HOME » NEWS » Coronavirus-latest-news » CORONAVIRUS INFECTS 17 MPS IN THE COUNTRY INCLUDING ANANTHA KUMAR HEGDE MAK

ಅನಂತ ಕುಮಾರ್‌ ಹೆಗಡೆ ಸೇರಿದಂತೆ ದೇಶದ 17 ಸಂಸದರಿಗೆ ಕೊರೋನಾ ಸೋಂಕು ದೃಢ!

ಕೊರೋನಾ ಕುರಿತು ಮುನ್ನೆಚ್ಚರಿಕಾ ಕ್ರಮವಾಗಿ  ಈ ವರ್ಷದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಸರ್ಕಾರ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದು, ಸಂಸದರು, ಸಂಸತ್ತಿನ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗೆ ಕಡ್ಡಾಯ ಕೊರೋನಾ ಪರೀಕ್ಷೆಗೆ ಒಳಗಾಗಬೇಕು ಎನ್ನಲಾಗಿತ್ತು. ಅಲ್ಲದೆ, ಸಂಸದರು ಸಾಮಾಜಿಕ ಅಂತ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದ ಕೇಂದ್ರ ಸರ್ಕಾರ ಸಂದರ್ಶಕರ ಆಗಮನಕ್ಕೂ ನಿರ್ಬಂಧ ಹೇರಿತ್ತು.

news18-kannada
Updated:September 14, 2020, 5:39 PM IST
ಅನಂತ ಕುಮಾರ್‌ ಹೆಗಡೆ ಸೇರಿದಂತೆ ದೇಶದ 17 ಸಂಸದರಿಗೆ ಕೊರೋನಾ ಸೋಂಕು ದೃಢ!
ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ.
  • Share this:
ನವ ದೆಹಲಿ (ಸೆಪ್ಟೆಂಬರ್‌ 14); ದೇಶದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉತ್ತರ ಕನ್ನಡ ಸಂಸದ ಅನಂತ ಕುಮಾರ್‌ ಹೆಗಡೆ ಸೇರಿದಂತೆ ಕನಿಷ್ಠ 17 ಲೋಕಸಭಾ ಸದಸ್ಯರಿಗೆ ಮಾರಣಾಂತಿಕ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಲಾದ ಕಡ್ಡಾಯ ಕೊರೋನಾ ಪರೀಕ್ಷೆಗಳಲ್ಲಿ 17 ಸಂಸದರಿಗೆ ಕೊರೋನಾ ತಗುಲಿರುವುದು ಖಚಿತವಾಗಿದೆ ಎನ್ನಲಾಗುತ್ತಿದೆ. ಸೋಂಕಿತರ ಪೈಕಿ 12 ಜನ ಬಿಜೆಪಿ ಸಂಸದರಾದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷದ 2 , ಶಿವಸೇನೆಯ 2 ಹಾಗೂ ಓರ್ವ ಡಿಎಂಕೆ ಸಂಸದರಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸೋಂಕು ಪೀಡಿತ ಸಂಸದರಿಗೆ ಸಂಸತ್‌ ಪ್ರವೇಶ ನೀರಾಕರಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

ಕೊರೋನಾ ಕುರಿತು ಮುನ್ನೆಚ್ಚರಿಕಾ ಕ್ರಮವಾಗಿ  ಈ ವರ್ಷದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಸರ್ಕಾರ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದು, ಸಂಸದರು, ಸಂಸತ್ತಿನ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗೆ ಕಡ್ಡಾಯ ಕೊರೋನಾ ಪರೀಕ್ಷೆಗೆ ಒಳಗಾಗಬೇಕು ಎನ್ನಲಾಗಿತ್ತು. ಅಲ್ಲದೆ, ಸಂಸದರು ಸಾಮಾಜಿಕ ಅಂತ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದ ಕೇಂದ್ರ ಸರ್ಕಾರ ಸಂದರ್ಶಕರ ಆಗಮನಕ್ಕೂ ನಿರ್ಬಂಧ ಹೇರಿತ್ತು.

ಗೃಹ ಸಚಿವ ಅಮಿತ್‌ ಶಾ ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು. ಅಲ್ಲದೆ, ಸಂಸತ್ ಅಧಿವೇಶನ ಪ್ರಾರಂಭವಾಗುವ ಮೊದಲು 2 ದಿನಗಳ ಕಾಲ ಸಂಪೂರ್ಣ ವೈದ್ಯಕೀಯ ತಪಾಸಣೆಗಾಗಿ ಶನಿವಾರ ರಾತ್ರಿ ಅವರನ್ನು ಮತ್ತೆ ದೆಹಲಿಯ ಏಮ್ಸ್  ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಕರ್ನಾಟಕದಲ್ಲೂ ಸಹ ಮುಖ್ಯಮಂತ್ರಿ ಬಿಎಸ್‌, ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : NEET-JEE ಪರೀಕ್ಷೆಗಳನ್ನು ಮನು ನೀತಿಗೆ ಹೋಲಿಸಿ ಕೋರ್ಟ್‌‌ಗಳನ್ನೂ ಟೀಕಿಸಿದ ನಟ ಸೂರ್ಯ; ನ್ಯಾಯಾಂಗ ನಿಂದನೆ ಕೇಸ್‌ ಸಾಧ್ಯತೆ?

ಆದರೆ, ಕೊರೋನಾ ಸಂಬಂಧ ಈ ಹಿಂದೆ ಉಡಾಫೆಯಾಗಿ ಮಾತನಾಡಿದ್ದ ಅನಂತಕುಮಾರ್‌, "ಕೊರೋನಾಗೆ ಹೆದರಿ ಮಾಸ್ಕ್‌ ಹಾಕಿಕೊಳ್ಳುವುದರಿಂದ ಏನೂ ಲಾಭವಿಲ್ಲ. ಮಾಸ್ಕ್‌ ಹಾಕಿಕೊಳ್ಳುವವರನ್ನು ನೋಡಿದರೆ ನನಗೆ ರಾಮಾಯಣದ ಪಾತ್ರಗಳು ನೆನಪಾಗುತ್ತವೆ. ನಾಳೆ ಕೊರೋನಾ ನಮ್ಮ ಮನೆಗೂ ಬರಬಹುದು. ಹೀಗಾಗಿ ಇದರ ಜೊತೆಗೆ ನಾವು ಬದುಕಬೇಕು. ಕೊರೋನಾಗೆ ಹೆದರಿ ಲಾಕ್‌ಡೌನ್ ಮಾಡಿದರೆ ಆರ್ಥಿಕ ನಷ್ಟವೊಂದೇ ಸಾಧ್ಯ" ಎಂದು ಅಭಿಪ್ರಾಯಪಟ್ಟಿದ್ದರು.
ಸಂಸದ ಅನಂತ ಕುಮಾರ್‌ ಹೆಗಡೆ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ದೊಡ್ಡ ವಿರೋಧಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ಸಂಬಂಧ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿದ್ದವು. ಆದರೆ, ಇದೀಗ ಸಂಸದ ಅನಂತ್‌ ಕುಮಾರ್‌ ಹೆಗಡೆ ಅವರಿಗೇ ಕೊರೋನಾ ಸೋಂಕು ತಗುಲಿದೆ. ಇನ್ನೂ ದೇಶದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 35 ಲಕ್ಷವನ್ನು ಧಾಟಿ ಮುನ್ನುಗ್ಗುತ್ತಿದೆ.
Published by: MAshok Kumar
First published: September 14, 2020, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories