ಕೊರೋನಾ ಮುಕ್ತವಾಗಿದ್ದ ಮೈಸೂರಿಗೆ ಮತ್ತೆ ಬಂದ ಹೆಮ್ಮಾರಿ ವೈರಸ್‌; ಮುಂಬೈ ಮೂಲದಿಂದ ಮತ್ತೆ ಸೋಂಕು

Coronavirus In Mysore: ಕ್ವಾರಂಟೈನ್‌ನಲ್ಲಿದ್ದವರು ಪಾಸಿಟಿವ್ ಆತಂಕ ಪಡುವ ಅಗತ್ಯ ಇಲ್ಲ. ಸೋಂಕಿತನನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಹೀಗಾಗಿ ಯಾರು ಆತಂಕ ಪಡಬೇಕಿಲ್ಲ, ಸೋಂಕಿತನನ್ನ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು (ಮೇ 18); ಕಳೆದ 20 ದಿನಗಳಿಂದ ಕೊರೋನಾದಿಂದ ಮುಕ್ತವಾಗಿ ನೆಮ್ಮದಿಯಿಂದ ಇದ್ದ ಮೈಸೂರು ಇದೀಗ ಮತ್ತೆ ಕೊರೊನಾ ಆರ್ಭಕ್ಕೆ ಸಿಲುಕಿದೆ. ಇಂದು ಬೆಳಗ್ಗೆ ಬಿಡುಗಡೆಯಾದ ರಾಜ್ಯ ಹೆಲ್ತ್‌ ಬುಲೆಟಿನ್‌ನಲ್ಲಿ ಮೈಸೂರು ಜಿಲ್ಲೆಯ ಓರ್ವ ವ್ಯಕ್ತಿಯಲ್ಲಿ ಮತ್ತೆ ಮಾರಣಾಂತಿಕ ಸೋಂಕು ಪತ್ತೆಯಾಗಿದೆ. ಆ ಮೂಲಕ ಸಂಪೂರ್ಣ ಕೊರೊನಾ ಮುಕ್ತವಾಗಿದ್ದ ಮೈಸೂರಿಗೆ ಕೊರೊನಾ ವೈರಸ್ ಎರಡನೇ ಹಂತದ ದಾಳಿಗೆ ಮುಂದಾದಂತಾಗಿದೆ.

90 ಪಾಸಿಟಿವ್ ಕೇಸ್‌ಗಳಿಂದ ಮುಕ್ತವಾಗಿದ್ದ ಮೈಸೂರು ಜಿಲ್ಲೆಗೆ ಮುಂಬೈ ಮಹಾರಾಷ್ಟ್ರ ರಾಜ್ಯಕ್ಕೆ ಹೋಗಿ ಬಂದಿದ್ದ ವ್ಯಕ್ತಿ ಆಗಮಿಸಿದ್ದರು. ಆ ವ್ಯಕ್ತಿಯನ್ನ ಕ್ವಾರಂಟೈನ್‌ನಲ್ಲಿ ಇಟ್ಟು ನಿಗಾ ವಹಿಸಿ ಅವರ ಗಂಟಲು ದ್ರವ ಮಾದರಿಯನ್ನ ಪರೀಕ್ಷೆಗೆ ಕಳುಹಿಸಿದ್ದ ಜಿಲ್ಲಾಡಳಿತಕ್ಕೆ ಇಂದಿನ ರಾಜ್ಯ ಹೆಲ್ತ್‌ ಬುಲೆಟಿನ್‌ನಲ್ಲಿ P1225 ವ್ಯಕ್ತಿಗೆ ಸೋಂಕು ಇರುವುದು ಧೃಢಪಟ್ಟಿದೆ.

46 ವರ್ಷದ ಕೆ.ಆರ್. ನಗರ ಮೂಲದ ವ್ಯಕ್ತಿ ವಾರದ ಹಿಂದೆಯಷ್ಟೆ ಮುಂಬೈನಿಂದ ಮೈಸೂರಿಗೆ ಬಂದಿದ್ದ. ಈ ಹಿನ್ನೆಲೆಯಲ್ಲಿ ಈತನನ್ನ  ಫೆಸಿಲಿಟಿ ಕ್ವಾರಂಟೈನ್ ಮಾಡಲಾಗಿತ್ತು. ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಿದ್ದವ ಸ್ಯಾಂಪಲ್‌ ವರದಿ ಪಾಸಿಟಿವ್‌ ಬಂದಿದ್ದು, ಆತನ ಜೊತೆ ಇಬ್ಬರು ಅಥವಾ ಮೂವರು ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

ಕ್ವಾರಂಟೈನ್‌ನಲ್ಲಿದ್ದವರು ಪಾಸಿಟಿವ್ ಆತಂಕ ಪಡುವ ಅಗತ್ಯ ಇಲ್ಲ. ಸೋಂಕಿತನನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಹೀಗಾಗಿ ಯಾರು ಆತಂಕ ಪಡಬೇಕಿಲ್ಲ, ಸೋಂಕಿತನನ್ನ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು 20 ದಿನಗಳ ನಂತರ ಮೈಸೂರಿನಲ್ಲಿ ಪತ್ತೆಯಾದ ಪಾಸಿಟಿವ್ ಕೇಸ್‌ನಿಂದಾಗಿ  ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಇದ್ದ ನಿರ್ಲಕ್ಷ್ಯ ಭಾವನೆಯನ್ನ ಬಡಿದೇಬ್ಬಿಸಿದಂತಾಗಿದೆ. ಏಪ್ರಿಲ್ 28ರಂದು ಕೊನೆಯ ಪಾಸಿಟಿವ್  ಪ್ರಕರಣ ಪತ್ತೆಯಾಗಿತ್ತು. ಮೇ 15ರಂದು ಎಲ್ಲಾ ಕೊರೊನಾ ಸೋಂಕಿತರು ಡಿಸ್ಚಾರ್ಜ್ ಆಗಿದ್ದರು.

ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್ ಪದೆ ಪದೆ ಹೇಳುತ್ತಿದ್ದಂತೆ ನಾವು ಕೊರೊನಾ ಪಾಸಿಟಿವ್‌ ಕೇಸ್‌ಗಳಿಂದಷ್ಟೆ ಮುಕ್ತಿಯಾಗಿದ್ದೇವು, ಆದ್ರೆ ಮತ್ತೆ ಕೊರೊನಾ ಬರುವುದಿಲ್ಲ ಅಂತ ನಾವು ಹೇಳು ಸಾಧ್ಯವಿಲ್ಲ ಎಂಬ ಮಾತು ವಾರದೊಳಗೆ ಸತ್ಯಾವಾಗಿದೆ.  ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಒಟ್ಟು 91 ಪಾಸಿಟಿವ್ ಕೇಸ್ ಪತ್ತೆಯಾಗಿ, 90 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಇಂದು ಸೋಂಕು ಪತ್ತೆಯಾದ ಓರ್ವ ವ್ಯಕ್ತಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕ್ಟೀವ್‌‌ ಕೇಸ್ 1 ಮಾತ್ರ ಇದೆ.

ಇದನ್ನೂ ಓದಿ : ಗ್ರೀನ್‌ ಜೋನ್ ಕೊಪ್ಪಳಕ್ಕೂ ಆವರಿಸಿದ ಕೊರೋನಾ; ಮೂರು ಜನ ವಲಸೆ ಕಾರ್ಮಿಕರಲ್ಲಿ ಸೋಂಕು ಪತ್ತೆ
First published: