Coronavirus India: ದೇಶದಲ್ಲಿ ನಿಲ್ಲದ ಕೊರೋನಾ ಹಾವಳಿ; 55 ಲಕ್ಷ ದಾಟಿದ‌ ಸೋಂಕಿತರ ಸಂಖ್ಯೆ

ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 88 ಸಾವಿರದ ಗಡಿ‌ ದಾಟಿದ್ದು 88,935ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 44,97,868 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,75,861 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

news18-kannada
Updated:September 22, 2020, 11:30 AM IST
Coronavirus India: ದೇಶದಲ್ಲಿ ನಿಲ್ಲದ ಕೊರೋನಾ ಹಾವಳಿ; 55 ಲಕ್ಷ ದಾಟಿದ‌ ಸೋಂಕಿತರ ಸಂಖ್ಯೆ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ, (ಸೆ. 22): ಭಾರತದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು, ಅತಿಹೆಚ್ಚು ಕೊರೊನಾ ಸೋಂಕು ಪೀಡಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೆ ಸ್ಥಾನದತ್ತ ಬಿರಬಿರನೆ ಸಾಗುತ್ತಿದೆ. ಆದರೆ, ಪ್ರತಿದಿನ ಸುಮಾರು ಒಂದು ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ತುಸು ಕಡಿಮೆಯಾಗಿದೆ. ಆದರೂ ದೇಶದ ಕೊರೋನಾ ಪೀಡಿತರ ಸಂಖ್ಯೆ 55 ಲಕ್ಷ ದಾಟಿದೆ. ಭಾರತದಲ್ಲಿ ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲು ಆರಂಭಿಸಿದವು.

ಸೆಪ್ಟೆಂಬರ್ 12ರಂದು 94,372 ಪ್ರಕರಣಗಳು, ಸೆಪ್ಟೆಂಬರ್ 13ರಂದು 92,071 ಪ್ರಕರಣಗಳು, ಸೆಪ್ಟೆಂಬರ್ 14ರಂದು 83,809 ಪ್ರಕರಣಗಳು ಸೆಪ್ಟೆಂಬರ್ 15ರಂದು 90,123 ಪ್ರಕರಣಗಳು, ಸೆಪ್ಟೆಂಬರ್ 16ರಂದು 97,894 ಪ್ರಕರಣಗಳು, ಸೆಪ್ಟೆಂಬರ್ 17ರಂದು 96,424, ಸೆಪ್ಟೆಂಬರ್ 18ರಂದು 93,337 ಪ್ರಕರಣಗಳು, ಸೆಪ್ಟೆಂಬರ್ 19ರಂದು 92,605 ಪ್ರಕರಣಗಳು ಹಾಗೂ ಸೆಪ್ಟೆಂಬರ್ 20ರಂದು 86,961 ಪ್ರಕರಣಗಳು ಪತ್ತೆಯಾಗಿದ್ದವು‌. ಸೆಪ್ಟೆಂಬರ್ 21ರಂದು 75,083 ಪ್ರಕರಣಗಳು ಕಂಡುಬಂದಿದ್ದು, ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 55,62,664ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Karnataka Reservoir Water Level: ಭಾರೀ ಮಳೆಯಿಂದ ಉಕ್ಕಿ ಹರಿದ ನದಿಗಳು; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಇದಲ್ಲದೆ ಸೋಮವಾರ 1,053 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 88 ಸಾವಿರದ ಗಡಿ‌ ದಾಟಿದ್ದು 88,935ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 44,97,868 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,75,861 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706, ಸೆಪ್ಟೆಂಬರ್ 9ರಂದು 95,735, ಸೆಪ್ಟೆಂಬರ್ 10ರಂದು 96,551, ಸೆಪ್ಟೆಂಬರ್ 11ರಂದು 97,570, ಸೆಪ್ಟೆಂಬರ್ 12ರಂದು 94,372, ಸೆಪ್ಟೆಂಬರ್ 13ರಂದು 92,071, ಸೆಪ್ಟೆಂಬರ್ 14ರಂದು 83,809, ಸೆಪ್ಟೆಂಬರ್ 15ರಂದು 90,123, ಸೆಪ್ಟೆಂಬರ್ 16ರಂದು 97,894, ಸೆಪ್ಟೆಂಬರ್ 17ರಂದು 96,424, ಸೆಪ್ಟೆಂಬರ್ 18ರಂದು 93,337, ಸೆಪ್ಟೆಂಬರ್ 19ರಂದು 92,605 ಸೆಪ್ಟೆಂಬರ್ 20ರಂದು‌ 86,961 ಹಾಗೂ ಸೆಪ್ಟೆಂಬರ್ 21ರಂದು 75,083 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Sushma Chakre
First published: September 22, 2020, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading