COVID-19 Karnataka: ಗ್ರಾಮಗಳಲ್ಲಿ ವೇಗವಾಗಿ ಹರಡ್ತಿದೆ ಕೊರೋನಾ 3ನೇ ಅಲೆ! ಟಾಪ್ 20 ಡೇಂಜರ್ ಹಳ್ಳಿಗಳ ಪಟ್ಟಿ ಇಲ್ಲಿದೆ

282 ಹಳ್ಳಿಗಳು ಹಾಗೂ 148 ನಗರ ಪಟ್ಟಣಗಳಲ್ಲಿ ಹೆಚ್ಚಿದ ಸೋಂಕಿನ ಆರ್ಭಟಕ್ಕೆ ತತ್ತರಿಸಿ ಹೋಗ್ತಿವೆ. ಇವುಗಳ ಪೈಕಿ ಟಾಪ್ 20 ಹಳ್ಳಿಗಳ ಲಿಸ್ಟ್ ಮಾಡಿದ್ದು ಇವುಗಳು ಡೇಂಜರ್ ಹಂತದಲ್ಲಿವೆ ಎಂದು ಹೇಳಲಾಗ್ತಿದೆ.

ಕೊರೋನಾ ವೈರಸ್

ಕೊರೋನಾ ವೈರಸ್

  • Share this:
ಮೂರನೇ ಅಲೆಯ ಆರಂಭದಲ್ಲೇ (3rd Wave) ಕೊರೋನಾ (Corona) ಹಳ್ಳಿಗಳಿಗೆ ಟೆನ್ಷನ್ ನೀಡ್ತಿದೆ. ಹೆಚ್ಚು ಜನರು ಇರೋ ಸಿಟಿಗಳಲ್ಲಿ ಕೊರೋನಾ ಸ್ಫೋಟವಾಗ್ತಿರೋದು ಒಂದು ಕಡೆ ಆದ್ರೆ, ಇದೀಗ ರಾಜ್ಯದ ಹಳ್ಳಿ ಹಳ್ಳಿಗೂ (Villages) ಈ ಕೋವಿಡ್ ಸ್ಪ್ರೆಡ್ ಆಗ್ತಿದೆ. ಇಡೀ ರಾಜ್ಯಕ್ಕೆ ವೇಗವಾಗಿ ಕೊರೋನಾ ಸೋಂಕು ಹರಡ್ತಿದೆ. ಈಗಾಗ್ಲೇ ರಾಜ್ಯದಲ್ಲಿ ನಿತ್ಯ 20 ಸಾವಿರ ಪಾಸಿಟಿವ್ ಕೇಸ್‌ಗಳು ಬರ್ತಿದ್ದು, ಕೆಲವೊಂದು ನಗರ ಪಟ್ಟಣಗಳ ಜೊತೆ ಹಲವು ಹಳ್ಳಿಗಳೂ ಇದೀಗ ಡೇಂಜರ್ ಆಗ್ತಿವೆ. ಈ ಅಪಾಯಕಾರಿ ಅಂಶವನ್ನು ಆರೋಗ್ಯ ಇಲಾಖೆ (Health Department) ಬಿಚ್ಚಿಟ್ಟಿದೆ.

ಆರೋಗ್ಯ ಇಲಾಖೆಯ ಈ  ರಿಪೋರ್ಟ್ ಪ್ರಕಾರ ರಾಜ್ಯದ‌ 30 ಜಿಲ್ಲೆಗಳ ಪೈಕಿ ಸುಮಾರು 282 ಹಳ್ಳಿಗಳಲ್ಲಿ ನಿತ್ಯ ಸೋಂಕು ಹೆಚ್ಚಳವಾಗ್ತಿದೆ. ಕಳೆದ‌ ನಾಲ್ಕು ವಾರಗಳಿಂದ ಸೋಂಕಿತರ ಸಂಖ್ಯೆ ನಿರಂತರ ಏರಿಕೆ ಕಂಡು ಬಂದಿದ್ದು, ರಾಜ್ಯದಲ್ಲಿ 274 ನಗರ-ಪಟ್ಟಣಗಳಿದ್ದು 148 ನಗರ ಪಟ್ಟಣಗಳಲ್ಲಿ ಸೋಂಕು ಏರಿಕೆಯಾಗಿದೆ. 282 ಹಳ್ಳಿಗಳು ಹಾಗೂ 148 ನಗರ ಪಟ್ಟಣಗಳಲ್ಲಿ ಹೆಚ್ಚಿದ ಸೋಂಕಿನ ಆರ್ಭಟಕ್ಕೆ ತತ್ತರಿಸಿ ಹೋಗ್ತಿವೆ. ಇವುಗಳ ಪೈಕಿ ಟಾಪ್ 20 ಹಳ್ಳಿಗಳ ಲಿಸ್ಟ್ ಮಾಡಿದ್ದು ಇವುಗಳು ಡೇಂಜರ್ ಹಂತದಲ್ಲಿವೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: Coronavirus: ದೆಹಲಿ, ಮುಂಬೈನಲ್ಲಿ ಕೊರೋನಾ ಇಳಿಮುಖ, ಕುಸಿಯುತ್ತಿದೆಯಾ ಕೋವಿಡ್ ಟೆಸ್ಟ್ ಪ್ರಮಾಣ?

ಡೇಂಜರ್ ಹಂತದಲ್ಲಿರುವ ಆ ಟಾಪ್ 20 ಹಳ್ಳಿಗಳ ಲಿಸ್ಟ್

ಹಳ್ಳಿ   -  ಜಿಲ್ಲೆ  - ದಾಖಲಾದ ಕೇಸ್

1. ಗಿರಿಯಾಳ - ಬೆಳಗಾವಿ - 139

2. ಚಂತರು - ಉಡುಪಿ - 64

3. ಕಣ್ಣೂರು - ಬೆಂಗಳೂರು ನಗರ - 125

4. ಮೆಲ್ಲಹಳ್ಳಿ - ಮಂಡ್ಯ - 54

5. ಕೆ.ಜಿ ತರಳು - ಬೆಂಗಳೂರು - 51

6.ತಿಗಳಚೌಡೇನಹಳ್ಳಿ - ಬೆಂಗಳೂರು - 52

7. ಕೊಂಡಜ್ಜಿ - ದಾವಣಗೆರೆ - 48

8. ಕೆಂಚಟ್ಟವಳ್ಳಿ - ಹಾಸನ - 46

9. ರಾಮೋಹಳ್ಳಿ - ಬೆಂಗಳೂರು - 46

10. ರಿಸರ್ವರ್ಡ್ ಫಾರೆಸ್ಟ್ - ಚಾಮರಾಜನಗರ - 45

11.ಚೀಮಸಂದ್ರ - ಬೆಂಗಳೂರು - 44

12 .ಸೋಮನಹಳ್ಳಿ - ಬೆಂಗಳೂರು - 44

13.  ಸೋಲದೇವನಹಳ್ಳಿ - ಬೆಂಗಳೂರು - 40

14. ಹೆಸರಘಟ್ಟ -  ಬೆಂಗಳೂರು - 38

15.ಮಾಚೊಹಳ್ಳಿ - ಬೆಂಗಳೂರು ‌- 34

16. ತಾವರೆಕೆರೆ‌- ಬೆಂಗಳೂರು - 34

17. ಚಿನಕುರಳಿ - ಮಂಡ್ಯ - 36

18. ಆಲನಹಳ್ಳಿ - ಮೈಸೂರು - 34

19. ಬೂದಿಗೆರೆ - ಬೆಂಗಳೂರು - 33

20. ಹಾಲನಾಯಕನಹಳ್ಳಿ - ಬೆಂಗಳೂರು - 33



ಇದನ್ನೂ ಓದಿ: Coronavirus India: ದೇಶದಲ್ಲಿ ಒಂದೇ ದಿನ 2.50 ಲಕ್ಷ ಕೋವಿಡ್​​ ಕೇಸ್ ಪತ್ತೆ, ಪಾಸಿಟಿವಿಟಿ ದರವೂ ಶೇ.13ಕ್ಕೆ ಏರಿಕೆ

ರಾಜ್ಯ ಸರ್ಕಾರ ನಗರ ಪ್ರದೇಶಗಳ ಜೊತೆಗೆ ಹಳ್ಳಿಗಳ ಮೇಲೂ ಕೂಡಾ ಗಮನಹಿರಿಸಬೇಕಿದೆ. ಪ್ರಮುಖವಾಗಿ ಹಳ್ಳಿಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಹಾಗೂ ಅನೇಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗ್ತಿಲ್ಲ. ಆರೋಗ್ಯ ಕಾರ್ಯಕರ್ತರಿಂದ ಕೋವಿಡ್ ಟೆಸ್ಟ್ ಸರಿಯಾಗಿ ಮಾಡ್ಬೇಕಿದೆ‌. ಇದೆಲ್ಲದಕ್ಕಿಂತ ಪ್ರಮುಖವಾಗಿ ನಗರದಲ್ಲಿ ಹಳ್ಳಿಗಳಿಗೆ ತೆರಳುವ ಜನರನ್ನು ನಿಯಂತ್ರಣ ಮಾಡ್ಬೇಕಿದೆ. ಜೊತೆಗೆ ಹಳ್ಳಿಗಳಲ್ಲಿ ಕೊರೋನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡೋದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ, ಅಂತಿದ್ದಾರೆ ವೈದ್ಯರು.
Published by:Latha CG
First published: