• Home
  • »
  • News
  • »
  • coronavirus-latest-news
  • »
  • ಕೊರೋನಾಗೆ ವಿಶ್ವಾದ್ಯಂತ 64,729 ಜನ ಬಲಿ; ಭಾರತದಲ್ಲಿ ಸೋಂಕಿತರ ಸಂಖ್ಯೆ 3,313ಕ್ಕೆ ಏರಿಕೆ

ಕೊರೋನಾಗೆ ವಿಶ್ವಾದ್ಯಂತ 64,729 ಜನ ಬಲಿ; ಭಾರತದಲ್ಲಿ ಸೋಂಕಿತರ ಸಂಖ್ಯೆ 3,313ಕ್ಕೆ ಏರಿಕೆ

ಇನ್ನೂ ಮಾರಣಾಂತಿಕ ಕೊರೋನಾ ವೈರಸ್ನಿಂದ ಗುಣಮುಖರಾದ ಕೆಲವರಿಗೆ ಮತ್ತೆ ಈ ಸೋಂಕು ತಗುಲುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಯಾವರೀತಿ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದು ನೋಡಬೇಕಿದೆ.

ಇನ್ನೂ ಮಾರಣಾಂತಿಕ ಕೊರೋನಾ ವೈರಸ್ನಿಂದ ಗುಣಮುಖರಾದ ಕೆಲವರಿಗೆ ಮತ್ತೆ ಈ ಸೋಂಕು ತಗುಲುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಯಾವರೀತಿ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದು ನೋಡಬೇಕಿದೆ.

ಜಗತ್ತಿನಲ್ಲಿ ಈಗಾಗಲೇ 260 ಕೋಟಿಗೂ ಅಧಿಕ ಜನರು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಪ್ರಮಾಣ 5 ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. 

  • Share this:

ನವದೆಹಲಿ (ಏ. 5): ಕೊರೋನಾ ವೈರಸ್ ದಾಳಿಗೆ ಇಡೀ ಜಗತ್ತೇ ನಲುಗಿ ಹೋಗಿದೆ. ವಿಶ್ವದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 64,729ಕ್ಕೆ ಏರಿಕೆಯಾಗಿದ್ದು, 12,02,242 ಜನರು ಸೋಂಕಿಗೆ ಒಳಗಾಗಿದ್ದಾರೆ.


ಭಾರತದಲ್ಲಿ ಕೊರೋನಾ ವೈರಸ್​ನಿಂದ ಇದುವರೆಗೂ 77 ಜನರು ಸಾವನ್ನಪ್ಪಿದ್ದು, 3,313 ಜನರಿಗೆ ಸೋಂಕು ತಗುಲಿದೆ. ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಕೊರೋನಾ ವೈರಸ್ ಆರ್ಭಟಕ್ಕೆ ಅಮೆರಿಕ ತಲ್ಲಣಗೊಂಡಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 3,11,635ಕ್ಕೆ ಏರಿಕೆಯಾಗಿದೆ. ಇವರಲ್ಲಿ 8,454 ಜನರು ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: ಒಮ್ಮೆಲೇ ದೇಶಾದ್ಯಂತ ಲೈಟ್ಸ್​​ ಆಫ್ ಮಾಡುವುದರಿಂದ ವಿದ್ಯುತ್​​ ಪ್ರಸರಣ ಸಮಸ್ಯೆಯಾಗಲ್ಲ: ಕೇಂದ್ರ ಸರ್ಕಾರ


ಜಗತ್ತಿನಲ್ಲಿ ಈಗಾಗಲೇ 260 ಕೋಟಿಗೂ ಅಧಿಕ ಜನರು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಪ್ರಮಾಣ 5 ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಭಾರತ ಸೇರಿದಂತೆ ಇಟಲಿ, ಫ್ರಾನ್ಸ್​, ಇಂಗ್ಲೆಂಡ್, ಸ್ಪೇನ್, ಚೀನಾ ಮುಂತಾದ ಹಲವು ರಾಷ್ಟ್ರಗಳಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.


ಇದನ್ನೂ ಓದಿ: ದೇಶವೇ ಸಂಕಷ್ಟದಲ್ಲಿರುವಾಗ ಅಕಾಲಿಕ ದೀಪಾವಳಿ ಬೇಕಿತ್ತಾ?; ಬಿಜೆಪಿಗೆ ಎಚ್​.ಡಿ. ಕುಮಾರಸ್ವಾಮಿ ಪ್ರಶ್ನೆ

Published by:Sushma Chakre
First published: