ನವದೆಹಲಿ (ಅ. 12): ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು, ಅತಿ ಹೆಚ್ಚು ಕೊರೋನಾ ಸೋಂಕು ಪೀಡಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲ ಸ್ಥಾನದತ್ತ ವೇಗವಾಗಿ ಸಾಗುತ್ತಿದೆ. ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ 71 ಲಕ್ಷ ದಾಟಿದೆ. ಇದಲ್ಲದೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಈಗ 1 ಲಕ್ಷದ ಗಡಿಯನ್ನೂ ದಾಟಿದೆ. ಪ್ರತಿದಿನ ಈಗ 70 ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಅಕ್ಟೋಬರ್ 8ರಂದು 70,496 ಪ್ರಕರಣಗಳು, ಅಕ್ಟೋಬರ್ 9ರಂದು 73,272 ಪ್ರಕರಣಗಳು, ಅಕ್ಟೋಬರ್ 10ರಂದು 74,383 ಪ್ರಕರಣಗಳು ಪತ್ತೆಯಾಗಿದ್ದವು. ಈಗ ಅಕ್ಟೋಬರ್ 11ರಂದು 66,732 ಕಂಡುಬಂದಿದ್ದು, ದೇಶದ ಕೊರೋನಾ ಪೀಡಿತರ ಸಂಖ್ಯೆ 71,20,539ಕ್ಕೆ ಏರಿಕೆಯಾಗಿದೆ. ಇದಲ್ಲದೆ ಭಾನುವಾರ 816 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,09,150ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 61,49,536 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 8,61,853 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ, ಸೆಪ್ಟೆಂಬರ್ 15ರಂದು 90,123, ಸೆಪ್ಟೆಂಬರ್ 16ರಂದು 97,894, ಸೆಪ್ಟೆಂಬರ್ 17ರಂದು 96,424, ಸೆಪ್ಟೆಂಬರ್ 18ರಂದು 93,337, ಸೆಪ್ಟೆಂಬರ್ 19ರಂದು 92,605 ಸೆಪ್ಟೆಂಬರ್ 20ರಂದು 86,961, ಸೆಪ್ಟೆಂಬರ್ 21ರಂದು 75,083 ಸೆಪ್ಟೆಂಬರ್ 22ರಂದು 83,347, ಸೆಪ್ಟೆಂಬರ್ 23ರಂದು 86,508, ಸೆಪ್ಟೆಂಬರ್ 24ರಂದು 86,052, ಸೆಪ್ಟಂಬರ್ 25ರಂದು 85,362, ಸೆಪ್ಟೆಂಬರ್ 26ರಂದು 88,600, ಸೆಪ್ಟೆಂಬರ್ 27ರಂದು 82,170, ಸೆಪ್ಟೆಂಬರ್ 28ರಂದು 70,589, ಸೆಪ್ಟೆಂಬರ್ 29ರಂದು, ಸೆಪ್ಟೆಂಬರ್ 30ರಂದು 86,821, ಅಕ್ಟೋಬರ್ 1ರಂದು 81,484, ಅಕ್ಟೋಬರ್ 2ರಂದು 79,476, ಅಕ್ಟೋಬರ್ 3ರಂದು 75,829, ಅಕ್ಟೋಬರ್ 4ರಂದು 74,442, ಅಕ್ಟೋಬರ್ 5ರಂದು 61,267, ಅಕ್ಟೋಬರ್ 6ರಂದು 72,049 ಹಾಗೂ ಅಕ್ಟೋಬರ್ 7ರಂದು 78,524, ಅಕ್ಟೋಬರ್ 8ರಂದು 70,496, ಅಕ್ಟೋಬರ್ 9ರಂದು 73,272, ಅಕ್ಟೋಬರ್ 10ರಂದು 74,383 ಹಾಗೂ ಅಕ್ಟೋಬರ್ 11ರಂದು 66,732 ಹೊಸ ಪ್ರಕರಣಗಳು ಪತ್ತೆಯಾಗಿವೆ.