HOME » NEWS » Coronavirus-latest-news » CORONAVIRUS IS NOT IN MADHYA PRADESH BUT IN ITS POLITICS SAYS CM KAMALNATH RH

ಕೊರೋನಾ ವೈರಸ್ ರಾಜ್ಯದಲ್ಲಿಲ್ಲ, ರಾಜಕಾರಣದಲ್ಲಿದೆ; ಮಧ್ಯಪ್ರದೇಶ ಸಿಎಂ ಕಮಲನಾಥ್

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯದ ಮೇಲಾಟದಲ್ಲಿ ಆಡಳಿತ ಪಕ್ಷ  ಮತ್ತು ವಿರೋಧ ಪಕ್ಷ ಬಿಜೆಪಿ ತಮ್ಮದೇ ತಂತ್ರ- ಪ್ರತಿತಂತ್ರಗಳನ್ನು ಹೆಣೆದಿವೆ. ಆದರೆ ಅಸಲಿ ಆಟ ಆರಂಭವಾಗುವುದೇ ಮಾರ್ಚ್​ 16ರಿಂದ ಆರಂಭವಾಗುವ ವಿಧಾನಸಭಾ ಕಲಾಪದಲ್ಲಿ.

HR Ramesh | news18-kannada
Updated:March 13, 2020, 3:58 PM IST
ಕೊರೋನಾ ವೈರಸ್ ರಾಜ್ಯದಲ್ಲಿಲ್ಲ, ರಾಜಕಾರಣದಲ್ಲಿದೆ; ಮಧ್ಯಪ್ರದೇಶ ಸಿಎಂ ಕಮಲನಾಥ್
ಮಧ್ಯಪ್ರದೇಶ ಸಿಎಂ ಕಮಲನಾಥ್.
  • Share this:
ಭೋಪಾಲ್: ದೇಶದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿಧಾನಸಭೆ ಕಲಾಪವನ್ನು ಮುಂದೂಡುವಂತೆ ಮಧ್ಯಪ್ರದೇಶ ಸಿಎಂ ಕಮಲನಾಥ್ ಅವರು ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಇದೇ ಮಾರ್ಚ್​ 16ರಿಂದ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಆದರೆ, ದೇಶವ್ಯಾಪಿ ಕೊರೋನಾ ಮಹಾಮಾರಿ ವ್ಯಾಪಿಸಿರುವ ಕಾರಣ ಸದನ ಮುಂದೂಡುವಂತೆ ಸಿಎಂ ಮನವಿ ಮಾಡಿದ್ದಾರೆ. ಹಾಗೊಂದು ವೇಳೆ ಕಲಾಪ ಮುಂದೂಡಿಕೆಯಾದರೆ ಬಂಡಾಯ ಎದ್ದು ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆಗೆ ಕಮಲನಾಥ್ ಸರ್ಕಾರಕ್ಕೆ ಸಮಯಾವಕಾಶ ಸಿಕ್ಕಂತಾಗುತ್ತದೆ.

ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಅವರ ಬೆಂಬಲಿಗ ಶಾಸಕರು ನೀಡಿರುವ ರಾಜೀನಾಮೆಯಿಂದ ಕಮಲನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಸದನ ಆರಂಭವಾಗುತ್ತಿದ್ದಂತೆ ಕಮಲನಾಥ್ ಅವರು ವಿಶ್ವಾಸಮತ ಯಾಚನೆ ಮಾಡಬೇಕಿದೆ. ಒಂದು ವೇಳೆ ಬಂಡಾಯ ಎದ್ದಿರುವ ಶಾಸಕರು ತಮ್ಮ ನಿಲುವು ಸಡಿಲಿಸದಿದ್ದರೆ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ.

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯದ ಮೇಲಾಟದಲ್ಲಿ ಆಡಳಿತ ಪಕ್ಷ  ಮತ್ತು ವಿರೋಧ ಪಕ್ಷ ಬಿಜೆಪಿ ತಮ್ಮದೇ ತಂತ್ರ- ಪ್ರತಿತಂತ್ರಗಳನ್ನು ಹೆಣೆದಿವೆ. ಆದರೆ ಅಸಲಿ ಆಟ ಆರಂಭವಾಗುವುದೇ ಮಾರ್ಚ್​ 16ರಿಂದ ಆರಂಭವಾಗುವ ವಿಧಾನಸಭಾ ಕಲಾಪದಲ್ಲಿ.

2018ರಲ್ಲಿ ಅಧಿಕಾರಕ್ಕೆ ಬಂದ ಕಮಲನಾಥ್ ಸರ್ಕಾರ, ಸ್ವಪಕ್ಷೀಯ ಶಾಸಕರ ರಾಜೀನಾಮೆಯಿಂದ ಪತನದ ಹಾದಿಯತ್ತ ಸಾಗಿದೆ. ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟನ್ನು ಸರಿಯಾಗಿ ಉಪಯೋಗಿಸಿಕೊಳ್ಳುಲು ಬಿಜೆಪಿ ಯೋಜನೆ ರೂಪಿಸಿದೆ. ಅದಕ್ಕಾಗಿ ಕಲಾಪದ ಮೊದಲ ದಿನವೇ ವಿಶ್ವಾಸಮತ  ಯಾಚಿಸುವಂತೆ ಆಡಳಿತ ಪಕ್ಷವನ್ನು ಒತ್ತಾಯಿಸಲಿದೆ. ಆದರೆ ಇದೀಗ ಕೊರೋನಾ ವೈರಸ್ ಭೀತಿಯಿಂದ ಕಲಾಪ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಹಾಗೊಂದು ವೇಳೆ ಸದನ ಮುಂದೂಡಿಕೆಯಾದರೆ ಕಮಲನಾಥ್ ಸರ್ಕಾರ ದೊಡ್ಡ ಕಂಟಕದಿಂದ ಪಾರಾದಂತೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಕೊರೋನಾ ತಡೆಗೆ ಸರ್ಕಾರದ ನಡೆ: ವಾರದ ಮಟ್ಟಿಗೆ ಮಾಲ್​, ಥಿಯೇಟರ್​, ಜಾತ್ರೆ, ಮದುವೆ, ಸಾರ್ವಜನಿಕ ಸಭೆಗಳಿಗೆ ನಿಷೇಧ

ಇದರ ನಡುವೆ ಕಾಂಗ್ರೆಸ್​ನ 19 ಶಾಸಕರನ್ನು ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಬಂಧಿಯಾಗಿರಿಸಿದ್ದಾರೆ. ಹಾಗೂ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ಬಿಜೆಪಿ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.ಸದನ ಮುಂದೂಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕಮಲನಾಥ್, ರಾಜ್ಯದಲ್ಲಿ ಕೊರೋನಾ ವೈರಸ್​ ಇಲ್ಲ. ಆದರೆ, ರಾಜಕೀಯದಲ್ಲಿದೆ ಎಂದು ಹೇಳಿದ್ದಾರೆ. ಅಲ್ಲದೇ, ಕೊರೋನಾ ವೈರಸ್ ತಡೆಗೆ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ವರದಿ: ಸಂಧ್ಯಾ ಎಂ​

 
First published: March 13, 2020, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories