ನವದೆಹಲಿ (ಜೂ. 4): ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿದ್ದ, ಎಲ್ಲರನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಕತ್ತಲಿಗೆ ನೂಕಿದ್ದ, ಕರಾಳವಾಗಿ ಪರಿಣಮಿಸಿದ್ದ ಪರಿಸ್ಥಿತಿ ಸುಧಾರಣೆಯ ಕಡೆಗೆ ಸಾಗಿದೆ. ಕಳೆದ ಎಂಟು ದಿನಗಳಿಂದ ನಿರಂತರವಾಗಿ ದೇಶದಲ್ಲಿ ಕೊರೋನಾ ಸೋಂಕು ಪೀಡಿತರಾಗುವವರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಆಗಿವೆ. ಕೊರೋನಾದಿಂದ ಸಾಯುವವರ ಸಂಖ್ಯೆ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಚಿಗರುತ್ತಲೇ ಇದೆ. ಇದರಿಂದಾಗಿ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗಬಹುದು ಎಂಬ ಲಕ್ಷಣಗಳು ಗೋಚರಿಸತೊಡಗಿವೆ. ನಿನ್ನೆ (ಜೂನ್ 3ರಂದು) ಕೊರೋನಾ ಸೋಂಕು, ಸಾವು, ಗುಣ ಆದವರ ಬಗೆಗೆ ದಾಖಲಾದ ಹೈಲೈಟ್ಸ್ ಅಂಕಿ ಅಂಶಗಳು ಈ ಕೆಳಕಂಡಂತಿವೆ.
*ದೇಶದಲ್ಲಿ ಕಳೆದ 24 ದಿನಗಳಲ್ಲಿ 1,32,364 ಪ್ರಕರಣಗಳು ಪತ್ತೆ ಆಗಿವೆ. ಇದರಿಂದ ದೇಶದ ಕೊರೋನಾ ಸೋಂಕಿತರ ಸಂಖ್ಯೆ 2,85,74,350ಕ್ಕೆ ಏರಿಕೆ ಆಗಿದೆ.
* ನಿನ್ನೆ ಕೊರೋನಾದಿಂದ 2,713 ಜನರ ಸಾವನ್ನಪ್ಪಿದ್ದಾರೆ. ಈವರೆಗೆ ಕೊರೋನಾ ಮಹಾಮಾರಿಗೆ ಬಲಿ ಆದವರು 3,40,702 ಜನ.
* ಕಳೆದ 24ಗಂಟೆಯಲ್ಲಿ ಗುಣ ಆದವರು 2,07,071 ಜನ. ಇದರಿಂದ ಈವರೆಗೆ ಕೊರೋನಾದಿಂದ 2,65,97,655 ಜನ ಗುಣ ಆದಂತಾಗಿದೆ.
* ದೇಶದಲ್ಲಿ ಇನ್ನು ಸಕ್ರೀಯವಾಗಿರುವ ಕೇಸುಗಳು 16,35,993. ಇದರಿಂದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಇಳಿಮುಖವಾಗಿ ಸಾಗುತ್ತಿರುವ ಟ್ರೆಂಡ್ ಸಾಬೀತಾಗಿದೆ.
* ಚೇತರಿಕೆಗಳು ಸತತ 22ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸಿದೆ. ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇಕಡಾ 93.08ಕ್ಕೆ ಹೆಚ್ಚಾಗಿದೆ.
* ಸಾಪ್ತಾಹಿಕ ಸಕಾರಾತ್ಮಕ ದರ ಪ್ರಸ್ತುತ ಶೇಕಡ 7.27ಕ್ಕೆ ಇಳಿದಿದೆ. ದೈನಂದಿನ ಸಕಾರಾತ್ಮಕತೆ ದರ ಶೇಕಡಾ 6.38ಕ್ಕೆ ಇಳಿದಿದೆ. ಸತತವಾಗಿ 11 ದಿನ ಶೇಕಡಾ 11ಕ್ಕಿಂತ ಕಡಿಮೆ ಆಗಿದೆ.
* ಕೊರೋನಾ ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ. ಈವರೆಗೆ ಒಟ್ಟು 35.7 ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ.
* 22.41 ಕೋಟಿ ಡೋಸೇಜ್ ಅನ್ನು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ