Coronavirus India Update : ದೇಶದಲ್ಲಿ ನಿಲ್ಲದ ಕೊರೋನಾ ಹಾವಳಿ : ನಿನ್ನೆ ಒಂದೇ ದಿನ 29,429 ಪ್ರಕರಣಗಳು ಪತ್ತೆ

ಮಂಗಳವಾರ 29,429 ಪ್ರಕರಣಗಳು ಕಂಡು ಬಂದಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 9,36,181ಕ್ಕೆ ಏರಿಕೆಯಾಗಿದೆ. ಇದಲ್ಲದೆ ನಿನ್ನೆಒಂದೇ ದಿನ 582 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

news18-kannada
Updated:July 15, 2020, 10:52 AM IST
Coronavirus India Update : ದೇಶದಲ್ಲಿ ನಿಲ್ಲದ ಕೊರೋನಾ ಹಾವಳಿ : ನಿನ್ನೆ ಒಂದೇ ದಿನ 29,429 ಪ್ರಕರಣಗಳು ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜುಲೈ.14): ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್​ ಡೌನ್​​ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಪರಿಣಾಮವಾಗಿ ನಾಲ್ಕೇ ದಿನಗಳ ಅಂತರದಲ್ಲಿ 1 ಲಕ್ಷಕ್ಕೂ ‌ಹೆಚ್ಚು ಜನರು‌ ಸೋಂಕು ಪೀಡಿತರಾಗಿ ದೇಶದ ಕೊರೋನಾ ಪೀಡಿತರ ಸಂಖ್ಯೆ 9 ಲಕ್ಷ ದಾಟಿದ್ದಾರೆ. ಈಗ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 29 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಭಾರತದಲ್ಲಿ ಜುಲೈ 1 ರಿಂದ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2 ರಿಂದ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3 ರಿಂದ 22  ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 9 ರಿಂದ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10 ರಿಂದ 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 11 ರಿಂದ 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಜುಲೈ 14 ರಂದು 29 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ 29,429 ಪ್ರಕರಣಗಳು ಕಂಡುಬಂದಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 9,36,181ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಮಂಗಳವಾರ 582 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 24 ಸಾವಿರ ದಾಟಿದೆ. ಸದ್ಯ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 24,309ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾ ದಿಂದ ಗುಣಮುಖರಾದವರು 5,92,032 ಜನ ಮಾತ್ರ. ದೇಶದಲ್ಲಿ ಇನ್ನೂ 3,19,840 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 11 ರಂದು 10,956, ಜೂನ್ 12 ರಂದು 11,458, ಜೂನ್ 13 ರಂದು 11,929, ಜೂನ್ 14 ರಂದು 11,502, ಜೂನ್ 15 ರಂದು 10,667, ಜೂನ್ 16 ರಂದು 10,974, ಜೂನ್ 17 ರಂದು 12,881, ಜೂನ್ 18 ರಂದು 13,586, ಜೂನ್ 19 ರಂದು 14,516, ಜೂನ್ 20 ರಂದು 15,413, ಜೂನ್ 21 ರಂದು 14,821, ಜೂನ್ 22 ರಂದು 14,933, ಜೂನ್ 23 ರಂದು 15,968, ಜೂನ್ 24 ರಂದು 16,922, ಜೂನ್ 25 ರಂದು 17,296, ಜೂನ್ 26 ರಂದು 18,552, ಜೂನ್ 27 ರಂದು 19,906



ಜೂನ್ 28 ರಂದು 19,459, ಜೂನ್ 29 ರಂದು 18,522, ಜೂನ್ 30 ರಂದು 18,653, ಜುಲೈ 1 ರಂದು 19,148, ಜುಲೈ 2 ರಂದು 20,903, ಜುಲೈ 3 ರಂದು 22,771, ಜುಲೈ 4 ರಂದು 24,850, ಜುಲೈ 5 ರಂದು 24,248, ಜುಲೈ 6 ರಂದು 22,252, ಜುಲೈ 7 ರಂದು 22,752, ಜುಲೈ 8 ರಂದು 24,879, ಜುಲೈ 9 ರಂದು 26,506, ಜುಲೈ 10 ರಂದು 27,114, ಜುಲೈ 11 ರಂದು 28,637, ಜುಲೈ 12 ರಂದು‌ 28,701, ಜುಲೈ 13 ರಂದು 28,498  ಜುಲೈ 14 ರಂದು 29,429 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: G Hareeshkumar
First published: July 15, 2020, 10:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading