ಜನತಾ ಕರ್ಫ್ಯೂ ಹಿನ್ನೆಲೆ ಬೆಂಗಳೂರು ಸ್ತಬ್ಧ; ರಸ್ತೆ, ಮೆಜೆಸ್ಟಿಕ್, ಮೆಟ್ರೋ, ಮಾರ್ಕೆಟ್​ಗಳು ಖಾಲಿ

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಸಂಪೂರ್ಣ ಖಾಲಿಯಾಗಿದೆ. ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಕೆಎಸ್​ಆರ್​ಟಿಸಿ ನಿಲ್ದಾಣ ಖಾಲಿಯಾಗಿದೆ. ಒಂದೆರಡು ಬಸ್​ಗಳನ್ನು ಮಾತ್ರ ಸಂಚಾರಕ್ಕೆ ಬಳಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಕೆಎಸ್​ಆರ್​ಟಿಸಿ

ಕೆಎಸ್​ಆರ್​ಟಿಸಿ

  • Share this:
ಬೆಂಗಳೂರು (ಮಾ. 22): ಜನತಾ ಕರ್ಫ್ಯೂ ಹಿನ್ನೆಲೆ ಇಂದು ಬೆಂಗಳೂರು ಬಹುತೇಕ ಸ್ತಬ್ಧವಾಗಿದೆ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನರೇ ಕಾಣುತ್ತಿಲ್ಲ. ಮಾರ್ಕೆಟ್​ಗಳು ಕೂಡ ಬಿಕೋ ಎನ್ನುತ್ತಿವೆ. ಎಂ.ಜಿ. ರೋಡ್, ಮೆಟ್ರೋ ನಿಲ್ದಾಣಗಳು ಕೂಡ ಖಾಲಿ ಖಾಲಿಯಾಗಿವೆ.

ಇಂದು ಅಂಗಡಿಗಳನ್ನು ತೆರೆದಿರಲು ಸೂಚಿಸಿರುವುದರಿಂದ ಹಾಗೂ ರಸ್ತೆ ಬದಿ ತರಕಾರಿ ಗಾಡಿಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಅವಕಾಶ ಇಲ್ಲದ ಕಾರಣ ಕೆ.ಆರ್​. ಮಾರ್ಕೆಟ್, ಯಶವಂತಪುರ ಮಾರ್ಕೆಟ್​ ಸೇರಿದಂತೆ ಎಲ್ಲ ಮಾರ್ಕೆಟ್​ಗಳೂ ಬಿಕೋ ಎನ್ನುತ್ತಿವೆ. ಬೆಳಗ್ಗಿನಿಂದ ಯಾರೂ ಮಾರ್ಕೆಟ್​ಗೆ ತರಕಾರಿ, ಹಣ್ಣುಗಳನ್ನು ಕೊಳ್ಳಲು ಬರುತ್ತಿಲ್ಲ. ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಫ್ಲವರ್ ಮಾರ್ಕೆಟ್ ಇಂದು 7 ಗಂಟೆಯಾದರೂ ವ್ಯಾಪಾರಿಗಳು ಮತ್ತು ಗ್ರಾಹಕರಿಲ್ಲದೆ ಬಣಗುಟ್ಟುತ್ತಿದೆ.

ಇದನ್ನೂ ಓದಿ: ಜನತಾ ಕರ್ಫ್ಯೂ; ಬೆಂಗಳೂರಿಗರಿಗೆ ಇಂದು ತುರ್ತು ಅಗತ್ಯವಿದ್ದರೆ ಈ ನಂಬರ್​ಗೆ ಕರೆ ಮಾಡಿ

ಬೆಂಗಳೂರಿನ ಎಂ.ಜಿ ರಸ್ತೆ ಕೂಡ ಖಾಲಿಯಾಗಿದ್ದು, ಮೆಟ್ರೋ ಬಂದ್ ಹಿನ್ನೆಲೆ ಜನರೇ ಇಲ್ಲದೆ‌ ಎಂ.ಜಿ. ರೋಡ್ ಮೆಟ್ರೋ ಸ್ಟೇಷನ್ ಬಿಕೋ ಎನ್ನುತ್ತಿದೆ. ಕೆಲವೇ‌ ಕೆಲವು ಬೈಕ್, ಕಾರು ಮಾತ್ರ ಕಾಣಿಸುತ್ತಿವೆ. ರಸ್ತೆಗಳಲ್ಲಿ ವಾಹನ ಸಂಚಾರವೇ ಕಾಣುತ್ತಿಲ್ಲ. ಪಕ್ಕದ ಬ್ರಿಗೇಡ್ ರೋಡ್ ಸಹ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಬೆಳಗಿನ ವಾಕಿಂಗ್ ಮಾಡುವವರು ಕೂಡ ರೋಡ್​ನಲ್ಲಿ ಕಾಣುತ್ತಿಲ್ಲ.

ಇದನ್ನೂ ಓದಿ: ಕೊರೋನಾ ಕೊಲ್ಲಲು ಮಿಲಿಟರಿ ವಿಶೇಷ ಹೆಲಿಕಾಪ್ಟರ್​​​ಗಳಿಂದ ಕೀಟನಾಶಕ ಸಿಂಪಡಣೆ; ಹೀಗೊಂದು ಸುಳ್ಳು ವದಂತಿ

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಸಂಪೂರ್ಣ ಖಾಲಿಯಾಗಿದೆ. ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಕೆಎಸ್​ಆರ್​ಟಿಸಿ ನಿಲ್ದಾಣ ಖಾಲಿಯಾಗಿದೆ. ಒಂದೆರಡು ಬಸ್​ಗಳನ್ನು ಮಾತ್ರ ಸಂಚಾರಕ್ಕೆ ಬಳಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹೊರಗಿನಿಂದ ಬಂದವರಿಗೆ ಮಾತ್ರ ಬಸ್ ಸೇವೆ ಒದಗಿಸಲಾಗುತ್ತಿದೆ. ಮೆಜೆಸ್ಟಿಕ್ ಬಸ್​ ನಿಲ್ದಾಣದಲ್ಲಿ ಬೇರೆ ಜಿಲ್ಲೆಗಳಿಂದ ಬಂದಿರುವ 100ಕ್ಕೂ ಹೆಚ್ಚು ಜನರು ಮನೆ ಸೇರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಬಸ್ ಸಂಚಾರ ವ್ಯವಸ್ಥೆ ಇಲ್ಲದ ಮಾಹಿತಿ ತಿಳಿಯದೆ ಪರದಾಡುತ್ತಿರುವ ಪ್ರಯಾಣಿಕರು ಆಟೋಗಳಲ್ಲಿ ಮನೆಗೆ ತೆರಳುತ್ತಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಆಟೋ ಸಂಚಾರವೂ ಬಹುತೇಕ ಕಡಿಮೆಯಾಗಲಿದೆ.
First published: