• Home
  • »
  • News
  • »
  • coronavirus-latest-news
  • »
  • VIDEO: ಕೊಹ್ಲಿ ಬಳಿ ಸೆಲ್ಫಿ ಕೇಳಿದ ಹುಡುಗಿಗೆ ಕಾದಿತ್ತು ಶಾಕ್; ಅಚ್ಚರಿ ಮೂಡಿಸಿದ ವಿರಾಟ್ ನಡೆ

VIDEO: ಕೊಹ್ಲಿ ಬಳಿ ಸೆಲ್ಫಿ ಕೇಳಿದ ಹುಡುಗಿಗೆ ಕಾದಿತ್ತು ಶಾಕ್; ಅಚ್ಚರಿ ಮೂಡಿಸಿದ ವಿರಾಟ್ ನಡೆ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಭಾರತ- ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ರದ್ದಾದ ಬಳಿಕ ಕೊಹ್ಲಿ ಅವರು ಲಕ್ನೋನಿಂದ ತಮ್ಮ ಮನೆಗೆ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ.

  • Share this:

    ಬೆಂಗಳೂರು (ಮಾ. 20): ಆಧುನಿಕ ಕ್ರಿಕೆಟ್ ಕಾಲಘಟ್ಟದಲ್ಲಿ ಅತ್ಯಂತ ಅಗ್ರೆಸಿವ್ ಕ್ರಿಕೆಟಿಗ ಯಾರು? ಈ ಪ್ರಶ್ನೆಗೆ ಥಟ್ ಅಂತ ಹೊಳೆಯುವ ಉತ್ತರ ರನ್ ಮೆಷಿನ್ ವಿರಾಟ್ ಕೊಹ್ಲಿ ಅಲ್ಲದೆ ಮತ್ಯಾರು ಅಲ್ಲ. ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಎದುರಾಳಿ ಏನಾದರೂ ಅಪ್ಪಿ ತಪ್ಪಿ ಕೆಣಕಿದರೆ ಮುಟ್ಟಿ ನೋಡುವಂತಹ ತಿರುಗೇಟು ನೀಡುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರದ್ದು ಎತ್ತಿದ ಕೈ.


    Watch: Virat Kohli Turns Down Girl’s Request For A Selfie
    ಅಭಿಮಾನಿ ಜೊತೆ ವಿರಾಟ್ ಕೊಹ್ಲಿ.


    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್


    ಆದರೆ, ಆಫ್​ ದಿ ಫೀಲ್ಡ್ ಕಿಂಗ್ ಕೊಹ್ಲಿ ಈ ರೀತಿ ಇಲ್ಲ ಎಂದು ಅನೇಕ ಕ್ರಿಕೆಟಿಗರು ಹೇಳಿದ್ದುಂಟು. ಮೈದಾನದ ಹೊರಗಡೆ ತರ್ಲೆ, ಜೋಕ್ಸ್​ ಮಾಡಿಕೊಂಡು ಕಾಲೆಳೆಯುತ್ತಾ ಇರುತ್ತಾರಂತೆ. 2019 ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ ವೇಳೆ ಭಾರತ ತಂಡವನ್ನು ಪ್ರೋತ್ಸಾಹಿಸಲು ವೀಲ್​​ಚ್ಹೇರ್​​ನಲ್ಲಿ ಬಂದಿದ್ದ 87 ವರ್ಷ ಪ್ರಾಯದ ಚಾರುಲತಾ ಅಜ್ಜಿ ಅವರನ್ನು ವಿರಾಟ್ ಕೊಹ್ಲಿ ಭೇಟಿಯಾಗಿ ಧನ್ಯವಾದ ತಿಳಿಸಿ, ಆಶೀರ್ವಾದ ಪಡೆದಿದ್ದರು.


    ಹೀಗೆ ಅಭಿಮಾನಿಗಳನ್ನು ಕಂಡರೆ ಕೊಹ್ಲಿ ಪ್ರೀತಿಯಿಂದ ಮಾತನಾಡಿಸಿದ ಅದೆಷ್ಟೋ ಉದಾಹರಣೆಗಳಿವೆ. ಅಂತೆಯೆ, ಇತ್ತೀಚೆಗೆ ಕೊಹ್ಲಿ ಏರ್​ಪೋರ್ಟ್​​ನಿಂದ ತೆರಳುತ್ತಿರುವ ವೇಳೆ ಯುವತಿಯೋರ್ವಳು ಕೊಹ್ಲಿ ಬಳಿ ಸೆಲ್ಫಿಗೆಂದು ಓಡಿ ಬಂದಿದ್ದಾರೆ. ಆದರೆ, ಕೊಹ್ಲಿ ಯುವತಿಯ ಮುಖವನ್ನೂ ನೋಡದೆ ತಲೆ ಕೆಳಗೆ ಹಾಕಿಕೊಂಡು ಹೊರ ನಡೆದಿದ್ದಾರೆ.


    ಹರ್ಭಜನ್ vs ಸೈಮಂಡ್ಸ್: ಮಂಕಿಗೇಟ್ ಪ್ರಕರಣ ನೆನೆದು ಕೊರಗಿದ ಪಾಂಟಿಂಗ್



    ಈ ಸಂದರ್ಭ ಯುವತಿ ಬೇಸರದಿಂದ ಹಿಂದೆ ಸರಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಕೊಹ್ಲಿ, ಇಲ್ಲಿ ತಲೆ ಎತ್ತದೆ ಹೊರ ನಡೆದಿದ್ದು ಕೆಲವರಿಗೆ ಅಚ್ಚರಿ ಮೂಡಿಸಿದೆ.


    ಭಾರತ- ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ರದ್ದಾದ ಬಳಿಕ ಕೊಹ್ಲಿ ಅವರು ಲಕ್ನೋನಿಂದ ತಮ್ಮ ಮನೆಗೆ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ.

    Published by:Vinay Bhat
    First published: