Coronavirus Updates: ಭಾರತದಲ್ಲಿ ಮತ್ತೆ 2.76 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ

ಭಾರತದಲ್ಲಿ ಬುಧವಾರ 2,76,070‌ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,57,72,400ಕ್ಕೆ ಏರಿಕೆ ಆಗಿದೆ.‌

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಮೇ 20: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿದೆಯಾದರೂ ಇನ್ನೂ ಪ್ರತಿದಿನ ಸರಿ ಸುಮಾರು ಎರಡೂ ಮುಕ್ಕಾಲು ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಭಾರೀ ಇಳಿಮುಖ ಆಗಿಲ್ಲ.

ಭಾರತದಲ್ಲಿ ಬುಧವಾರ 2,76,070‌ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,57,72,400ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಬುಧವಾರ 3,874 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,87,122ಕ್ಕೆ ಏರಿಕೆ ಆಗಿದೆ. ಈವರೆಗೆ 2,23,55,440 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 31,29,878 ಆಕ್ಟಿವ್ ಕೇಸುಗಳಿವೆ.

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿ ಹೆಚ್ಚಾಗಿತ್ತು.

ಎರಡನೇ ಅಲೆ ಶುರುವಾದ ಮೇಲೆ ಮೇ 1ರಂದು 3,92,488, ಮೇ 2ರಂದು 3,68,147, ಮೇ 3ರಂದು 3,57,229, ಮೇ 4ರಂದು 3,82,315, ‌ಮೇ 5ರಂದು 4,12,262 ಪ್ರಕರಣಗಳು, ಮೇ 6ರಂದು 4,14,188, ಮೇ 7ರಂದು 4,01,078, ಮೇ 8ರಂದು 4,03,738, ಮೇ 9ರಂದು 3,66,161, ಮೇ 10ರಂದು 3,29,942, ಮೇ 11ರಂದು 3,48,421, ಮೇ 12ರಂದು 3,62,727, ಮೇ 13ರಂದು 3,43,144,  ಮೇ 14ರಂದು 3,26,098, ಮೇ 15ರಂದು 3,11,170, ಮೇ 16ರಂದು 2,81,386, ಮೇ 17ರಂದು 2,63,533 ಹಾಗೂ ಮೇ 18ರಂದು 2,67,334 ಪ್ರಕರಣಗಳು ಪತ್ತೆಯಾಗಿದ್ದವು. ಮೇ 19ರಂದು 2,76,070‌ ಪ್ರಕರಣಗಳು ಕಂಡುಬಂದಿವೆ.
Published by:Sushma Chakre
First published: