ಕೊರೋನಾ ವೈರಸ್ ಭೀತಿ; ಮೈಸೂರಿನ ಇನ್ಫೋಸಿಸ್​ನ 4,000 ಟೆಕ್ಕಿಗಳನ್ನು ಮನೆಗೆ ಕಳುಹಿಸಲು ನಿರ್ಧಾರ

ಎಲ್ಲೆಡೆ ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಮೈಸೂರಿನ ಇನ್ಫೋಸಿಸ್​ನ 4,000 ಟ್ರೈನಿಗಳನ್ನು ಊರಿಗೆ ವಾಪಾಸ್ ಕಳುಹಿಸಲು ನಿರ್ಧರಿಸಲಾಗಿದೆ.

news18-kannada
Updated:March 19, 2020, 9:46 AM IST
ಕೊರೋನಾ ವೈರಸ್ ಭೀತಿ; ಮೈಸೂರಿನ ಇನ್ಫೋಸಿಸ್​ನ 4,000 ಟೆಕ್ಕಿಗಳನ್ನು ಮನೆಗೆ ಕಳುಹಿಸಲು ನಿರ್ಧಾರ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್​
  • Share this:
ಮೈಸೂರು (ಮಾ. 19): ರಾಜ್ಯಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ 14 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಎಲ್ಲ ಕಂಪೆನಿ, ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಇದೀಗ, ಮೈಸೂರಿನ ಇನ್ಫೋಸಿಸ್​ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 4 ಸಾವಿರ ಜನರನ್ನು ಕೂಡ ಮನೆಗೆ ಕಳುಹಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಮೈಸೂರಿನ ಇನ್ಫೋಸಿಸ್​ನಲ್ಲಿ 10,000 ಜನರು ತರಬೇತಿ ಪಡೆಯುತ್ತಿದ್ದಾರೆ. ಎಲ್ಲೆಡೆ ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಕಚೇರಿಯಲ್ಲಿ ಒಟ್ಟಾಗಿ ಕುಳಿತು ಕೆಲಸ ಮಾಡಿದರೆ ಸುಲಭವಾಗಿ ಕೊರೋನಾ ಹರಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಇನ್ಫೋಸಿಸ್​ನ 4,000 ಟ್ರೈನಿಗಳನ್ನು ಊರಿಗೆ ವಾಪಾಸ್ ಕಳುಹಿಸಲು ನಿರ್ಧರಿಸಲಾಗಿದೆ. ಉಳಿದ 6,000 ಸಿಬ್ಬಂದಿಯನ್ನು ಕೂಡ ಹಂತ-ಹಂತವಾಗಿ ಮನೆಗೆ ಕಳುಹಿಸಲಾಗುತ್ತದೆ. ಇನ್ಫೋಸಿಸ್ ಗ್ಲೋಬಲ್ ಎಜುಕೇಶನ್ ಸೆಂಟರ್‌ನಲ್ಲಿ ತರಬೇತಿಯಲ್ಲಿ ನಿರತರಾಗಿರುವ ಟೆಕ್ಕಿಗಳನ್ನು ಹಂತಹಂತವಾಗಿ ಮನೆಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: ಐಸೋಲೇಷನ್​ನಲ್ಲಿರುವವರು ಇನ್ಮುಂದೆ ಸುಲಭವಾಗಿ ತಪ್ಪಿಸಿಕೊಳ್ಳಲಾಗದು; ಕೊರೋನಾ ಶಂಕಿತರ ಕೈಗೆ ಮುದ್ರೆ

ಪುಣೆ, ಹೈದರಾಬಾದ್, ಸಿಕಂದರಾಬಾದ್, ಚೆನ್ನೈ, ಬೆಂಗಳೂರು, ಕೇರಳ, ಮಂಗಳೂರು ಸೇರಿದಂತೆ ಇತರೆ ಸ್ಥಳಗಳಿಗೆ ವಾಪಾಸ್ ಕಳುಹಿಸಲಾಗುತ್ತದೆ. ಸಂಸ್ಥೆಯ ವಾಹನಗಳು ಹಾಗೂ ಕೆ‌ಎಸ್‌ಆರ್‌ಟಿಸಿಯ ಬಸ್‌ಗಳಲ್ಲಿ ಟೆಕ್ಕಿಗಳನ್ನ ವಾಪಾಸ್ ಕಳುಹಿಸಲು ನಿರ್ಧಾರ ಮಾಡಲಾಗಿದೆ.
First published: March 19, 2020, 9:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading