HOME » NEWS » Coronavirus-latest-news » CORONAVIRUS INDIA COVID 19 CASES IN INDIA INCREASING DAY BY DAY HERE IS THE SHOCKING NEWS SCT DBDEL

Coronavirus India: ಭಾರತದಲ್ಲಿ ಇನ್ನಷ್ಟು ಕ್ರೂರ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಮಹಾಮಾರಿ ಕೊರೋನಾ!

ಭಾರತದಲ್ಲಿ ಈಗ ಮೂರು ಲಕ್ಷ ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭವಾಗಿವೆ. ಇದಲ್ಲದೆ ಮಹಾಮಾರಿ ಕೊರೋನಾ ಇನ್ನಷ್ಟು ಕ್ರೂರ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

news18-kannada
Updated:April 22, 2021, 9:01 AM IST
Coronavirus India: ಭಾರತದಲ್ಲಿ ಇನ್ನಷ್ಟು ಕ್ರೂರ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಮಹಾಮಾರಿ ಕೊರೋನಾ!
ಕೊರೋನಾ
  • Share this:
ನವದೆಹಲಿ, ಏ.‌ 21: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ಮೂರು ಲಕ್ಷ ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭವಾಗಿವೆ. ಇದಲ್ಲದೆ ಮಹಾಮಾರಿ ಕೊರೋನಾ ಇನ್ನಷ್ಟು ಕ್ರೂರ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಭಾರತದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಡಬಲ್ ಮ್ಯುಟೇಷನ್ ಆದಾಗಲೇ ತಲ್ಲಣ ಸೃಷ್ಟಿಯಾಗಿತ್ತು. ಆದರೀಗ ದೇಶದಲ್ಲಿ ಕೊರೋನಾ ವೈರಸ್ ತ್ರಿಬಲ್ ಮ್ಯುಟೇಷನ್ ಆಗಿದೆ.‌ ಮತ್ತೊಂದು ಹೊಸ ಸ್ವರೂಪ ಪತ್ತೆಯಾಗಿದೆ. ತ್ರಿಬಲ್ ಮ್ಯೂಟೇಷನ್ ಆಗಿರುವ ವೈರಸ್‌ಗಳು ಬಹಳ ಬಲಿಷ್ಠವಾಗಿದ್ದು ಅದರ ಪರಿಣಾಮ ಭೀಕರವಾಗಿರಲಿದೆ. ತ್ರಿಬಲ್ ಮ್ಯೂಟೇಟೆಡ್ ಕೊರೋನಾ ವೈರಸ್ ಭಾರತದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲೂ ಕಂಡು ಬಂದಿದೆ. ಆ ದೇಶಗಳಲ್ಲಿ ಸೋಂಕು ಹೆಚ್ಚಾಗಲು ಇದೇ ವೈರಸ್ ಕಾರಣ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ತಜ್ಞರಿಂದ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಭಾರತದಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ತ್ರಿಬಲ್ ಮುಟ್ಯೇಷನ್ ವೈರಸ್ ಪತ್ತೆಯಾಗಿದೆ. ಶರವೇಗದಲ್ಲಿ ಹರಡುವ ಸಾಮರ್ಥ್ಯವುಳ್ಳ ಈ ತ್ರಿಬಲ್ ಮ್ಯೂಟೆಟ್ ವೈರಸ್ ದೇಶದಲ್ಲಿ ಈಗ ಶುರುವಾಗಿದ್ದು ಈ 3 ರಾಜ್ಯಗಳಿಂದ ಬೇರೆ ರಾಜ್ಯಗಳಿಗೂ ಹರಡುವ ಆತಂಕ ಸೃಷ್ಟಿಸಿದೆ.

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Youtube Video

ಆದರೆ, ಈಗ ಎರಡನೇ ಅಲೆ ಶುರುವಾದ ಮೇಲೆ ಇದೇ ಮೊದಲ ಬಾರಿಗೆ ಏಪ್ರಿಲ್ 4ರಂದು 1,03,558 ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಏಪ್ರಿಲ್ 5ರಂದು 96,982, ಏಪ್ರಿಲ್ ‌6ರಂದು 1,15,736, ಏಪ್ರಿಲ್ 7ರಂದು 1,26,789, ಏಪ್ರಿಲ್ 8ರಂದು 1,31,968, ಏಪ್ರಿಲ್ 9ರಂದು 1,45,384, ಏಪ್ರಿಲ್ 10ರಂದು 1,52,879, ಏಪ್ರಿಲ್ 11ರಂದು 1,68,912, ಏಪ್ರಿಲ್ 12ರಂದು 1,61,736, ಏಪ್ರಿಲ್ 13ರಂದು 1,84,372, ಏಪ್ರಿಲ್ 14ರಂದು 2,00,739, ಏಪ್ರಿಲ್ 15ರಂದು 2,17,353, ಏಪ್ರಿಲ್ 16ರಂದು 2,34,692, ಏಪ್ರಿಲ್ 17ರಂದು 2,61,500 ಏಪ್ರಿಲ್ 18ರಂದು 2,73,810 ಹಾಗೂ ಏಪ್ರಿಲ್ 19ರಂದು 2,59,170 ಪ್ರಕರಣಗಳು ಕಂಡುಬಂದಿದ್ದವು.‌ ಈಗ ಏಪ್ರಿಲ್ 20ರಂದು 2,95,041 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Sushma Chakre
First published: April 22, 2021, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories