ನವದೆಹಲಿ(ಜೂ. 5): ಕಳೆದ 10 ದಿನಗಳಿಂದ ನಿರಂತರವಾಗಿ ದೇಶದಲ್ಲಿ ಕೊರೋನಾ ಸೋಂಕು ಪೀಡಿತರಾಗುವವರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಆಗಿವೆ. ಕೊರೋನಾದಿಂದ ಸಾಯುವವರ ಸಂಖ್ಯೆ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಚಿಗರುತ್ತಿದ್ದು 52 ದಿನಗಳ ಬಳಿಕ ದೇಶದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 15 ಲಕ್ಷಕ್ಕಿಂತ ಕಡಿಮೆಯಾಗಿದೆ. ಇದರಿಂದಾಗಿ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗಬಹುದು ಎಂಬ ಲಕ್ಷಣಗಳು ಗೋಚರಿಸತೊಡಗಿವೆ. ಎರಡು ತಿಂಗಳಲ್ಲೇ ನಿನ್ನೆ (ಜೂನ್ 4ರಂದು) ಅತ್ಯಂತ ಕಡಿಮೆ ಕೊರೋನಾ ಕೇಸುಗಳು ಪತ್ತೆ ಆಗಿವೆ. ನಿನ್ನೆಯ ಕೊರೋನಾ ಸೋಂಕು, ಸಾವು, ಗುಣ ಆದವರ ಮುಖ್ಯ ಅಂಕಿ ಅಂಶಗಳು ಈ ಕೆಳಕಂಡಂತಿವೆ.
ದೇಶದಲ್ಲಿ 52 ದಿನಗಳ ಬಳಿಕ ಸಕ್ರೀಯ ಪ್ರಕರಣಗಳ ಸಂಖ್ಯೆ 15 ಲಕ್ಷಕ್ಕಿಂತ ಕಡಿಮೆಯಾಗಿದೆ. ಶೇಕಡಾವಾರು ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 40ಕ್ಕೆ ಇಳಿದಿದೆ. ಮೇ 8ರಂದು 37.8 ಲಕ್ಷ ಸಕ್ರಿಯ ಪ್ರಕರಣಗಳಿದ್ದವು. ಸದ್ಯ ದೇಶದಲ್ಲಿ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 14,77,799 ಮಾತ್ರ.
ಇದನ್ನೂ ಓದಿ:SSLC, PUC ರಿಪೀಟರ್ಸ್ಗೆ ಹೊಸ ಟೆನ್ಶನ್; ನಿಮಗೆ ಪರೀಕ್ಷೆ ಇದ್ದೇ ಇರುತ್ತೆ...!
*ಕಳೆದ 24 ದಿನಗಳಲ್ಲಿ 1,14,460 ಪ್ರಕರಣಗಳು ಪತ್ತೆ ಆಗಿವೆ. ಇದರಿಂದ ದೇಶದ ಕೊರೋನಾ ಸೋಂಕಿತರ ಸಂಖ್ಯೆ 2,88,09,339ಕ್ಕೆ ಏರಿಕೆ ಆಗಿದೆ.
* ನಿನ್ನೆ ಕೊರೋನಾದಿಂದ 2,677 ಜನರ ಸಾವನ್ನಪ್ಪಿದ್ದಾರೆ. ಈವರೆಗೆ ಕೊರೋನಾ ಮಹಾಮಾರಿಗೆ ಬಲಿ ಆದವರು 3,46,759 ಜನ.
* ಕಳೆದ 24ಗಂಟೆಯಲ್ಲಿ ಗುಣ ಆದವರು 1,89,232 ಜನ. ಇದರಿಂದ ಈವರೆಗೆ ಕೊರೋನಾದಿಂದ 2,69,84,781 ಜನ ಗುಣ ಆದಂತಾಗಿದೆ.
* ಚೇತರಿಕೆಗಳು ಸತತ 24ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸಿದೆ. ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇಕಡಾ 93.67ಕ್ಕೆ ಹೆಚ್ಚಾಗಿದೆ.
* ಸಾಪ್ತಾಹಿಕ ಸಕಾರಾತ್ಮಕ ದರ ಪ್ರಸ್ತುತ ಶೇಕಡ 6.54ಕ್ಕೆ ಇಳಿದಿದೆ. ದೈನಂದಿನ ಸಕಾರಾತ್ಮಕತೆ ದರ ಶೇಕಡಾ 5.62ಕ್ಕೆ ಇಳಿದಿದೆ. ಸತತವಾಗಿ 13 ದಿನ ಶೇಕಡಾ 10ಕ್ಕಿಂತ ಕಡಿಮೆ ಆಗಿದೆ.
Rohini Sindhuri: ಟ್ರಾನ್ಸ್ಫರ್ ಕ್ಯಾನ್ಸಲ್ ಮಾಡುವಂತೆ ರೋಹಿಣಿ ಸಿಂಧೂರಿ ಮನವಿ; ಬಿಲ್ಕುಲ್ ಆಗಲ್ಲ ಎಂದ ಸಿಎಂ
* ಕೊರೋನಾ ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ. ನಿನ್ನೆ 36.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದ್ದು ಈವರೆಗ ದೇಶದಲ್ಲಿ ಒಟ್ಟು 23.13 ಕೋಟಿ ಡೋಸೇಜ್ ಅನ್ನು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನೀಡಲಾಗಿದೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ