Coronavirus India : ದೇಶದಲ್ಲಿ 2 ಲಕ್ಷ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆ

ಮಂಗಳವಾರ ಮತ್ತೆ ಒಂದೇ ದಿನ ದೇಶದಲ್ಲಿ 8,909 ಪ್ರಕರಣಗಳು ಕಂಡು ಬಂದಿವೆ. ಇದರಿಂದ ಭಾರತದ ಕೊರೋನಾ ವೈರಸ್ ಪೀಡಿತರ ಸಂಖ್ಯೆ 2,07,615ಕ್ಕೆ ಏರಿಕೆಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ(ಜೂ.03): ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್​ಡೌನ್​​ ಮಾಡಿ, ಸೋಂಕು ಹರಡುವಿಕೆ ತೀವ್ರವಾಗಿರುವಾಗ ಹೆಸರಿಗೆ ಮಾತ್ರ ಲಾಕ್​ ಡೌನ್​ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಕಳೆದ ವಾರಾಂತ್ಯದಿಂದ 8 ಸಾವಿರಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಕಂಡು ಬರುತ್ತಿರುವುದರಿಂದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.

ಕಳೆದ ವಾರ ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಮೇ 30 ರಿಂದ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಮಂಗಳವಾರ ಮತ್ತೆ ಒಂದೇ ದಿನ ದೇಶದಲ್ಲಿ 8,909 ಪ್ರಕರಣಗಳು ಕಂಡು ಬಂದಿವೆ. ಇದರಿಂದ ಭಾರತದ ಕೊರೋನಾ ವೈರಸ್ ಪೀಡಿತರ ಸಂಖ್ಯೆ 2,07,615ಕ್ಕೆ ಏರಿಕೆಯಾಗಿದೆ.

ಇದಲ್ಲದೆ ‌ಮಂಗಳವಾರ ಒಂದೇ ದಿನ ಕೊರೊನಾದಿಂದ 217 ಜನ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 5,815ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 1,00,303 ಜನ ಮಾತ್ರ  ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.

ಇದನ್ನೂ ಓದಿ : ಸೋನಿಯಾ ಗಾಂಧಿ ಪ್ರಕರಣದಲ್ಲಿ ಪೊಲೀಸರ ಮೇಲೆ ಡಿಕೆಶಿ ಒತ್ತಡ ಆರೋಪ; ಕೆಪಿಸಿಸಿ ಅಧ್ಯಕ್ಷರ ವಿರುದ್ದ ದೂರು ದಾಖಲು

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ  ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10ರಂದು 4,213 ಜನರಿಗೆ, ಮೇ 11 ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ 13 ರಂದು 3,722 ಮಂದಿಗೆ ಹಾಗೂ ಮೇ 14 ರಂದು 3, 967 ಜನರಿಗೆ, ಮೇ 15 ರಂದು 3,970 ಮಂದಿಗೆ, ಮೇ 16 ರಂದು 4,987 ಜನರಿಗೆ, ಮೇ 17 ರಂದು 5,242, ಮೇ 18 ರಂದು 4,970, ಮೇ 19 ರಂದು 5,611, ಮೇ 20 ರಂದು 5,609, ಮೇ 21 ರಂದು 6,088, ಮೇ 22 ರಂದು 6,654, ಮೇ 23 ರಂದು 6,767, ಮೇ 24 ರಂದು 6,977, ಮೇ 25 ರಂದು 6,535, ಮೇ 26 ರಂದು 6,387, ಮೇ 27 ರಂದು 6,566, ಮೇ 28 ರಂದು 7,466, ಮೇ 29 ರಂದು 7,964, ಮೇ 30 ರಂದು 8,380, ಮೇ 31 ರಂದು 8,392, ಜೂನ್ 1 ರಂದು 8,171 ಹಾಗೂ ಜೂನ್ 2 ರಂದು 8,909 ಹೊಸ ಪ್ರಕರಣಗಳು ಪತ್ತೆಯಾಗಿವೆ.
First published: