ಬೆಂಗಳೂರು(ಮೇ 18): ಉತ್ತರ ಭಾರತದ ವಿವಿಧೆಡೆಯಿಂದ ರಾಜ್ಯಕ್ಕೆ ವಲಸೆ ಬಂದಿದ್ದ ವಲಸೆ ಕಾರ್ಮಿಕರು ತವರಿಗೆ ಹೋಗುವುದು ಮುಂದುವರಿದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಆರ್ಥಿಕ ಚಟುವಟಿಕೆ ನಿಂತಿದ್ದರಿಂದ ಬಹಳ ಸಂಕಷ್ಟದಲ್ಲಿದ್ದ ಕಾರ್ಮಿಕರಲ್ಲಿ ಬಹುಭಾಗ ಮಂದಿ ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ಧಾರೆ. ಇವತ್ತು ಉತ್ತರ ಭಾರತದ ವಿವಿಧೆಡೆಗೆ ಬೆಂಗಳೂರಿನಿಂದ 9 ಶ್ರಮಿಕ್ ರೈಲುಗಳು ಸಾವಿರಾರು ವಲಸಿಗರನ್ನು ಹೊತ್ತೊಯ್ಯುತ್ತಿವೆ.
ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ ಬೆಂಗಳೂರಿನ ಚಿಕ್ಕ ಬಾಣಾವರ, ಮಾಲೂರು ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಒಟ್ಟು 9 ಶ್ರಮಿಕ್ ರೈಲುಗಳು ಹೊರಡುತ್ತಿವೆ. ಉತ್ತರ ಪ್ರದೇಶದ ಆಜಾದ್ ನಗರ, ಬಸ್ತಿ, ತ್ರಿಪುರ, ಅಸ್ಸಾಮ್ ಮೊದಲಾದ ಪ್ರದೇಶಗಳಿಗೆ ವಲಸೆ ಕಾರ್ಮಿಕರು ಹೋಗುತ್ತಿದ್ದಾರೆ. ಒಂದೊಂದು ರೈಲಿನಲ್ಲೂ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣ ಬೆಳಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ರಾಜಕೀಯಕ್ಕೆ ‘ಕರ್ನಾಟಕ ಸಿಂಗಂ‘ ಅಣ್ಣಾಮಲೈ ಪ್ರವೇಶ: 2021ರ ಚುನಾವಣೆಯಲ್ಲಿ ಸ್ಪರ್ಧೆ
ಬೆಂಗಳೂರಿನ ಅರಮನೆ ಮೈದಾನದ ಬಳಿ ಬೆಳ್ಳಂಬೆಳಗ್ಗೆಯೇ ಸಾವಿರಾರು ಜನರು ಆಗಮಿಸಿದ್ದಾರೆ. ಹೆಸರು ನೊಂದಾಯಿಸಿಕೊಳ್ಳದ ಕಾರ್ಮಿಕರೂ ಕೂಡ ರೈಲ್ವೆ ಸ್ಟೇಷನ್ ಕಡೆಗೆ ಮುಖ ಮಾಡಿದ್ದಾರೆ. ಎಲ್ಲಾ ರೈಲು ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ