ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಅವರ ಹೆಂಡತಿಗೂ ಕಾಣಿಸಿಕೊಂಡ ಕೊರೋನಾ ಸೋಂಕು

ಜುಲೈ 4ರಂದು ಶರತ್ ಬಚ್ಚೇಗೌಡ ಅವರು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಇದರಿಂದ ಈಗ ದೇವೇಗೌಡ ಅವರಿಗೂ ಸೋಂಕು ಆತಂಕ ಎದುರಾಗಿದೆ.

ಶರತ್​ ಬಚ್ಚೇಗೌಡ

ಶರತ್​ ಬಚ್ಚೇಗೌಡ

 • Share this:
  ಬೆಂಗಳೂರು; ಜನಪ್ರತಿನಿಧಿಗಳಿಗೂ ಮಾರಕ ಸೋಂಕು ಹಬ್ಬುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

  ಶಾಸಕ ಶರತ್ ಬಚ್ಚೇಗೌಡ ಅವರ ಜೊತೆಗೆ ಪತ್ನಿ ಪ್ರತಿಭಾ ಶರತ್​ ಅವರಿಗೂ ಕೊರೋನಾ ಸೋಂಕು ತಗುಲಿದೆ. ಇದೇ ಜುಲೈ 6ರಂದು ಶಾಸಕರಿಗೆ ಸ್ವಲ್ಪ ಮೈ ಕೈ ನೋವು ಕಾಣಿಸಿಕೊಂಡಿತ್ತು. ಅದಾದ ಬಳಿಕ ದಂಪತಿ ಕೋವಿಡ್- 19 ಪರೀಕ್ಷೆಗೆ ಒಳಗಾಗಿದ್ದರು. ಇಂದು ಸಂಜೆ ಇಬ್ಬರಿಗೂ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಸದ್ಯ ವೈದ್ಯರ ಸಲಹೆ ಪಡೆದುಕೊಂಡು ಇಬ್ಬರೂ ಮನೆಯಲ್ಲಿಯೇ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

  ಕಳೆದ ಕೆಲವು ದಿನಗಳ ಹಿಂದೆ ಶರತ್ ಬಚ್ಚೇಗೌಡ ಅವರು ಕೊರೊನಾ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಆ ಬಳಿಕ ಅನಾರೋಗ್ಯ ಕಾಣಿಸಿಕೊಂಡ ನಂತರ ನಿನ್ನೆ ಸ್ವಯಂಪ್ರೇರಿತರಾಗಿ ಕೊರೋನಾ ಟೆಸ್ಟ್ ಗೆ ಒಳಗಾಗಿದ್ದರು. ಕೊರೋನಾ ಸೋಂಕು ತಗುಲಿರುವುದು ಇಂದು ಪರೀಕ್ಷೆಯಿಂದ ದೃಢಪಟ್ಟಿದೆ. 

  ಜುಲೈ 4ರಂದು ಶರತ್ ಬಚ್ಚೇಗೌಡ ಅವರು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಇದರಿಂದ ಈಗ ದೇವೇಗೌಡ ಅವರಿಗೂ ಸೋಂಕು ಆತಂಕ ಎದುರಾಗಿದೆ.

  ಇದನ್ನು ಓದಿ: ರಾಜ್ಯದಲ್ಲಿ ಅನ್ ಲೈನ್ ಶಿಕ್ಷಣ ನಿರ್ಬಂಧ ವಿಚಾರ; ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ

  ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳಲ್ಲೂ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ನೆನ್ನೆಯಷ್ಟೇ ಮಂಡ್ಯ ಸಂಸದೆ ಸುಮಲತಾ ಅವರಿಗೂ ಸೋಂಕು ತಗುಲಿತ್ತು. ಕುಣಿಗಲ್ ಶಾಸಕ ರಂಗನಾಥ್ ಸೇರಿದಂತೆ ಹಲವು ಶಾಸಕರಿಗೆ ಸೋಂಕು ಕಾಣಿಸಿಕೊಂಡಿದೆ.
  Published by:HR Ramesh
  First published: