ನವದೆಹಲಿ(ಆ.30): ದೇಶದಲ್ಲಿ ಕೊರೊನಾ ಕಾಣಿಸಿಕೊಂಡು ಇಂದಿಗೆ ಸರಿಯಾಗಿ 7 ತಿಂಗಳಾಗಿದೆ. ಈ ನಡುವೆ ಕೊರೊನಾ ಸೋಂಕು ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ ಹೆಚ್ಚಾದಾಗ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೋರೊನಾ ಸೋಂಕು ಪೀಡಿತರ ಸಂಖ್ಯೆ 35 ಲಕ್ಷದ ಗಡಿ ದಾಟಿದೆ. ಜೊತೆಗೆ ಪ್ರತಿ ದಿನವೂ 75 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರತೊಡಗಿವೆ.
ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿ ಅದೇ ಮುಂದುವರೆಯುತ್ತಿದೆ. ಆಗಸ್ಟ್ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಆಗಸ್ಟ್ 19ರಂದ 69,652 ಪ್ರಕರಣಗಳು, ಆಗಸ್ಟ್ 20ರಂದು 68,898 ಪ್ರಕರಣಗಳು, ಆಗಸ್ಟ್ 21ರಂದು 69,878 ಪ್ರಕರಣಗಳು, ಆಗಸ್ಟ್ 22ರಂದು 69,239 ಪ್ರಕರಣಗಳು, ಆಗಸ್ಟ್ 23ರಂದು 61,408 ಪ್ರಕರಣಗಳು, ಆಗಸ್ಟ್ 24ರಂದು 60,975 ಪ್ರಕರಣಗಳು, ಆಗಸ್ಟ್ 25ರಂದು 67,151 ಪ್ರಕರಣಗಳು, ಆಗಸ್ಟ್ 26ರಂದು 75,760 ಪ್ರಕರಣಗಳು, ಆಗಸ್ಟ್ 27ರಂದು 77,266 ಪ್ರಕರಣಗಳು ಹಾಗೂ ಆಗಸ್ಟ್ 28ರಂದು 76,472 ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್ 29ರಂದು 78,761 ಪತ್ತೆಯಾಗಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 35,42,734ಕ್ಕೆ ಏರಿಕೆಯಾಗಿದೆ.
ಕೊರೋನಾ ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚಲು ನಿಗಾವಹಿಸಿ; ಜಿಲ್ಲಾಧಿಕಾರಿ ಆರ್. ಗಿರೀಶ್
ಇದಲ್ಲದೆ ಶನಿವಾರ 948 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 63 ಸಾವಿರದ ಗಡಿ ದಾಟಿದ್ದು 63,498ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 27,13,934 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 7,65,302 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜುಲೈ 1ರಂದು 19,148, ಜುಲೈ 2ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248, ಜುಲೈ 6ರಂದು 22,252, ಜುಲೈ 7ರಂದು 22,752, ಜುಲೈ 8ರಂದು 24,879, ಜುಲೈ 9ರಂದು 26,506, ಜುಲೈ 10ರಂದು 27,114, ಜುಲೈ 11ರಂದು 28,637, ಜುಲೈ 12ರಂದು 28,701, ಜುಲೈ 13ರಂದು 28,498, ಜುಲೈ 14ರಂದು 29,429, ಜುಲೈ 15ರಂದು 32,695, ಜುಲೈ 16ರಂದು 34,956, ಜುಲೈ 17ರಂದು 34,884, ಜುಲೈ 18ರಂದು 38,902, ಜುಲೈ 19ರಂದು 40,425, ಜುಲೈ 20ರಂದು 37,148, ಜುಲೈ 21ರಂದು 37,724, ಜುಲೈ 22ರಂದು 45,720, ಜುಲೈ 23ರಂದು 49,310, ಜುಲೈ 24ರಂದು 48,916, ಜುಲೈ 25ರಂದು 48,661, ಜುಲೈ 26ರಂದು 49,931, ಜುಲೈ 27ರಂದು 47,704, ಜುಲೈ 28ರಂದು 48,512 ಹಾಗೂ ಜುಲೈ 29ರಂದು 52,123, ಜುಲೈ 30ರಂದು 55,079, ಜುಲೈ 31ರಂದು 57,117 ಪ್ರಕರಣಗಳು ಪತ್ತೆಯಾಗಿವೆ.
ಆಗಸ್ಟ್ 1ರಂದು 54,736, ಆಗಸ್ಟ್ 2ರಂದು 52,972, ಆಗಸ್ಟ್ 3ರಂದು 52,050, ಆಗಸ್ಟ್ 4ರಂದು 52,509, ಆಗಸ್ಟ್ 5ರಂದು 56,282, ಆಗಸ್ಟ್ 6ರಂದು 62,538, ಆಗಸ್ಟ್ 7ರಂದು 61,537, ಆಗಸ್ಟ್ 8ರಂದು 64,399, ಆಗಸ್ಟ್ 9ರಂದು 62,064, ಆಗಸ್ಟ್ 10ರಂದು 53,601, ಆಗಸ್ಟ್ 11ರಂದು 60,963, ಆಗಸ್ಟ್ 12ರಂದು 66,999, ಆಗಸ್ಟ್ 13ರಂದು 64,553, ಆಗಸ್ಟ್ 14ರಂದು 65,002, ಆಗಸ್ಟ್ 15ರಂದು 63,489, ಆಗಸ್ಟ್ 16ರಂದು 57,982, ಆಗಸ್ಟ್ 17ರಂದು 55,079, ಆಗಸ್ಟ್ 18ರಂದು 64,531, ಆಗಸ್ಟ್ 19ರಂದು 69,652, ಆಗಸ್ಟ್ 20ರಂದು 68,898, ಆಗಸ್ಟ್ 21ರಂದು 69,878, ಆಗಸ್ಟ್ 22ರಂದು 69,239, ಆಗಸ್ಟ್ 23ರಂದು 61,408, ಆಗಸ್ಟ್ 24ರಂದು 60,975, ಆಗಸ್ಟ್ 25ರಂದು 67,151, ಆಗಸ್ಟ್ 26ರಂದು 75,760, ಆಗಸ್ಟ್ 27ರಂದು 77,266, ಆಗಸ್ಟ್ 28ರಂದು 76,472 ಹಾಗೂ ಆಗಸ್ಟ್ 29ರಂದು 78,761 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ