HOME » NEWS » Coronavirus-latest-news » CORONAVIRUS KARNATAKA KARNATAKA GOVERNMENT WRITES A LETTER TO CENTRAL GOVERNMENT TO PROVIDE SUFFICIENT OXYGEN LG

Coronavirus Karnataka: ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಸುವಂತೆ ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ

ಪ್ರಸ್ತುತ ರಾಜ್ಯಕ್ಕೆ ಕೇಂದ್ರ ಸರ್ಕಾರ 300 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುತ್ತಿದೆ.  ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗ ಪೂರೈಕೆ ಮಾಡಲು ಇದು ಸಾಲುತ್ತಿಲ್ಲ. ರಾಜ್ಯದ 7 ಮೆಡಿಕಲ್ ಕಾಲೇಜುಗಳಿಂದ ಪ್ರತಿದಿನ 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ

news18-kannada
Updated:April 20, 2021, 11:42 AM IST
Coronavirus Karnataka: ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಸುವಂತೆ ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
  • Share this:
ಬೆಂಗಳೂರು(ಏ.20): ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಅಕ್ಷರಶಃ ಜನರ ಬದುಕು ನರಕವಾಗಿದೆ.  ಬೆಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ಬೆಡ್​ ಸಿಗದೆ, ಆಕ್ಸಿಜನ್ ಕೊರತೆಯಿಂದಾಗಿ ಜನರು ಕೊರೋನಾದಿಂದ ಉಸಿರು ಚೆಲ್ಲುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಆದರೆ ಸರ್ಕಾರ ಮಾತ್ರ ಇನ್ನೂ ಸಹ ಯಾವುದೇ ಕಠಿಣ ನಿಯಮಗಳನ್ನು ಜಾರಿ ಮಾಡಿಲ್ಲ. ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಕೊರತೆ ಎದುರಾಗಿದೆ. ಹೀಗಾಗಿ ಪ್ರಾಣವಾಯು ಕೊರತೆಯಿಂದಾಗಿ ಅನೇಕ ಕೋವಿಡ್​ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಆಕ್ಸಿಜನ್​ ಪೂರೈಸುವಂತೆ  ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ. ಸಿಎಂ ಬಿಎಸ್​ ಯಡುಯೂರಪ್ಪನವರ ಸೂಚನೆ ಮೇರೆಗೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆನ್ನಲಾಗಿದೆ. ಪ್ರಸ್ತುತ ರಾಜ್ಯಕ್ಕೆ ಕೇಂದ್ರ ಸರ್ಕಾರ 300 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುತ್ತಿದೆ.  ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗ ಪೂರೈಕೆ ಮಾಡಲು ಇದು ಸಾಲುತ್ತಿಲ್ಲ.

ರಾಜ್ಯದ 7 ಮೆಡಿಕಲ್ ಕಾಲೇಜುಗಳಿಂದ ಪ್ರತಿದಿನ 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ನಿನ್ನೆಗೆ 300 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜಾಗಿದೆ. ಪ್ರತಿದಿನ ರೋಗಿಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ.  ಆಸ್ಪತ್ರೆಯಲ್ಲಿ ಆಕ್ಸಿಜನ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಪ್ರತಿದಿನ ಸದ್ಯದ ಪರಿಸ್ಥಿತಿಯಲ್ಲಿ1100 ಟನ್ ಆಕ್ಸಿಜನ್ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಕ್ಸಿಜನ್ ಒದಗಿಸವಂತೆ ಕೇಂದ್ರಕ್ಕೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಕಠಿಣ ಕ್ರಮ ಜಾರಿಗೆ ಜನರ ನಿರ್ಲಕ್ಷ್ಯವೇ ಕಾರಣ; ಆರೋಗ್ಯ ಸಚಿವ ಸುಧಾಕರ್​ ಬೇಜವಾಬ್ದಾರಿ ಹೇಳಿಕೆ?

ಆಕ್ಸಿಜನ್ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಎಡವಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ, ವಿಶೇಷವಾಗಿ ಸಣ್ಣ ಆಸ್ಪತ್ರೆಗಳಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದೆ. ವೈದ್ಯಕೀಯ ದರ್ಜೆಯ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಹರಸಾಹಸ ಪಡುತ್ತಿದ್ದಾರೆ.  ಜೊತೆಗೆ ಆಕ್ಸಿಜನ್ ಸರಬರಾಜು ಮತ್ತು ವಿತರಣೆ ಸುಗಮಗೊಳಿಸಲು ರಾಜ್ಯ ಸರ್ಕಾರ ಹರಸಾಹಸ ಪಡಲಾಗುತ್ತಿದೆ.

ಸದ್ಯ 94 ಟ್ಯಾಂಕರ್​ಗಳಿದ್ದು, ಅವುಗಳಲ್ಲಿ 45 ಆಕ್ಸಿಜನ್ ಸರಬರಾಜು ಮಾಡುತ್ತಿದೆ.  ಆಕ್ಸಿಜನ್ ಪೂರೈಕೆಗಾಗಿ ಇನ್ನೂ ಕೆಲವು ಟ್ಯಾಂಕರ್​ಗಳನ್ನು ಪುನಃ ಅಳವಡಿಸಬೇಕಾಗಿದೆ. ಕರ್ನಾಟಕ ಏಳು ಆಕ್ಸಿಜನ್ ಘಟಕಗಳನ್ನು ಹೊಂದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ನಾಲ್ಕು - ಏರ್ ವಾಟರ್ ಇಂಡಿಯಾ (ಹಿಂದೆ ಲಿಂಡೆ ಇಂಡಿಯಾ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು), ಜೆಎಸ್‍ಡಬ್ಲ್ಯೂ ಇಂಡಸ್ಟ್ರಿಯಲ್ ಗ್ಯಾಸ್ ಪ್ರೈವೇಟ್ ಲಿಮಿಟೆಡ್, ಪ್ರಾಕ್ಸೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಬಳ್ಳಾರಿ ಆಕ್ಸಿಜನ್ ಕಂಪನಿ, ಯೂನಿವರ್ಸಲ್ ಏರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಭೋರುಕಾ ಗ್ಯಾಸ್ ಲಿಮಿಟೆಡ್ ಬೆಂಗಳೂರಿನಲ್ಲಿವೆ ಮತ್ತು ಪ್ರಾಕ್ಸೇರ್ ಕೊಪ್ಪಲ್‍ನಲ್ಲಿ ಮತ್ತೊಂದು ಸ್ಥಾವರ ಹೊಂದಿದೆ.
ಕೇಂದ್ರವು ಆಕ್ಸಿಜನ್ ಪೂರೈಕೆಗೆ ಸಹಾಯ ಮಾಡುತ್ತಿಲ್ಲ ಎಂದು ಮಹಾರಾಷ್ಟ್ರ ಆರೋಪ ಮಾಡಿದೆ. ಆದರೆ ಕರ್ನಾಟಕದಿಂದ ತನ್ನ ಕೋಟಾ ಆಕ್ಸಿಜನ್ ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ.
Published by: Latha CG
First published: April 20, 2021, 11:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories