ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕ್ರಮ; ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ ಪ್ಲಾಟ್​ಫಾರ್ಮ್ ದರ 50 ರೂ.ಗೆ ಏರಿಕೆ

Indian Railway Platform Ticket: ಈಗಾಗಲೇ ಭಾರತದಲ್ಲಿ 168 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ. 19): ರಾಜ್ಯಾದ್ಯಂತ ಕೊರೋನಾ ವೈರಸ್ ಆತಂಕ ಹೆಚ್ಚಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು  ಕೊಡಗಿನಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಸ್ಥಳದಲ್ಲಿ ಜನರನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ರೈಲ್ವೆ ಪ್ಲಾಟ್​ಫಾರ್ಮ್​ಗಳ ದರವನ್ನು 50 ರೂ.ಗೆ. ಏರಿಕೆ ಮಾಡಲಾಗಿದೆ. 

ಈಗಾಗಲೇ ಭಾರತದಲ್ಲಿ 168 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಇದರ ಭಾಗವಾಗಿ ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿಯ ರೈಲ್ವೆ ನಿಲ್ದಾಣದ ಪ್ಲಾಟ್​ಫಾರ್ಮ್​ಗಳ ಪ್ರವೇಶ ದರವನ್ನು 50 ರೂ.ಗೆ ಏರಿಕೆ ಮಾಡಲಾಗಿದೆ.ಕಲಬುರ್ಗಿಯಲ್ಲಿ ಕೊರೋನಾ ವೈರಸ್​​ನಿಂದಾಗಿ ಈಗಾಗಲೇ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕಲಬುರ್ಗಿಯಲ್ಲಿ ಸಾವನ್ನಪ್ಪಿದ ವೃದ್ಧನ ಕುಟುಂಬಸ್ಥರಿಗೂ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿತ್ತು. ಇದೀಗ ಕೊಡಗಿನಲ್ಲಿ ಮೊದಲ ಬಾರಿಗೆ ಕೊರೋನಾ ಪ್ರಕರಣವೊಂದು ದಾಖಲಾಗಿದೆ.

ಇದನ್ನೂ ಓದಿ: ಕೊರೋನಾ ಭೀತಿ: 168 ರೈಲುಗಳ ಸಂಚಾರ ರದ್ದು ಮಾಡಿದ ರೈಲ್ವೆ ಇಲಾಖೆ

ನಿನ್ನೆ ಒಂದೇ ದಿನ ಮೂವರಿಗೆ ಕೊರೋನಾ ವೈರಸ್​ ತಗುಲಿರುವ ಬಗ್ಗೆ ಆರೋಗ್ಯ ಇಲಾಖೆ ದೃಢಪಡಿಸಿತ್ತು. ಅಮೆರಿಕದಿಂದ ಹಿಂದಿರುಗಿದ 35 ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿತ್ತು. ಬೆಂಗಳೂರಿನ 56 ವಯಸ್ಸಿನ ಒಬ್ಬರು ಹಾಗೂ 25 ವಯಸ್ಸಿನ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ನಿನ್ನೆ ದೃಢಪಟ್ಟಿತ್ತು. 56 ವರ್ಷದ ಒಬ್ಬರು ಮಾರ್ಚ್ 6ರಂದು ಅಮೆರಿಕ ಪ್ರವಾಸದಿಂದ ಹಿಂತಿರುಗಿದ್ದರು. 25 ವರ್ಷದ ಇನ್ನೊಬ್ಬ ಮಹಿಳೆ ಸ್ಪೇನ್ ಪ್ರವಾಸದಿಂದ ಹಿಂದಿರುಗಿದ್ದರು.
First published: