HOME » NEWS » Coronavirus-latest-news » CORONAVIRUS IN BANGALORE SAP LABS CORONAVIRUS HOW IT STARTED CAN CORONAVIRUS BE CURED CORONAVIRUS LIVE UPDATE BANGALORE RMD

ಕೊರೋನಾ ವೈರಸ್​ ಹರಡುವುದು ಹೇಗೆ, ಇದರ ಲಕ್ಷಣಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ಏಕಾಏಕಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಹಾಗಾದರೆ ಈ ವೈರಸ್ ಏಕಾಏಕಿ ಹುಟ್ಟಿಕೊಂಡಿತಾ? ಇದರ ಜನನ ಹೇಗೆ? ವೈರಸ್​ನ ಲಕ್ಷಣಗಳೇನು? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Rajesh Duggumane | news18-kannada
Updated:March 10, 2020, 1:22 PM IST
ಕೊರೋನಾ ವೈರಸ್​ ಹರಡುವುದು ಹೇಗೆ, ಇದರ ಲಕ್ಷಣಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್​ ಅಟ್ಟಹಾಸಕ್ಕೆ ಚೀನಾದಲ್ಲಿ 425 ಜನರು ಮೃತಪಟ್ಟಿದ್ದಾರೆ. ಕೇರಳದಲ್ಲಿ ಮೂರು ಜನರಿಗೆ ಕೊರೋನಾ ವೈರಸ್​ ತಗುಲಿರುವುದು ಖಚಿತವಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ವಿಧಿಸಿದೆ.

ಜನವರಿ 25 ಚೀನಾದವರಿಗೆ ಹೊಸ ವರ್ಷ. ಈ ಸಂದರ್ಭದಲ್ಲಿ ಚೀನಾ ಜನರು ರಜೆಯ ಮಜ ಸವಿಯಲು ಬೇರೆ ಬೇರೆ ದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಇದೇ ಸಂದರ್ಭದಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ಭೀತಿ ಎದುರಾಗಿತ್ತು. ಏಕಾಏಕಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಹಾಗಾದರೆ ಈ ವೈರಸ್ ಏಕಾಏಕಿ ಹುಟ್ಟಿಕೊಂಡಿತಾ? ಇದರ ಜನನ ಹೇಗೆ? ವೈರಸ್​ನ ಲಕ್ಷಣಗಳೇನು? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: ಬೆಂಗಳೂರಲ್ಲೂ ಕರೋನಾ ಭೀತಿ; ಚೀನಾದಿಂದ ಬಂದ ಇಬ್ಬರಲ್ಲಿ ವೈರಸ್ ಪತ್ತೆ?

ಕಳೆದ ವರ್ಷವೇ ಕಾಣಿಸಿಕೊಂಡಿತ್ತು ವೈರಸ್​:

ಕೊರೋನಾ ವೈರಸ್​ ಚೀನಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈವರೆಗೆ ಸುಮಾರು 20 ಸಾವಿರ ಜನರಿಗೆ ಈ ವೈರಸ್​ ತಗುಲಿದೆ ಎಂದು ಚೀನಾ ಸರ್ಕಾರ ಖಚಿತಪಡಿಸಿದೆ.ಇದುವರೆಗೂ 400ಕ್ಕೂ ಅಧಿಕ ಜನರು ಈ ವೈರಸ್​ಗೆ ಬಲಿಯಾಗಿದ್ದಾರೆ. ಹಾಗಂತ ಕೊರೋನಾ ವೈರಸ್ ಚೀನಾದಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದಲ್ಲ.  ಈ ವೈರಸ್​ ಪ್ರಕರಣ ಮೊದಲು ಪತ್ತೆಯಾಗಿದ್ದು ಕಳೆದ ವರ್ಷ ಡಿಸೆಂಬರ್​ ಆರಂಭದಲ್ಲಿ. ನಿಧಾನವಾಗಿ ಈ ವೈರಸ್​ ವುಹಾನ್​ ಪ್ರಾಂತ್ಯದಾದ್ಯಂತ ಹಬ್ಬಿತ್ತು. ಈಗ ಏಷ್ಯಾ, ಯುರೋಪ್​, ಉತ್ತರ ಅಮೆರಿಕ ಭಾಗದಲ್ಲಿ ಈ ವೈರಸ್​ ಭೀತಿ ಎದುರಾಗಿದೆ.

ವೈರಸ್​ ಹುಟ್ಟಿದ್ದು ಎಲ್ಲಿಂದ?:

ಉಳಿದ ಭೀಕರ ವೈರಸ್​ಗಳಂತೆ ಕೊರೋನಾ ವೈರಸ್​ ಕೂಡ ಬಂದಿದ್ದು ಪ್ರಾಣಿಗಳಿಂದಲೇ ಎಂಬುದು ಅಧ್ಯಯನದಿಂದ ಖಚಿತವಾಗಿದೆ.  ಸೋಂಕಿತ ಪ್ರಾಣಿಯಿಂದ ಮೊದಲು ಈ ವೈರಸ್ ಮನುಷ್ಯನಿಗೆ ವರ್ಗಾವಣೆ ಆಗಿತ್ತು. ಅಂದಹಾಗೆ, ಈ ವೈರಸ್ ಮೊದಲು ಕಾಣಿಸಿಕೊಂಡಿದ್ದು, ವುಹಾನ್​ ಸೀಫುಡ್​ ಮಾರ್ಕೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ. ಹೀಗಾಗಿ, ಈ ವೈರಸ್​ ಮೊದಲು ಮನುಷ್ಯನಿಗೆ ವರ್ಗಾವಣೆಗೊಂಡಿದ್ದು ಇಲ್ಲಿಯೇ ಎಂದು ಹೇಳಲಾಗಿದೆ. ಈ ಮೊದಲು ಕಾಣಿಸಿಕೊಂಡಿದ್ದ ಭೀಕರ ಸಾರ್ಸ್​ ರೋಗ ಇದೇ ಮಾರುಕಟ್ಟೆಯಿಂದ ಆರಂಭಗೊಂಡಿತ್ತು ಎಂಬುದು ಕುತೂಹಲಕರ ಸಂಗತಿ.ವೈರಸ್​ ಹರಡುವುದು ಹೇಗೆ?:

ಕೊರೋನಾ ವೈರಸ್​ ಮನುಷ್ಯನಿಂದ ಮನುಷ್ಯನಿಗೆ ಬಹುಬೇಗ ವರ್ಗಾವಣೆ ಆಗುತ್ತದೆ. ವೈರಸ್​ ತಗುಲಿದ ವ್ಯಕ್ತಿಯ ಜೊತೆ ಯಾರಾದರೂ ಮಾತನಾಡುವಾಗ ಆತ ಕೆಮ್ಮಿದರೆ ವೈರಸ್​ ಗಾಳಿಯ ಮೂಲಕ ಬಂದು ಮತ್ತೋರ್ವ ವ್ಯಕ್ತಿಗೆ ಸೇರುತ್ತದೆ. ಇನ್ನು, ಸಂಭೋಗದಿಂದಲೂ ವೈರಸ್​ ವರ್ಗಾವಣೆ ಆಗಲಿದೆ ಎಂಬುದು ಸಂಶೋಧನೆಯಲ್ಲಿ ಖಚಿತವಾಗಿದೆ.

ಲಕ್ಷಣಗಳೇನು?:

ಕೊರೋನಾ ವೈರಸ್​ ಪ್ರವೇಶಿಸಿದಾಗ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಒಣ ಕೆಮ್ಮು ಪ್ರಾರಂಭವಾಗುತ್ತದೆ, ಉಸಿರಾಡಲು ಕಷ್ಟವಾಗುತ್ತದೆ. ನಂತರ ಸಾವು ಸಂಭವಿಸುತ್ತದೆ.

ಕೊರೋನಾ ವೈರಸ್​​ಗಿದೆಯೇ ಔಷಧ?:

ವಿಶ್ವದಲ್ಲಿ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್​ಗೆ ಈವರೆಗೆ  ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸದ್ಯ, ಹಲವು ರಾಷ್ಟ್ರಗಳು ಈ ಬಗ್ಗೆ ಅಧ್ಯಯನ ಆರಂಭಿಸಿವೆ.

ಸಾರ್ಸ್​ಗಿಂತ ಭಯಾನಕ:

2002-2003ರಲ್ಲಿ ಚೀನಾದಲ್ಲಿ ಸಾರ್ಸ್​ ಹೆಸರಿನ ಭೀಕರ ರೋಗ​ ಕಾಣಿಸಿಕೊಂಡಿತ್ತು. ಇದು 650 ಜನರನ್ನು ಬಲಿ ತೆಗೆದುಕೊಂಡಿತ್ತು. ಈಗ ಪತ್ತೆಯಾಗಿರುವ ಕೊರೋನಾ ವೈರಸ್​ಗೂ ಸಾರ್ಸ್​​ಗೂ ಸಾಮ್ಯತೆ ಇರುವುದರಿಂದ ವೈದ್ಯರು ಸಾಕಷ್ಟು ಆತಂಕಗೊಂಡಿದ್ದಾರೆ. ಅಲ್ಲದೆ, ಸಾರ್ಸ್​ಗಿಂತಲೂ ಈ ವೈರಸ್ ಭಯಾನಕಾವಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
First published: February 4, 2020, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories