Coronavirus Koppal Updates: ಮಧ್ಯಾಹ್ನ 2ರ ನಂತರ ಕೊಪ್ಪಳ, ಕುಷ್ಟಗಿ ಸ್ವಯಂ ಪ್ರೇರಿತ ಲಾಕ್‌ಡೌನ್!

ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ಮುಂದಾಗಿರುವುದು ಸರಿ. ಆದರೆ ಇದು ಸರಕಾರದ ಆದೇಶ ಅಲ್ಲ. ಜನರ ಹಿತದೃಷ್ಟಿಯಿಂದ ಜನರೇ ಜಾಗೃತರಾಗುವುದು ಉತ್ತಮ ಬೆಳವಣಿಗೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ.

news18-kannada
Updated:July 8, 2020, 7:41 AM IST
Coronavirus Koppal Updates: ಮಧ್ಯಾಹ್ನ 2ರ ನಂತರ ಕೊಪ್ಪಳ, ಕುಷ್ಟಗಿ ಸ್ವಯಂ ಪ್ರೇರಿತ ಲಾಕ್‌ಡೌನ್!
ಸಭೆ
  • Share this:
ಕೊಪ್ಪಳ(ಜು.08): ಎಲ್ಲೆಡೆ ಕೋವಿಡ್-19 ಅಬ್ಬರ ಜೋರಾಗಿದ್ದು, ಈ ಮಹಾಮಾರಿ ವೈರಸ್ ತೊಲಗುವ ಲಕ್ಷಣಗಳೇ ಕಾಣುತ್ತಿಲ್ಲ. ಈಗಾಗಲೇ ಲಾಕ್‌ಡೌನ್ ಅವಧಿ ಮುಗಿದಿದ್ದು, ವೈರಸ್ ಮತ್ತಷ್ಟು ಹೆಚ್ಚು ಜನರನ್ನು ಬಾಧಿಸುತ್ತಿದೆ. ಅದಕ್ಕೆ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಧರಿಸಲಾಗಿದೆ.

ಕೊಪ್ಪಳದ ನಗರಸಭೆಯಲ್ಲಿ ಮಂಗಳವಾರ ಶಾಸಕ ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ನಗರಸಭೆ ಸದಸ್ಯರು ಹಾಗೂ ವ್ಯಾಪಾರಸ್ಥರ ಸಭೆ ನಡೆಯಿತು. ಸಭೆಯಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಸುದೀರ್ಘ ಚರ್ಚೆ ನಡೆಯಿತು. ವ್ಯಾಪಾರಸ್ಥರು ಸ್ವಯಂಪ್ರೇರಿತ ಬಂದ್‌ಗೆ‌ ಬೆಂಬಲ ನೀಡಿದರು. ಹಾಗೆಯೇ ಪ್ರತಿ ತಿಂಗಳು ಮಳಿಗೆಗಳಿಗೆ ಅರ್ಧ ಬಾಡಿಗೆ ಪಡೆಯುವಂತೆ ಬೇಡಿಕೆ ಇಟ್ಟರು. ‌ಕೊನೆಗೂ ವ್ಯಾಪಾರಸ್ಥರ ಅರ್ಧ ಬಾಡಿಗೆ ವಿಚಾರ ಇತ್ಯರ್ಥವಾಗಲಿಲ್ಲ. ಆದರೆ ಜುಲೈ 8 ರಿಂದ 25ರವರೆಗೆ ಮಧ್ಯಾಹ್ನ 2 ರಿಂದ ಮರುದಿನ ಬೆಳಗ್ಗೆ 7 ಗಂಟೆವರೆಗೆ ಸ್ವಯಂ ಪ್ರೇರಿತವಾಗಿ ವ್ಯಾಪಾರ-ವಹಿವಾಟು ಬಂದ್ ಮಾಡಲು ನಿರ್ಧರಿಸಲಾಯಿತು.

ರೇಷ್ಮೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಡಿಕೆ ಸುರೇಶ್ ಆಗ್ರಹ; ಚೀನಾ ರೇಷ್ಮೆ ಗೂಡು ಆಮದು ನಿಲ್ಲಿಸಲು ಜನರ ಒತ್ತಾಯ

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲೂ ಸಹ ಮಂಗಳವಾರ ವಿವಿಧ ವ್ಯಾಪಾರಸ್ಥರ ಸಭೆ ನಡೆಯಿತು. ಕುಷ್ಟಗಿಯಲ್ಲೂ ಸಹ ಜುಲೈ 8 ರಿಂದ 25ರವರೆಗೆ ಮಧ್ಯಾಹ್ನ 2 ರಿಂದ ಬೆಳಗ್ಗೆ 2 ಗಂಟೆವರೆಗೆ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ನಿರ್ಣಯ ಕೈಗೊಳ್ಳಲಾಗಿದೆ. ಸ್ವಯಂ ಪ್ರೇರಿತ ಲಾಕ್‌ಡೌನ್ ಇಡೀ ವಿಧಾನಸಭಾ ಕ್ಷೇತ್ರಕ್ಕೆ ಅನ್ವಯವಾಗುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ನಗರ, ಪಟ್ಟಣ ಪ್ರದೇಶಗಳಲ್ಲಿ  ಅನ್ವಯವಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಇಂದು ನಿರ್ಧಾರ?

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕುಷ್ಟಗಿ‌ ಮತ್ತು ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಕನಕಪುರ ಮಾದರಿಯಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಮುಂದಾಗಿದ್ದಾರೆ. ಇನ್ನು ಬಿಜೆಪಿ  ಶಾಸಕರಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಸಂಬಂಧಿಸಿದಂತೆ ಬುಧವಾರ (ಜುಲೈ 8) ವ್ಯಾಪಾರಸ್ಥರ ಸಭೆ ನಡೆಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಗ್ಗೆ ಗುರು ಹಿರಿಯರ ಜೊತೆ ಮಾತನಾಡಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿರುವುದಾಗಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ತಿಳಿಸಿದರು.

ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ಮುಂದಾಗಿರುವುದು ಸರಿ. ಆದರೆ ಇದು ಸರಕಾರದ ಆದೇಶ ಅಲ್ಲ. ಜನರ ಹಿತದೃಷ್ಟಿಯಿಂದ ಜನರೇ ಜಾಗೃತರಾಗುವುದು ಉತ್ತಮ ಬೆಳವಣಿಗೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ.ಸ್ವಯಂಪ್ರೇರಿತ ಬಂದ್‌ನಲ್ಲಿ ಏನಿರುತ್ತೆ

ಸಾರಿಗೆ ಸಂಚಾರ, ಖಾಸಗಿ ವಾಹನಗಳ ಸಂಚಾರ, ಔಷಧಿ, ಸರಕಾರಿ ಕಚೇರಿ, ಪತ್ರಿಕೆ, ಹಾಲು-ಮೊಸರು, ಅಂಚೆ ಕಚೇರಿ, ಬ್ಯಾಂಕ್, ಆಟೋಮೊಬೈಲ್ಸ್ ಇತ್ಯಾದಿ.

ಸ್ವಯಂ ಪ್ರೇರಿತ ಬಂದ್‌ನಲ್ಲಿ ಏನಿರಲ್ಲ

ತರಕಾರಿ, ಹೂವು ಹಣ್ಣು, ಮದ್ಯ, ದಿನಸಿ ಅಂಗಡಿ, ಪಾನ್‌ಶಾಪ್, ಸಲೂನ್, ಬಟ್ಟೆ ಅಂಗಡಿ ಜೆರಾಕ್ಸ್, ಇಂಟರ್ನೆಟ್ ಸೆಂಟರ್, ಫರ್ನಿಚರ್ ಅಂಗಡಿ, ಮೆಟಲ್ ಸ್ಟೋರ್ಸ್ ಇತ್ಯಾದಿ.
Published by: Latha CG
First published: July 8, 2020, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading