ನವದೆಹಲಿ, ಜೂ. 2: ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿದ್ದ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗುವ ಲಕ್ಷಣಗಳು ಗೋಚರಿಸತೊಡಗಿವೆ. ಪ್ರತಿ ದಿನ ದಾಖಲಾಗುವ ಸಂಖ್ಯೆ, ಸಾಯುವವರ ಸಂಖ್ಯೆ ಇಳಿಕೆ ಆಗಿರುವುದು ಮತ್ತು ಗುಣ ಆಗುವವರ ಸಂಖ್ಯೆ ಏರುಮುಖ ಆಗಿರುವುದು ಇಂಥದೊಂದು ಆಶಾವಾದ ಮೂಡಿಸಿದೆ. ನಿನ್ನೆ (ಜೂನ್ 1ರಂದು) ಕೊರೋನಾ ಸೋಂಕು, ಸಾವು, ಗುಣ ಆದವರ ಬಗೆಗೆ ದಾಖಲಾದ ಹೈಲೈಟ್ಸ್ ಅಂಕಿ ಅಂಶಗಳು ಈ ಕೆಳಕಂಡಂತಿವೆ.
* ದೇಶದಲ್ಲಿ ಕಳೆದ 54 ದಿನಗಳಲ್ಲಿ 1.32 ಲಕ್ಷದಷ್ಟು ಕಡಿಮೆ ಹೊಸ ಪ್ರಕರಣಗಳು ವರದಿ ಆಗಿವೆ. ನಿನ್ನೆ 1,32,788 ಪ್ರಕರಣಗಳು ಮಾತ್ರ ಪತ್ತೆ ಆಗಿವೆ.
* ಈವರೆಗೆ ದೇಶದಲ್ಲಿ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 2,81,75,044ಕ್ಕೆ ಏರಿಕೆಯಾಗಿದೆ.
* ನಿನ್ನೆ ಕೊರೋನಾದಿಂದ 3,207 ಜನರ ಸಾವನ್ನಪ್ಪಿದ್ದಾರೆ. ಈವರೆಗೆ ಕೊರೋನಾ ಮಹಾಮಾರಿಗೆ ಬಲಿ ಆದವರು 3,35,102 ಜನ.
* ನಿನ್ನೆ ಗುಣವಾದವರು 2,31,456 ಜನ. ಇದರಿಂದ ಈವರೆಗೆ ಗುಣ ಆದವರ ಸಂಖ್ಯೆ 2,61,79,085ಕ್ಕೆ ಏರಿದೆ.
* ದೇಶದಲ್ಲಿ ಇನ್ನು ಸಕ್ರೀಯವಾಗಿರುವ ಕೇಸುಗಳು 17,93,645. ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 1,01,875 ರಷ್ಟು ಕಡಿಮೆಯಾಗಿವೆ.
* ಇದು ಕೊರೋನಾ ಸೋಂಕು ಪೀಡಿತರ ಸಂಖ್ಯೆ ಇಳಿಮುಖವಾಗಿ ಸಾಗುತ್ತಿರುವ ಟ್ರೆಂಡ್ ಅನ್ನು ಸಾಬೀತುಪಡಿಸಿದೆ.
* ಆಕ್ಟಿವ್ ಕೇಸುಗಳ ಸಂಖ್ಯೆ 20 ಲಕ್ಷಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ 17,93,645ಕ್ಕೆ ತಲುಪಿದೆ.
* ಚೇತರಿಕೆಗಳು ಸತತ 20ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸಿದೆ. ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇಕಡಾ 92.48ಕ್ಕೆ ಹೆಚ್ಚಾಗಿದೆ.
* ಸಾಪ್ತಾಹಿಕ ಸಕಾರಾತ್ಮಕ ದರ ಪ್ರಸ್ತುತ ಶೇಕಡ 8.21ಕ್ಕೆ ಇಳಿದಿದೆ. ದೈನಂದಿನ ಸಕಾರಾತ್ಮಕತೆ ದರ ಶೇಕಡಾ 6.57ಕ್ಕೆ ಇಳಿದಿದೆ. ಸತತವಾಗಿ 9 ದಿನ ಶೇಕಡಾ 10 ಕ್ಕಿಂತ ಕಡಿಮೆ ಆಗಿದೆ.
* ಕೊರೋನಾ ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ. ಈವರೆಗೆ ಒಟ್ಟು 35 ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ.
* 21.85 ಕೋಟಿ ಡೋಸೇಜ್ ಅನ್ನು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನೀಡಲಾಗಿದೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ