HOME » NEWS » Coronavirus-latest-news » CORONAVIRUS INDIA IN THE MONTH OF MAY EVERY DAY 8 LAKH CORONA CASES FOUND IN INDIA DBDEL LG

Coronavirus: ದೇಶದಲ್ಲಿ ಮುಂದಿನ‌ ತಿಂಗಳು ಪ್ರತಿದಿನ 8 ಲಕ್ಷ ಕೊರೋನಾ ಕೇಸ್ ದಾಖಲಾಗುವ ಸಾಧ್ಯತೆ: ಅಧ್ಯಯನ

ಹೊಸ ಅಧ್ಯಯನದಲ್ಲಿ ಸಂಶೋಧಕರು ಅಂದಾಜು ಮಾಡಿರುವ ಪ್ರಕಾರ 2022 ಏಪ್ರಿಲ್ 12 ರ ಹೊತ್ತಿಗೆ ಭಾರತದಲ್ಲಿ ಶೇಕಡಾ 24ರಷ್ಟು ಜನರಿಗೆ ಕೋವಿಡ್-19 ಸೋಂಕು ತಗುಲಿರುತ್ತದೆ. ಮೇ ತಿಂಗಳ ಎರಡನೇ ವಾರದಲ್ಲಿ 8 ಲಕ್ಷ ಹೊಸ ದೈನಂದಿನ ಪ್ರಕರಣಗಳು  ದಾಖಲಾಗುವ ಸಾಧ್ಯತೆ ಇದೆ.

news18-kannada
Updated:April 24, 2021, 12:31 PM IST
Coronavirus: ದೇಶದಲ್ಲಿ ಮುಂದಿನ‌ ತಿಂಗಳು ಪ್ರತಿದಿನ 8 ಲಕ್ಷ ಕೊರೋನಾ ಕೇಸ್ ದಾಖಲಾಗುವ ಸಾಧ್ಯತೆ: ಅಧ್ಯಯನ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ (ಏ.‌ 24): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಪ್ರತಿ ದಿನ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಈ ನಡುವೆ ಮುಂದಿನ‌ ತಿಂಗಳು ಕೊರೋನಾ ಇನ್ನಷ್ಟು ಹೆಚ್ಛಳ ಆಗಲಿದೆ, ಭಾರೀ ದುರ್ಘಟನೆ ಸಂಭವಿಸಲಿದೆ ಎಂಬ ಕರಾಳ ಭವಿಷ್ಯವೊಂದು ಕೇಳಿಬಂದಿದೆ.

ಭಾರತದಲ್ಲಿ ತೀವ್ರವಾಗಿ ಹೆಚ್ಚಳ ಆಗುತ್ತಿರುವ ಕೊರೊನಾ ಬಗ್ಗೆ ಅಧ್ಯಯನ ನಡೆಸಿರುವ ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯುಎಷನ್ (IHME) ಸಂಸ್ಥೆ ಇದೇ ಏಪ್ರಿಲ್ 15ರಂದು ಪೇಪರ್ ಪ್ರೆಸೆಂಟ್ ಮಾಡಿದ್ದ ಅದರಲ್ಲಿ ಮುಂದಿನ‌ ತಿಂಗಳು ಕೊರೋನಾ ಇನ್ನಷ್ಟು ಹೆಚ್ಛಳ ಆಗಲಿದೆ, ಭಾರೀ ದುರ್ಘಟನೆ ಸಂಭವಿಸಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯುಎಷನ್ ಅಧ್ಯಯನ ವರದಿ ಪ್ರಕಾರ ಮೇ ತಿಂಗಳ ಮಧ್ಯ ಭಾಗದಲ್ಲಿ ಭಾರತದಲ್ಲಿ ಕೊರೊನಾದಿಂದ ಸಾಯುವವರ ಸಂಖ್ಯೆ 5,600 ದಾಟಲಿದೆ. ಏಪ್ರಿಲ್ 12ರಿಂದ ಆಗಸ್ಟ್ 1ರ ನಡುವೆ 3,29,000 ಸಾವುಗಳು ಆಗಬಹುದು. ಇದರಿಂದ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 6,65,000ಕ್ಕೆ ಏರಿಕೆಯಾಗಬಹುದು ಎಂದು ಹೇಳಿದೆ.

Coronavirus India Updates: ದೇಶದಲ್ಲಿ 3ನೇ ದಿನವೂ 3 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ

ಹೊಸ ಅಧ್ಯಯನದಲ್ಲಿ ಸಂಶೋಧಕರು ಅಂದಾಜು ಮಾಡಿರುವ ಪ್ರಕಾರ 2022 ಏಪ್ರಿಲ್ 12 ರ ಹೊತ್ತಿಗೆ ಭಾರತದಲ್ಲಿ ಶೇಕಡಾ 24ರಷ್ಟು ಜನರಿಗೆ ಕೋವಿಡ್-19 ಸೋಂಕು ತಗುಲಿರುತ್ತದೆ. ಮೇ ತಿಂಗಳ ಎರಡನೇ ವಾರದಲ್ಲಿ 8 ಲಕ್ಷ ಹೊಸ ದೈನಂದಿನ ಪ್ರಕರಣಗಳು  ದಾಖಲಾಗುವ ಸಾಧ್ಯತೆ ಇದೆ.

ಹಿಂದೆ ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯುಎಷನ್ ಸಂಸ್ಥೆಯು 'ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯು 2020ರ ಸೆಪ್ಟೆಂಬರ್ ನಿಂದ 2021ರ ಫೆಬ್ರವರಿ ಮಧ್ಯದವರೆಗೆ ಕುಸಿಯಲಿವೆ' ಎಂದು ಹೇಳಿತ್ತು. ಆ ಅಧ್ಯಯನ ನಿಜವಾಗಿದ್ದ ಹಿನ್ನಲೆಯಲ್ಲಿ ಹೊಸ ಭವಿಷ್ಯವೂ ನಿಜವಾಗಬಹುದು ಎಂಬ ಆತಂಕ ಶುರುವಾಗಿದೆ.
Youtube Video
ಎರಡನೇ ಅಲೆ ಶುರುವಾದ ಮೇಲೆ ಇದೇ ಮೊದಲ ಬಾರಿಗೆ ಏಪ್ರಿಲ್ 4ರಂದು 1,03,558 ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಏಪ್ರಿಲ್ 5ರಂದು 96,982, ಏಪ್ರಿಲ್ ‌6ರಂದು 1,15,736, ಏಪ್ರಿಲ್ 7ರಂದು 1,26,789, ಏಪ್ರಿಲ್ 8ರಂದು 1,31,968, ಏಪ್ರಿಲ್ 9ರಂದು 1,45,384, ಏಪ್ರಿಲ್ 10ರಂದು 1,52,879, ಏಪ್ರಿಲ್ 11ರಂದು 1,68,912, ಏಪ್ರಿಲ್ 12ರಂದು 1,61,736, ಏಪ್ರಿಲ್ 13ರಂದು 1,84,372, ಏಪ್ರಿಲ್ 14ರಂದು 2,00,739, ಏಪ್ರಿಲ್ 15ರಂದು 2,17,353, ಏಪ್ರಿಲ್ 16ರಂದು 2,34,692, ಏಪ್ರಿಲ್ 17ರಂದು 2,61,500 ಏಪ್ರಿಲ್ 18ರಂದು 2,73,810, ಏಪ್ರಿಲ್ 19ರಂದು 2,59,170, ಏಪ್ರಿಲ್ 20ರಂದು 2,95,041, ಏಪ್ರಿಲ್ 21ರಂದು 3,14,835 ಹಾಗೂ ಏಪ್ರಿಲ್ 22ರಂದು 3,32,730 ಪ್ರಕರಣಗಳು ಕಂಡುಬಂದಿದ್ದವು. ಈಗ ಏಪ್ರಿಲ್ 23ರಂದು 3,46,786 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Latha CG
First published: April 24, 2021, 12:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories