Coronavirus Karnataka: ಕೊರೋನಾ 2ನೇ ಅಲೆಯಲ್ಲಿ ಯುವಕರೇ ಟಾರ್ಗೆಟ್​​​..!; ಈವರೆಗೆ ರಾಜ್ಯದಲ್ಲಿ 4488 ಯುವಕರ ಸಾವು

ಈವರೆಗೆ ಒಟ್ಟು 14.31 ಲಕ್ಷ ಯುವಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  ಕಳೆದ ಎರಡು ತಿಂಗಳಲ್ಲಿ 8.57 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್ ಲಕ್ಷಣಗಳ ಬಗ್ಗೆ ಉದಾಸೀನ ತೋರುತ್ತಿರುವುದೇ ಸೋಂಕು ಹಾಗೂ ಸಾವು ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಮೇ 23): ಮಹಾಮಾರಿ ಕೊರೋನಾ ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದ್ದು, ದಿನೇ ದಿನೇ ಸಾಯುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ಕೊರೋನಾ ಸೋಂಕಿನಿಂದ ಮೃತಪಡುತ್ತಿರುವವ ಸಂಖ್ಯೆ ಏರಿಕೆಯಾಗುತ್ತಿದೆ. ಮೊದಲು ನಗರ ಭಾಗಗಳಲ್ಲಿ ಮಾತ್ರ ಹರಡಿದ್ದ ಸೋಂಕು, ಕ್ರಮೇಣ ಹಳ್ಳಿಗಳಿಗೂ ಹಬ್ಬಿದ್ದು, ಜನರ ಜೀವ ಹಿಂಡುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಂತೂ ಸಾವಿನ ಕೂಪವಾಗಿ ಮಾರ್ಪಟ್ಟಿದೆ. ಪ್ರತಿದಿನ ನೂರಾರು ಮಂದಿ ಕೊರೋನಾದಿಂದ ಉಸಿರು ಚೆಲ್ಲುತ್ತಿದ್ದಾರೆ. ಈ ಎರಡನೇ ಅಲೆಯ ಆರ್ಭಟಕ್ಕೆ ಜನರು ನಲುಗಿದ್ದು, ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

  ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಕೊರೋನಾ ಎರಡನೇ ಅಲೆ ಹೆಚ್ಚಾಗಿ ಯುವಕರನ್ನೇ ಟಾರ್ಗೆಟ್ ಮಾಡ್ತಿದೆ. ಮೊದಲ ಅಲೆಯಲ್ಲಿ ವಯಸ್ಸಾದವರು ಸಾವನ್ನಪ್ಪುತ್ತಿದ್ದರೆ, ಈ 2ನೇ ಅಲೆಯಲ್ಲಿ ಯುವಕರೇ ಸಾವಿನ ದಾರಿ ಹಿಡಿಯುತ್ತಿದ್ದಾರೆ. ಅಂದಹಾಗೆ ಈ ವರ್ಷ ಬಂದಿರುವ ಈ ಎರಡನೇ ಅಲೆಗೆ ಬಲಿಯಾದ ಯುವಕರ ಸಂಖ್ಯೆ ಎಷ್ಟು ಗೊತ್ತಾ? ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

  ಕಳೆದ ಎರಡು ತಿಂಗಳಲ್ಲಿ  ಬರೋಬ್ಬರಿ 2500 ಯುವಕರು ಮಾರಕ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಹೌದು, ಇದು ಬೆಚ್ಚಿಬೀಳಿಸುವ ಅಂಕಿ-ಅಂಶವಾಗಿದ್ದು, ಮುಖ್ಯವಾಗಿ ಯುವಕರು ಜಾಗ್ರತೆಯಿಂದ ಇರಬೇಕಾಗಿದೆ. ಈವರೆಗೆ 20-49 ವರ್ಷದ 4488 ಯುವಕರು ಕೊರೋನಾದಿಂದ ಉಸಿರು ಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ.

  ಇದನ್ನೂ ಓದಿ:Tamil Nadu: ಲಾಕ್‌ಡೌನ್‌ ಅವಧಿಯಲ್ಲಿ ಸ್ಯಾನಿಟೈಸರ್‌ನಿಂದ ಆಲ್ಕೋಹಾಲ್ ತಯಾರಿಸಿದ 6 ಜನರ ಬಂಧನ

  ಇನ್ನು, ಈವರೆಗೆ ಒಟ್ಟು 14.31 ಲಕ್ಷ ಯುವಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  ಕಳೆದ ಎರಡು ತಿಂಗಳಲ್ಲಿ 8.57 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್ ಲಕ್ಷಣಗಳ ಬಗ್ಗೆ ಉದಾಸೀನ ತೋರುತ್ತಿರುವುದೇ ಸೋಂಕು ಹಾಗೂ ಸಾವು ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗ್ತಿದೆ. ಚಿಕಿತ್ಸೆ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದೇ ಸಾವಿಗೆ ಕಾರಣವಾಗ್ತಿದೆ ಎಂದು ಯುವಕರ ಸಾವಿನ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ.

  ಮಾರ್ಚ್ 17 ರಿಂದ ಮೇ 19 ರ ಅವಧಿಯಲ್ಲಿ  ಯುವಕರಲ್ಲಿ ಸೋಂಕಿನ ಪ್ರಮಾಣ ಶೇ.60 ರಷ್ಟು ದಾಖಲಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಯುವಕರ ಒಟ್ಟು ಮರಣ ದರ ಶೇ.0.31 ರಷ್ಟಿದೆ.  ಕಳೆದ ಎರಡು ತಿಂಗಳಿನಲ್ಲಿ‌ ಮರಣ ದರ ಶೇ 0.29 ರಷ್ಟಿದೆ.

  ಯುವಕರಲ್ಲಿ ಹೆಚ್ಚು ಸಾವು ಕಾಣಿಸಿಕೊಳ್ಳಲು ಕಾರಣವೇನು?

  • ಲಸಿಕೆಗೆ ಇನ್ನು ಅವಕಾಶ ಸಿಗದೇ ಇರುವುದು.

  • ಯುವಕರು ಹೆಚ್ಚು ಆರೋಗ್ಯ ನಿರ್ಲಕ್ಷ ಮಾಡುತ್ತಿರುವುದು.

  • ಆರೋಗ್ಯ ಹೆಚ್ಚು ಹದಗೆಟ್ಟಾಗ ಆಸ್ಪತ್ರೆಗಳಿಗೆ ಹೋಗುತ್ತಿರುವುದು.

  • ಕೋವಿಡ್ ಪಾಸಿಟೀವ್ ಬಂದಾಗಲೂ ನಿರ್ಲಕ್ಷ ವಹಿಸುತ್ತಿರುವುದು.

  • ಆಮ್ಲಜನಕ ಮಟ್ಟವನ್ನ ಪರೀಕ್ಷಿಸದೇ ಇರುವುದು.

  Published by:Latha CG
  First published: