Coronavirus In India: ಕೊರೋನಾಗೆ ದೇಶದಲ್ಲಿ ಮೊದಲ ಯೋಧ ಬಲಿ; ಮಾರಕ ಸೋಂಕಿನಿಂದ ಸಿಆರ್​ಪಿಎಫ್​ ಸಿಬ್ಬಂದಿ ಸಾವು

Coronavirus Update In India: ಕಳೆದ ವಾರ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದ 55 ವರ್ಷದ ಯೋಧನಿಗೆ ಕೊರೋನಾ ಸೋಂಕು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

(ಸಾಂದರ್ಭಿಕ ಚಿತ್ರ)

(ಸಾಂದರ್ಭಿಕ ಚಿತ್ರ)

 • Share this:
  ನವದೆಹಲಿ (ಏ. 29): ದೇಶದಲ್ಲಿ 1 ಸಾವಿರಕ್ಕೂ ಹೆಚ್ಚು ಜನರನ್ನು ಕೊರೋನಾ ಬಲಿ ತೆಗೆದುಕೊಂಡಿದೆ. ಲಾಕ್​ಡೌನ್​ನಿಂದಾಗಿ ಜನರೆಲ್ಲ ಮನೆಯೊಳಗೆ ಸೇರಿದ್ದಾರೆ. ಆದರೆ, ವೈದ್ಯರು, ಪೊಲೀಸ್ ಸಿಬ್ಬಂದಿ, ಸೈನಿಕರು ಕೊರೋನಾಗೆ ಸವಾಲೊಡ್ಡಿ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದೀಗ ಸೈನಿಕರಿಗೂ ಕೊರೋನಾ ಭೀತಿ ಶುರುವಾಗಿದ್ದು, ಸಿಆರ್​ಪಿಎಫ್​ ಯೋಧರೊಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

  ಈ ಮೂಲಕ ದೇಶದಲ್ಲಿ ಕೊರೋನಾಗೆ ಮೊದಲ ಸೈನಿಕ ಬಲಿಯಾದಂತಾಗಿದೆ. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಸಾವನ್ನಪ್ಪಿದ ಘಟನೆ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿತ್ತು. ಭಾರತದ ನೌಕಾದಳ, ಸೇನಾಪಡೆಯಲ್ಲೂ ಕೊರೋನಾ ಸೋಂಕು ಪತ್ತೆಯಾಗಿರುವ ಬಗ್ಗೆ ಇತ್ತೀಚೆಗಷ್ಟೇ ಸರ್ಕಾರ ಖಚಿತಪಡಿಸಿತ್ತು. ಇದೀಗ ದೆಹಲಿಯಲ್ಲಿ ಸಿಆರ್​ಪಿಎಫ್​ ಯೋಧನೋರ್ವ ಸಾವನ್ನಪ್ಪುವ ಮೂಲಕ ಕೊರೋನಾಗೆ ಮೊದಲ ಸೈನಿಕ ಬಲಿಯಾದಂತಾಗಿದೆ.

  ಇದನ್ನೂ ಓದಿ: Coronavirus In India: ಭಾರತದಲ್ಲಿ 31 ಸಾವಿರ ದಾಟಿದ ಕೊರೋನಾ ಪೀಡಿತರ ಸಂಖ್ಯೆ; 1 ಸಾವಿರಕ್ಕೂ ಹೆಚ್ಚು ಸಾವು

  ಕಳೆದ ವಾರ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದ 55 ವರ್ಷದ ಯೋಧನಿಗೆ ಕೊರೋನಾ ಸೋಂಕು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಜೊತೆಗೆ ಇನ್ನೂ 15 ಸಿಆರ್​ಇಎಫ್​ ಯೋಧರಿಗೆ ಕೊರೋನಾ ಸೋಂಕು ತಗುಲಿತ್ತು. ನಂತರ ಆ ಸಂಖ್ಯೆ 24ಕ್ಕೆ ಏರಿಕೆಯಾಗಿತ್ತು. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಭಾರತದಲ್ಲಿ 31,324 ಜನರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಇದುವರೆಗೂ 1,008 ಜನರು ಸಾವನ್ನಪ್ಪಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಕೊರೋನಾದಿಂದ ಗುಣಮುಖರಾದವರು 7,747 ಜನ ಮಾತ್ರ ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ.
  First published: