ಕೊರೋನಾ ಬಿಕ್ಕಟ್ಟು: ಏಮ್ಸ್​ಗೆ 15 ಸಾವಿರ ಮಾಸ್ಕ್​​​ ನೀಡಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ

114 ಜನರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದು, ದೇಶಾದ್ಯಂತ 4,421 ಜನರಿಗೆ ಸೋಂಕು ತಗುಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಏ.07): ಕೊವೀಡ್​ 19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡಲು ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್​) ಎನ್​​​ 95ನ  15 ಸಾವಿರ ಮಾಸ್ಕ್​​​ಗಳನ್ನು ನೀಡಿದ್ದಾರೆ. 

  ದೇಶಾದ್ಯಂತ 4,421 ಜನರಿಗೆ ಕೊರೋನಾ ಸೋಂಕು ತಗುಲಿದ್ದು,  ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವಾಗಲು ಅವರು ಈ ಹಿಂದೆ ಪ್ರಧಾನ ಮಂತ್ರಿ ನಾಗರಿಕರ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ಹಣವನ್ನು ಕೂಡ ನೀಡಿದ್ದರು.

  ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಇಂದು ರಕ್ಷಣಾತ್ಮಕ ಬಳಕೆಗಾಗಿ 25 ಲಕ್ಷ ರೂ ಮೊತ್ತದ 15,000 ಎನ್ 95 ಮಾಸ್ಕ್​​ಗಳನ್ನು ಏಮ್ಸ್ ಗೆ ಸರಬರಾಜು ಮಾಡಿಸುತ್ತಿದ್ದೇನೆ. ಏಮ್ಸ್ ಗೆ ನಾಲ್ಕೈದು ದಿನಗಳಲ್ಲಿ ಇವುಗಳ ಸರಬರಾಜು ಮಾಡಲಾಗುವುದು ಎಂದು ದ್ವಿವೇದಿ ಮಂಗಳವಾರ ತಿಳಿಸಿದ್ದಾರೆ.

  ಏಮ್ಸ್ ಜೊತೆ ಸಮಾಲೋಚಿಸಿ ಈ ಕ್ರಮ ಕೈಗೊಳ್ಳಲಾಗಿದೆ. 114 ಜನರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದು, ದೇಶಾದ್ಯಂತ 4,421 ಜನರಿಗೆ ಸೋಂಕು ತಗುಲಿದೆ.

  ಪ್ರಾಣಾಪಾಯ ಲೆಕ್ಕಿಸದೇ ಜನರ ರಕ್ಷಣೆಗೆ ಕೆಲಸ ಮಾಡುತ್ತಿರವ ವೈದ್ಯಕೀಯ ವರ್ಗಕ್ಕೆ ಇದು ಒಂದು ಸಣ್ಣ ಸಹಾಯವಾಗಿದೆ. ಚಪ್ಪಾಳೆ ಮತ್ತು ದೀಪಗಳನ್ನು ಮೀರಿ ಮುನ್ನಡೆಯೋಣ. ಈ ರೀತಿಯಾಗಿ ನಾಗರಿಕ ಯೋಧರಾಗಬಹುದು. ನಿಮ್ಮ ಹತ್ತಿರದ ಆಸ್ಪತ್ರೆಗಳಿಗೆ ಸಹಾಯ ಮಾಡಿ ಎಂದು ದ್ವಿವೇದಿ ಮನವಿ ಮಾಡಿದ್ದಾರೆ.

  ಇದನ್ನೂ ಓದಿ : ಲಾಕ್ ಡೌನ್​ಗೆ ಚಾಮರಾಜನಗರದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ - ಎಗ್ಗಿಲ್ಲದೆ ಸಂಚರಿಸುತ್ತಿರುವ ವಾಹನಗಳು

  ಬಡ ಜನರು ಮತ್ತು ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಗಂಭೀರವಾಗಿದೆ. ಜನರು ಪ್ರಧಾನ ಮಂತ್ರಿಯ ನಿಧಿಗೆ ದೇಣಿಗೆ ನೀಡುವ ಮೂಲಕ ಅವರಿಗೆ ಸಹಾಯ ಮಾಡಲು ಮುಂದೆ ಬರಬೇಕು ಎಂದರು.
  First published: