IPL 2020: ಐಪಿಎಲ್ ಆರಂಭದ ಬಗ್ಗೆ ಮಾಹಿತಿ ನೀಡಿದ ಹಿಟ್​​ಮ್ಯಾನ್ ರೋಹಿತ್ ಶರ್ಮಾ!

Rohit Sharma: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈ ಬಾರಿ ಐಪಿಎಲ್ ನಡೆಸಬೇಕೊ ಅಥವಾ ಬೇಡವೋ ಎಂಬ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

news18-kannada
Updated:March 27, 2020, 7:31 AM IST
IPL 2020: ಐಪಿಎಲ್ ಆರಂಭದ ಬಗ್ಗೆ ಮಾಹಿತಿ ನೀಡಿದ ಹಿಟ್​​ಮ್ಯಾನ್ ರೋಹಿತ್ ಶರ್ಮಾ!
ಈ ವೇಳೆ ಅಭಿಮಾನಿಯೊಬ್ಬರು ನೀವು ಇಂಗ್ಲಿಷ್ನಲ್ಲಿ ಮಾತನಾಡಿ ಎಂದು ರೋಹಿತ್ ಶರ್ಮಾ ಜೊತೆ ಹೇಳಿದ್ದಕ್ಕೆ ಅವರು ಕೊಟ್ಟ ಉತ್ತರ ಗರಂ ಆಗಿತ್ತು.
  • Share this:
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್​​ ಸೋಂಕು ಪ್ರಕರಣಗಳ ಸಂಖ್ಯೆ ಏರಿಯಾಗುತ್ತಲೇ ಇದೆ. ಇಲ್ಲಿಯವರೆಗೆ ಇಡೀ ದೇಶದಲ್ಲೇ ಒಟ್ಟು 694 ಪ್ರಕರಣಗಳು ವರದಿಯಾಗಿದ್ದು ಸಾವಿನ ಸಂಖ್ಯೆ 16ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೊರೋನಾ ಸೋಂಕಿಗೆ ವಿಶ್ವದಾದ್ಯಂತ ಈಗಾಗಲೇ 23,000 ಜನ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 5 ಲಕ್ಷವನ್ನೂ ಮೀರಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಭಾರತದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದ್ದು, ಇದರ ನಡುವೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

ಪಠಾಣ್ ಬ್ರದರ್ಸ್ ಕಾರ್ಯಕ್ಕೆ ಹ್ಯಾಟ್ಸ್​ ಆಫ್ ಹೇಳಲೇಬೇಕು..!

ಅಲ್ಲದೆ, ಇನ್ನು ಮುಂದಿನ ದಿನಗಳಲ್ಲಿ ಜನರು ಮತ್ತಷ್ಟು ಸಂಕಷ್ಟಕದ ದಿನಗಳನ್ನು ಎಣಿಸಬಹುದಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಕ್ರೀಡಾ ಜಗತ್ತು ಕೂಡ ಸ್ತಬ್ಧಗೊಂಡಿದ್ದು, ಎಲ್ಲ ಕ್ರಿಕೆಟ್ ಕೂಟಗಳನ್ನು ಮುಂದೂಡಲಾಗಿವೆ. ಅದರಲ್ಲು ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈ ಬಾರಿ ಐಪಿಎಲ್ ನಡೆಸಬೇಕೊ ಅಥವಾ ಬೇಡವೋ ಎಂಬ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

ಈ ನಡುವೆ ಐಪಿಎಲ್​ನ ಮುಂಬೈ ಇಂಡಿಯನ್ಸ್​ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ ಈ ವಿಚಾರವಾಗಿ ಮಾತನಾಡಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಬಳಿಕ ಐಪಿಎಲ್ ಆರಂಭವಾಗಲಿದೆ ಎಂಬುದು ಶರ್ಮಾ ಹೇಳಿಕೆ. ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ಮಾತನಾಡಿದ ರೋಹಿತ್ ಐಪಿಎಲ್ ಆರಂಭದವಾಗುವುದು ಖಚಿತ. ಆದರೆ ಸಮಯ ಬೇಕಾಗಿದೆ ಎಂದಿದ್ದಾರೆ.ನಿಮಗಿದು ಗೊತ್ತಾ?: ಏಕದಿನ ಕ್ರಿಕೆಟ್​​ನಲ್ಲಿ ಹಿಟ್​ಮ್ಯಾನ್​​ ಸಿಡಿಸಿದ 264 ರನ್ ಗರಿಷ್ಠ ಸ್ಕೋರ್ ಅಲ್ಲ; ಮತ್ಯಾರದ್ದು?

ಭಾರತದಂತೆಯೇ ಇಡೀ ವಿಶ್ವದ ಬಹುತೇಕ ದೇಶಗಳಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಲಾಗಿದೆ. ಹಾಗಾಗಿ ಸುಮಾರು 260 ಕೋಟಿ ಜನ ಈಗ ಗೃಹ ಬಂಧನಕ್ಕೆ ಒಳಗಾಗಿದ್ದಾರೆ.

ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 42 ದೇಶಗಳು ಲಾಕ್​​ಡೌನ್ ಮಾಡಲಾಗಿದೆ. ಇದೀಗ ಈ ಸಾಲಿಗೆ ಭಾರತ ಮತ್ತು ನ್ಯೂಜಿಲೆಡ್ ಸೇರ್ಪಡೆಯಾಗಿವೆ. ಎಲ್ಲೆಡೆಯೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading