HOME » NEWS » Coronavirus-latest-news » CORONAVIRUS INDIA UPDATES COVID 19 INDIA CASES CROSSES 66 LAKH TILL MONDAY SCT

ಭಾರತದಲ್ಲಿ ನಿಲ್ಲದ ಕೊರೋನಾ ಉಪಟಳ; ನಿನ್ನೆ ದೇಶದಲ್ಲಿ 61,267 ಸೋಂಕಿತರು ಪತ್ತೆ

Coronavirus India Updates: ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,03,569ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ 66 ಲಕ್ಷ ದಾಟಿದೆ.

news18-kannada
Updated:October 6, 2020, 11:26 AM IST
ಭಾರತದಲ್ಲಿ ನಿಲ್ಲದ ಕೊರೋನಾ ಉಪಟಳ; ನಿನ್ನೆ ದೇಶದಲ್ಲಿ 61,267 ಸೋಂಕಿತರು ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಅ. 6): ಭಾರತದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು, ಅತಿ ಹೆಚ್ಚು ಕೊರೋನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೆ ಸ್ಥಾನದತ್ತ ವೇಗವಾಗಿ ಸಾಗುತ್ತಿದೆ. ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ 66 ಲಕ್ಷ ದಾಟಿದೆ. ಇದಲ್ಲದೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಈಗ ಲಕ್ಷದ ಗಡಿಯನ್ನೂ ದಾಟಿದೆ. ಆದರೆ ಕಳೆದ ವಾರಕ್ಕೆ ಹೋಲಿಸಿಕೊಂಡರೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅಕ್ಟೋಬರ್ 5ರಂದು 61,267 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 66,23,816ಕ್ಕೆ ಏರಿಕೆಯಾಗಿದೆ. ಇದಲ್ಲದೆ ಸೋಮವಾರ 884 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,03,569ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 56,62,491 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,19,023 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಡ್ರಗ್ ಕೇಸ್​ನಲ್ಲಿ ತನಿಖೆಗೆ ಸಹಕರಿಸದ ಮುತ್ತಪ್ಪ ರೈ ಮಗ ರಿಕ್ಕಿ ರೈ ಸಿಸಿಬಿ ವಶಕ್ಕೆ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706, ಸೆಪ್ಟೆಂಬರ್ 9ರಂದು 95,735, ಸೆಪ್ಟೆಂಬರ್ 10ರಂದು 96,551, ಸೆಪ್ಟೆಂಬರ್ 11ರಂದು 97,570, ಸೆಪ್ಟೆಂಬರ್ 12ರಂದು 94,372, ಸೆಪ್ಟೆಂಬರ್ 13ರಂದು 92,071, ಸೆಪ್ಟೆಂಬರ್ 14ರಂದು 83,809, ಸೆಪ್ಟೆಂಬರ್ 15ರಂದು 90,123, ಸೆಪ್ಟೆಂಬರ್ 16ರಂದು 97,894, ಸೆಪ್ಟೆಂಬರ್ 17ರಂದು 96,424, ಸೆಪ್ಟೆಂಬರ್ 18ರಂದು 93,337, ಸೆಪ್ಟೆಂಬರ್ 19ರಂದು 92,605 ಸೆಪ್ಟೆಂಬರ್ 20ರಂದು‌ 86,961, ಸೆಪ್ಟೆಂಬರ್ 21ರಂದು 75,083 ಸೆಪ್ಟೆಂಬರ್ 22ರಂದು 83,347, ಸೆಪ್ಟೆಂಬರ್ 23ರಂದು 86,508, ಸೆಪ್ಟೆಂಬರ್ 24ರಂದು 86,052, ಸೆಪ್ಟಂಬರ್ 25ರಂದು 85,362, ಸೆಪ್ಟೆಂಬರ್ 26ರಂದು 88,600, ಸೆಪ್ಟೆಂಬರ್ 27ರಂದು 82,170, ಸೆಪ್ಟೆಂಬರ್ 28ರಂದು‌ 70,589, ಸೆಪ್ಟೆಂಬರ್ 29ರಂದು, ಸೆಪ್ಟೆಂಬರ್ 30ರಂದು 86,821, ಅಕ್ಟೋಬರ್ 1ರಂದು 81,484, ಅಕ್ಟೋಬರ್ 2ರಂದು 79,476, ಅಕ್ಟೋಬರ್ 3ರಂದು 75,829, ಅಕ್ಟೋಬರ್ 4ರಂದು 74,442 ಹಾಗೂ ಅಕ್ಟೋಬರ್ 5ರಂದು 61,267 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Sushma Chakre
First published: October 6, 2020, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories