ಸಾವು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ, ಏ.‌ 13: ಭಾರತದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಕಳೆದ ಭಾನುವಾರದಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದರು. ಬುಧವಾರದಿಂದ ದಿನ ಒಂದರಲ್ಲಿ ಒಂದೂಕಾಲು ಲಕ್ಷಕ್ಕೂ ‌ಹೆಚ್ಚು‌ ಕೊರೋನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಈಗ ದಿನ‌ ಒಂದರಲ್ಲಿ  'ಒಂದೂವರೆ ಲಕ್ಷಕ್ಕೂ ಹೆಚ್ಚು  ಪ್ರಕರಣಗಳು ಕಂಡುಬರುವ ಟ್ರೆಂಡ್' ಮುಂದುವರೆದಿದೆ.

ಸೋಮವಾರ 1,61,736 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 97,168 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,36,89,453ಕ್ಕೆ ಏರಿಕೆ ಆಗಿದೆ.‌ ಸೋಮವಾರ ಒಂದೇ ದಿನ ಕೊರೋನಾಗೆ 879 ಜನರು ಬಲಿ ಆಗಿದ್ದಾರೆ. ಸದ್ಯ ಮಹಾಮಾರಿ ಕೊರೋನಾಗೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,71,058ಕ್ಕೆ ಏರಿಕೆ ಆಗಿದೆ.

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಕೆಲಸವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುತ್ತದೆ. ಈವರೆಗೆ ದೇಶಾದ್ಯಂತ ಒಟ್ಟು 10,85,33,085 ಜನರಿಗೆ ಲಸಿಕೆ ಹಾಕಲಾಗಿದೆ. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಎಲ್ಲರಿಗೂ ಕೊರೋನಾ ಲಸಿಕೆ ಹಾಕಲಾಗುತ್ತಿದೆ. ಏಪ್ರಿಲ್ 11ರಿಂದ ಕೊರೋನಾ ಲಸಿಕೆ ಹಾಕುವ 'ಟಿಕಾ ಉತ್ಸವ'ವನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Coronavirus Vaccine: ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ ಲಭ್ಯ; ರಷ್ಯಾ ಮೂಲದ ಸ್ಪುಟ್ನಿಕ್ ಲಸಿಕೆ ಬಳಕೆಗೆ DCGI ಅನುಮತಿ

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು. ಆದರೆ ಈಗ ಎರಡನೇ ಅಲೆ ಶುರುವಾದ ಮೇಲೆ ಇದೇ ಮೊದಲ ಬಾರಿಗೆ ಏಪ್ರಿಲ್ 4ರಂದು 1,03,558 ಪ್ರಕರಣಗಳು ಪತ್ತೆಯಾಗಿದ್ದವು. ಏಪ್ರಿಲ್ ‌6ರಂದು 1,15,736, ಏಪ್ರಿಲ್ 7ರಂದು 1,26,789, ಏಪ್ರಿಲ್ 8ರಂದು 1,31,968, ಏಪ್ರಿಲ್ 9ರಂದು 1,45,384, ಏಪ್ರಿಲ್ 10ರಂದು 1,52,879 ಹಾಗೂ ಏಪ್ರಿಲ್ 11ರಂದು 1,68,912 ಪ್ರಕರಣಗಳು ಕಂಡುಬಂದಿದ್ದವು. ಈಗ ಏಪ್ರಿಲ್ 12ರಂದು 1,61,736 ಹೊಸ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇಕಡಾ 90ರಷ್ಟು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಕೇರಳ, ಛತ್ತೀಸ್​ಗಢ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಂಡು ಬರುತ್ತಿವೆ.
Published by: Sushma Chakre
First published: April 13, 2021, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories