HOME » NEWS » Coronavirus-latest-news » CORONAVIRUS IS THE SECOND COVID WAVE MORE DANGEROUS FOR KIDS SIGNS AND SYMPTOMS TO KNOW STG LG

ಕೊರೋನಾ ಮೊದಲನೆಯ ಅಲೆಗಿಂತಲೂ ಎರಡನೇ ಅಲೆ ವಿಭಿನ್ನ ಹೇಗೆ ಗೊತ್ತಾ..? ಇಲ್ಲಿದೆ ವಿವರ

ಈಗ ಮಕ್ಕಳು ಶಾಲೆಗೆ ತೆರಳುತ್ತಿರುವುದರಿಂದ ಮಕ್ಕಳಿಗೂ ವೈರಸ್​ನ ಭಯವಿದೆ. ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ಪ್ರಪಂಚದಾದ್ಯಂತದ ಹಲವಾರು ವೈದ್ಯರು ಮಕ್ಕಳಲ್ಲಿ ರೋಗಲಕ್ಷಣದ ಸೋಂಕಿನ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

news18-kannada
Updated:April 7, 2021, 3:46 PM IST
ಕೊರೋನಾ ಮೊದಲನೆಯ ಅಲೆಗಿಂತಲೂ ಎರಡನೇ ಅಲೆ ವಿಭಿನ್ನ ಹೇಗೆ ಗೊತ್ತಾ..? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
  • Share this:
2020 ರಲ್ಲಿ ಬಿಡುವಿಲ್ಲದಂತೆ ದುಡಿದಿದ್ದ ವೈದ್ಯಕೀಯ ಕುಟುಂಬ ಸೆಪ್ಟೆಂಬರ್​​ನಿಂದ ಕೊಂಚ ನೆಮ್ಮದಿಯನ್ನು ಕಾಣಲು ಆರಂಭಿಸಿತ್ತು. ನಿಧಾನವಾಗಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಇಳಿಮುಖವಾಗತೊಡಗಿತ್ತು. ಆದರೆ ಈ ವರ್ಷ ಮಾರ್ಚ್ 2021 ಮಾರ್ಚ್​ನಿಂದ ಕೊರೊನಾ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಡಾ. ಪಿಂಟೋ ಅವರ ಮನೆಯ ಫೋನ್ ಪ್ರತಿ ಕ್ಷಣವೂ ರಿಂಗಣಿಸುತ್ತಲೇ ಇದೆ. ಅಲ್ಲದೇ ಕೋವಿಡ್​ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್​ಗಳನ್ನು ಹುಡುಕುವುದರಲ್ಲೇ ಕುಟುಂಬಸ್ಥರು ಹೈರಾಣಾಗಿದ್ದಾರೆ. ಇದೆಲ್ಲರ ಜೊತೆಗೆ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಕೂಡ ಏರ್ಪಟ್ಟಿದೆ. ಒಟ್ಟಿನಲ್ಲಿ ಕೊರೊನಾ ಮೊದಲನೇ ಅಲೆಗಿಂತಲೂ ಎರಡನೇ ಅಲೆ ಭೀಕರವಾಗಿದೆ. ಇನ್ನು ಎರಡನೇ ಅಲೆಯಲ್ಲಿ ಸಾಕಷ್ಟು ಸೂಚನೆಗಳು ಕೂಡ ಭಿನ್ನವಾಗಿದೆ.

ಈ ಹಿನ್ನೆಲೆಯಲ್ಲಿ ಎರಡನೇ ಅಲೆಯ ಲಕ್ಷಣಗಳು ಹೇಗಿದೆ? ಇದಕ್ಕಿರೋ ಮುಂಜಾಗ್ರತ ಕ್ರಮಗಳೇನು? ಮುಖ್ಯವಾಗಿ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯಾರ ಬಗ್ಗೆ ಕಾಳಜಿವಹಿಸಲಾಗುತ್ತಿದೆ ಎಲ್ಲವನ್ನು ಗಮನಿಸೋಣ.

ಎರಡನೇ ಅಲೆಗೆ ತತ್ತರಿಸಿದ ಭಾರತ

ಕೊರೊನಾದಿಂದ ಸುಧಾರಿಸಿಕೊಳ್ಳುತ್ತಿದ್ದ ಭಾರತದಲ್ಲಿ ಕೋವಿಡ್ ಏರಿಕೆಯಾಗಿದ್ದು, ಭಾರತಕ್ಕೆ ಬಂದು ಅಪ್ಪಳಿಸಿದೆ. ಅಲ್ಲದೇ ಅನೇಕ ಸೋಂಕುಗಳಿಗೆ ಕಾರಣವಾಗಿದೆ. ಏಪ್ರಿಲ್​ 4 ರಂದು ಪ್ರಕರಣ ಒಂದು ಲಕ್ಷ ಗಡಿ ದಾಟಿರುವುದರಿಂದ ತಜ್ಞರು ಈಗ ಎರಡನೇ ಅಲೆಯ ಕಠಿಣ ಕ್ರಮದ ಬಗ್ಗೆ ಮಾತ್ರವಲ್ಲದೇ, ಅದರ ಪರಿಣಾಮದ ಬಗ್ಗೆಯೂ ಚಿಂತಿತರಾಗಿದ್ದಾರೆ.

ನಿಜವಾಗಿಯೂ ಕೋವಿಡ್ ಪ್ರಕರಣ ಹೆಚ್ಚಾಗಿದೆಯೇ..?

ಕೊರೊನಾ ಎರಡನೇ ಅಲೆ ಎಲ್ಲರಲ್ಲೂ ಆತಂಕವನ್ನು ಹೆಚ್ಚಿಸಿದೆ. ಅಲ್ಲದೇ ಎರಡನೇ ಅಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗಲಕ್ಷಣಗಳ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಸಹ ವರದಿಯನ್ನು ಸಿದ್ಧ ಮಾಡುತ್ತಿದ್ದಾರೆ.

ಈ ವಿಷಯ ನಿಮಗೆ ಗೊತ್ತಿರಲಿಅಪರೂಪದ ಲಕ್ಷಣಗಳಿಂದ ಹಿಡಿದು ಆಸ್ಪತ್ರೆಗೆ ದಾಖಲಾಗುವ ತನಕ ಗುಜರಾತ್​ನ ವೈದ್ಯಕೀಯ ಸಂಶೋಧನೆಗಳು ಕೋವಿಡ್​ನೊಂದಿಗೆ ಹೋರಾಡುತ್ತಲೇ ಇದೆ. ಇದು ಮೊದಲ ಅಲೆಗಿಂತ ಎರಡನೇ ಎಲೆ ಹೆಚ್ಚು ಪ್ರಖರವಾಗಿದೆ ಎನ್ನುವುದನ್ನು ಸೂಚಿಸುತ್ತಿದೆ.

ವಿಭಿನ್ನ ರೋಗ ಲಕ್ಷಣಗಳನ್ನು ತೋರಿಸುತ್ತಿರುವ ವೈರಸ್

ಬ್ರೆಜಿಲಿಯನ್ ಮತ್ತು ಯುಕೆ ರೂಪಾಂತರ ವೈರಸ್​ ಜೊತೆಗೆ ಕೋವಿಡ್​ - 19 ಸಾಕಷ್ಟು ಆಳವಾಗಿ ಪರಿಣಾಮ ಬೀರುತ್ತಿದೆ. ಹೆಚ್ಚು ರೋಗ ಲಕ್ಷಣಗಳನ್ನು ಬೀರುವ ಮೂಲಕ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಪರಿಣಾಮವನ್ನು ಬೀರುತ್ತಿದೆ. ಭಾರತದ ಕೆಲವು ಆಸ್ಪತ್ರೆಯ ಸಂಶೋಧನೆಗಳ ಪ್ರಕಾರ ಕೋವಿಡ್ 19 ಪಾಸಿಟಿವ್ ಜೊತೆಗೆ ಬೇರೆ ಬೇರೆ ವೈರಸ್​ಗಳು ಕೂಡ ರೋಗಿಗಳಲ್ಲಿ ಕಂಡು ಬರುತ್ತಿದೆ. ಗುಜರಾತ್ ವೈದ್ಯರು ಹೇಳುವ ಪ್ರಕಾರ ಹೊಟ್ಟೆನೋವು, ವಾಕರಿಕೆ, ವಾಂತಿ, ಶೀತ, ಜ್ವರ, ಕೆಮ್ಮು ಕೂಡ ಪರೀಕ್ಷೆಗೆ ಒಳಪಡುವಂತೆ ಮಾಡುತ್ತಿವೆ.

ಇನ್ಫೆಕ್ಷನ್​ ಗಂಭೀರವಾಗುತ್ತಿದೆಯೇ..?

ಕೆಲವು ಪ್ರಕರಣಗಳಲ್ಲಿ ಲಕ್ಷಣಗಳು ಇಲ್ಲದಿರಬಹುದು. ಕೊಮಾರ್ಬಿಡಿಟೀಸ್​ ಹೊಂದಿರುವ ರೋಗಿಗಳಿಗೆ ಇದು ಅಪಾಯವನ್ನು ತಂದೊಡ್ಡಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಸಮಸ್ಯೆಯಾಗಬಹುದು. ಮಹಾರಾಷ್ಟ್ರದಲ್ಲಿ ರೂಪಾಂತರಿ ವೈರಸ್​ಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ. ನ್ಯುಮೋನಿಯಾಗೂ ತಲುಪುತ್ತಿದೆ.

ಜಠರಕ್ಕೆ ಸಂಬಂಧಿಸಿದ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿರ್ಲಕ್ಷಿಸಬೇಡಿ

ಹಿಂದೆಂದಿಗಿಂತಲೂ ಈಗ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ದಾಖಲಾಗುತ್ತಿದ್ದು, ವೈರಸ್ ಎಸಿಇ2 ಜೀರ್ಣಾಂಗದಲ್ಲಿ ಬಲವಾಗಿ ಕೂರುತ್ತದೆ. ಈ ಕಾರಣದಿಂದ ಭೇದಿ, ಹೊಟ್ಟೆಯ ಸೆಳೆತ, ವಾಕರಿಕೆ, ನೋವು ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ.

ಹೆಚ್ಚಿನ ವೈರಲ್ ಲೋಡ್ ಕಾರಣವೇ..?

ವೈರಲ್ ಲೋಡ್ ವ್ಯಕ್ತಿಯ ರಕ್ತದ ಹರಿಯುವಿಕೆಯಲ್ಲಿರುವ ವೈರಸ್ (SARS-COV-2) ಸಾಂದ್ರತೆಯನ್ನು ಸೂಚಿಸುತ್ತದೆ. ಇದನ್ನು ಪರೀಕ್ಷೆಗಳಿಂದ ತಿಳಿದುಕೊಳ್ಳಬಹುದು. ಕೋವಿಡ್ ಸೋಂಕಿತರಲ್ಲಿ ಹೆಚ್ಚು ವೈರಲ್ ಲೋಡ್ ಕಂಡು ಬರುತ್ತಿದೆ. ಇನ್ಫೆಕ್ಷನ್ ಮತ್ತು ಪುನಃ ಇನ್ಫೆಕ್ಷನ್​ಗೆ ಒಳಗಾಗುವುದು ಸಾಮಾನ್ಯವಾಗಿದೆ.

ಆರೋಗ್ಯವಂತ ಜನರನ್ನು ವೈರಸ್ ಬಾಧಿಸುತ್ತಿದೆ

ಆರೋಗ್ಯವಂತ ಮತ್ತು ಶಕ್ತಿ ಕುಂದಿದವರು ಕೂಡ ವೈರಸ್​ಗೆ ತುತ್ತಾಗುತ್ತಿದ್ದಾರೆ. ನ್ಯುಮೋನಿಯಾಗೂ ಕಾರಣವಾಗುತ್ತಿದೆ.

ಮಕ್ಕಳನ್ನು ಬಿಡುತ್ತಿಲ್ಲವೇ ವೈರಸ್..?

ಈಗ ಮಕ್ಕಳು ಶಾಲೆಗೆ ತೆರಳುತ್ತಿರುವುದರಿಂದ ಮಕ್ಕಳಿಗೂ ವೈರಸ್​ನ ಭಯವಿದೆ. ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ಪ್ರಪಂಚದಾದ್ಯಂತದ ಹಲವಾರು ವೈದ್ಯರು ಮಕ್ಕಳಲ್ಲಿ ರೋಗಲಕ್ಷಣದ ಸೋಂಕಿನ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಮಕ್ಕಳಲ್ಲಿ ರೋಗಲಕ್ಷಣ ಕಾಣಿಸದಿರುವ ಸಾಧ್ಯತೆಗಳು ಇವೆ. ಮಲ್ಟಿ ಸಿಸ್ಟಮ್ಯಾಟಿಕ್ ಇನ್​ಫ್ಲಾಮೇಟರಿ ಸಿಂಡ್ರೋಮ್​ಗೂ ಮಕ್ಕಳು ತುತ್ತಾಗುತ್ತಿದ್ದಾರೆ.

ವ್ಯಾಕ್ಸಿನೇಷನ್ ಅಗತ್ಯವಿದೆ

ರೂಪಾಂತರಿ ವೈರಸ್​ಗೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಪರಿಣಾಮ ಬೀರುವುದಿಲ್ಲ ಎನ್ನುವ ಆತಂಕವಿದೆ. ಆದರೆ ವೈರಲ್ ಲೋಡ್, ರೋಗ ಲಕ್ಷಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.

ಮುಂಜಾಗ್ರತೆ

ಲಸಿಕೆ ಪಡೆದರೂ ಸಹ ಮುಂಜಾಗ್ರತಾ ಕ್ರಮವಿರಲಿ, ಕೈ ತೊಳೆಯುವುದು, ಸಾಮಾಜಿಕ ಅಂತರ ಪಾಲನೆ, ಮಾಸ್ಕ್​ ಧರಿಸುವುದನ್ನು ಮರೆಯಬೇಡಿ. ಎಲ್ಲಾ ನಿಯಮಗಳ ಪಾಲಿಸುವುದರ ಮೂಲಕ ರೋಗದಿಂದ ಮುಕ್ತರಾಗಿ.
Published by: Latha CG
First published: April 7, 2021, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories