Coronavirus India Update : ಭಾರತದಲ್ಲಿ 21 ಲಕ್ಷದ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

Coronavirus India Updates : ಆಗಸ್ಟ್ 8 ರಂದು 64,399 ಕಂಡು ಬಂದಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 21,53,011ಕ್ಕೆ ಏರಿಕೆಯಾಗಿದೆ. ಇದಲ್ಲದೆ ಶನಿವಾರ 861 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ

news18-kannada
Updated:August 9, 2020, 11:51 AM IST
Coronavirus India Update : ಭಾರತದಲ್ಲಿ 21 ಲಕ್ಷದ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಆಗಸ್ಟ್​. 09): ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು ಹರಡುವಿಕೆ ಈಗ ಶರವೇಗ ಪಡೆದುಕೊಂಡಿದೆ. ಕೊರೋನಾ ಕಡಿಮೆ ಇದ್ದಾಗ ಲಾಕ್​ಡೌನ್ ಮಾಡಿ ತೀವ್ರಗೊಂಡಾಗ‌ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 21 ಲಕ್ಷದ ಗಡಿ ದಾಟಿದೆ. ಅದೂ ಅಲ್ಲದೆ ಮೂರನೇ ಹಂತದ ಅನ್​ಲಾಕ್​‌ ಕೂಡ ಜಾರಿ ಆಗುತ್ತಿದ್ದಂತೆ ಪ್ರತಿ ದಿನವೂ ಅರ್ಧ ಲಕ್ಷಕ್ಕೂ ಹೆಚ್ಚು ಸೋಂಕು ಪೀಡಿತರು ಕಾಣಿಸಿಕೊಳ್ಳುತ್ತಿದ್ದರು. ಈಗ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ಭಾರತದಲ್ಲಿ ಜುಲೈ 1 ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 20 ರಿಂದ 37 ಸಾವಿರಕ್ಕೂ ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ಆಗಸ್ಟ್ 1 ರಂದು 54,736 ಪ್ರಕರಣಗಳು, ಆಗಸ್ಟ್ 2ರಂದು 52,972 ಪ್ರಕರಣಗಳು, ಆಗಸ್ಟ್ 3 ರಂದು 52,050 ಪ್ರಕರಣಗಳು, ಆಗಸ್ಟ್ 4 ರಂದು 52,509 ಪ್ರಕರಣಗಳು ವರದಿಯಾಗಿದ್ದವು.

ಈಗ ಮತ್ತೆ ಹೆಚ್ಚಾಗಿ ಆಗಸ್ಟ್ 5ರಂದು 56,282, ಆಗಸ್ಟ್ 6 ರಂದು 62,538 ಮತ್ತು ಆಗಸ್ಟ್ 7ರಂದು 61,537 ಪ್ರಕರಣಗಳು ಗೋಚರಿಸಿದ್ದವು. ಆಗಸ್ಟ್ 8 ರಂದು 64,399 ಕಂಡು ಬಂದಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 21,53,011ಕ್ಕೆ ಏರಿಕೆಯಾಗಿದೆ.
ಇದಲ್ಲದೆ ಶನಿವಾರ 861 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 43 ಸಾವಿರದ ಗಡಿ‌ ದಾಟಿದ್ದು 43,379ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 14,80,885 ಜನ ಮಾತ್ರ. ದೇಶದಲ್ಲಿ ಇನ್ನೂ 6,28,747 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಪಂಜಾಬ್ ಕಾಂಗ್ರೆಸ್​ನಲ್ಲೂ ಬಿರುಕು? ಮುಂದುವರಿದ ಸಿಎಂ ಅಮರೀಂದರ್, ಸಂಸದ ಬಾಜ್ವಾ ಜಟಾಪಟಿ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜುಲೈ 1 ರಂದು 19,148, ಜುಲೈ 2 ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248, ಜುಲೈ 6 ರಂದು 22,252, ಜುಲೈ 7ರಂದು 22,752, ಜುಲೈ 8 ರಂದು 24,879, ಜುಲೈ 9 ರಂದು 26,506, ಜುಲೈ 10ರಂದು 27,114, ಜುಲೈ 11 ರಂದು 28,637, ಜುಲೈ 12 ರಂದು‌ 28,701, ಜುಲೈ 13 ರಂದು 28,498, ಜುಲೈ 14 ರಂದು 29,429, ಜುಲೈ 15 ರಂದು 32,695, ಜುಲೈ 16 ರಂದು‌ 34,956, ಜುಲೈ 17 ರಂದು 34,884, ಜುಲೈ 18 ರಂದು 38,902, ಜುಲೈ 19 ರಂದು 40,425, ಜುಲೈ 20 ರಂದು 37,148.
ಜುಲೈ 21ರಂದು 37,724, ಜುಲೈ 22 ರಂದು 45,720, ಜುಲೈ 23 ರಂದು 49,310, ಜುಲೈ 24ರಂದು 48,916,‌ ಜುಲೈ 25 ರಂದು 48,661, ಜುಲೈ 26 ರಂದು 49,931, ಜುಲೈ 27ರಂದು 47,704, ಜುಲೈ 28 ರಂದು 48,512 ಹಾಗೂ ಜುಲೈ 29 ರಂದು 52,123, ಜುಲೈ 30 ರಂದು 55,079, ಜುಲೈ‌ 31 ರಂದು 57,117, ಆಗಸ್ಟ್ 1 ರಂದು 54,736, ಆಗಸ್ಟ್ 2 ರಂದು 52,972, ಆಗಸ್ಟ್ 3 ರಂದು 52,050, ಆಗಸ್ಟ್ 4 ರಂದು 52,509, ಆಗಸ್ಟ್ 5 ರಂದು 56,282, ಆಗಸ್ಟ್ 6ರಂದು 62,538, ಆಗಸ್ಟ್ 7 ರಂದು 61,537 ಹಾಗೂ ಆಗಸ್ಟ್ 8ರಂದು 64,399 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: G Hareeshkumar
First published: August 9, 2020, 11:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading