ರಾಮನಗರ ಜೈಲಿನಲ್ಲಿ ಇರಿಸಿದ್ದ ಪಾದರಾಯನಪುರ ಗಲಭೆ ಆರೋಪಿತರ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು!

ಈಗಾಗಲೇ ರಾಜ್ಯದಲ್ಲಿ 445 ಮಂದಿ ಸೋಂಕಿಗೆ ತುತ್ತಾಗಿ, 17 ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು ಇದೀಗ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳಲ್ಲಿ ಸೋಂಕು ಕಂಡುಬಂದಿರುವುದರಿಂದ ರಾಮನಗರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು: ಪಾದರಾಯನಪುರ ಗಲಭೆ ಎಬ್ಬಿಸಿದ ಆರೋಪದ ಮೇಲೆ ಬಂಧಿಸಲಾಗಿದ್ದ ಗಲಭೆಕೋರರನ್ನು ಎರಡು ದಿನಗಳ ಹಿಂದೆ ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಬಂಧಿತ ಆರೋಪಿತರ ಪೈಕಿ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

  ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳಲ್ಲಿ ಸ್ಥಳಾಂತರ ಮಾಡಲಾದವರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಇವರನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಾಮನಗರ ಜೈಲಿನಲ್ಲಿದ್ದ ಗಲಾಟೆಯ ಆರೋಪಿತರನ್ನು
  ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಇಬ್ಬರ ಜೊತೆಗೆ ಮತ್ತೆ ಮೂವರಿಗೂ ಸೋಂಕು ಹರಡಿರುವ ಸಾಧ್ಯತೆಯೂ ಇದೆ. ರಾಮನಗರ ಜೈಲಿನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ನಗರಸಭೆಯ ಸಿಬ್ಬಂದಿಗಳು ಮಾಸ್ಕ್, ಸ್ಯಾನಿಟೈಸರ್ ಕೊಡಲು ಜೈಲಿಗೆ ಹೋಗಿದ್ದರು. ಈಗ ಅವರನ್ನು ಸಹ ಕ್ವಾರಂಟೈನ್ ಮಾಡಲಾಗುತ್ತದೆ.

  ಈಗಾಗಲೇ ರಾಜ್ಯದಲ್ಲಿ 445 ಮಂದಿ ಸೋಂಕಿಗೆ ತುತ್ತಾಗಿ, 17 ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು ಇದೀಗ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳಲ್ಲಿ ಸೋಂಕು ಕಂಡುಬಂದಿರುವುದರಿಂದ ರಾಮನಗರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

  ಇದನ್ನು ಓದಿ: ತಹಬದಿಯಲ್ಲಿದೆ ಕೊರೋನಾ ಸೋಂಕು ಏರಿಕೆ- ಸರ್ಕಾರ ಸ್ಪಷ್ಟನೆ; ಬೇರೆ ದೇಶಗಳಿಗೆ ಭಾರತವನ್ನು ಹೋಲಿಸಿದಾಗ…
  First published: