ದಾವಣಗೆರೆಯಲ್ಲಿ ಕೊರೋನಾ ಭೀತಿ ಹಿನ್ನೆಲೆ ಹಲವು ಗ್ರಾಮಗಳ ಸಂಪರ್ಕ ಬಂದ್...!

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಹೊರಗಿನಿಂದ ಬರುವವರಿಗೆ ಪ್ರವೇಶ ನಿರಾಕರಿಸಲಾಗಿದೆ. ಮಾತ್ರವಲ್ಲ, ಮನೆಯಿಂದ ಹೊರಬಾರದಂತೆ ಸೂಚನೆ ಕೊಡಲಾಗುತ್ತಿದೆ

news18-kannada
Updated:March 26, 2020, 4:55 PM IST
ದಾವಣಗೆರೆಯಲ್ಲಿ ಕೊರೋನಾ ಭೀತಿ ಹಿನ್ನೆಲೆ ಹಲವು ಗ್ರಾಮಗಳ ಸಂಪರ್ಕ ಬಂದ್...!
ರಸ್ತೆಗೆ ಮುಳ್ಳು ಹಾಕಿ ಬಂದ್ ಮಾಡಿರುವ ಗ್ರಾಮಸ್ಥರು
  • Share this:
ದಾವಣಗೆರೆ(ಮಾ.26): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಊರಿಗೆ ಯಾರೂ ಪ್ರವೇಶ ಮಾಡದಂತೆ ಗ್ರಾಮಸ್ಥರೇ ಮುಳ್ಳು, ಕೇಜ್ ವ್ಹೀಲ್ ಸೇರಿದಂತೆ ಇತರೆ ವಸ್ತುಗಳನ್ನು ಹಾಕಿರುವ ಘಟನೆ ದಾವಣಗೆರೆ ನಗರದ ಹೊಸಕುಂದುವಾಡ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಹೊರಗಿನಿಂದ ಬರುವವರಿಗೆ ಪ್ರವೇಶ ನಿರಾಕರಿಸಲಾಗಿದೆ. ಮಾತ್ರವಲ್ಲ, ಮನೆಯಿಂದ ಹೊರಬಾರದು ಎಂಬ ಸೂಚನೆ ಕೊಡಲಾಗುತ್ತಿದೆ. ಗ್ರಾಮ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಗ್ರಾಮದ ಯುವಕರೆಲ್ಲರೂ ಸ್ವಯಂಪ್ರೇರಿತರಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಟ್ನಹಳ್ಳಿ , ಉಚ್ಚಂಗಿಪುರ, ದಿದ್ದಿಗಿ, ಹಿರೆಮಲ್ಲನಹೊಳೆ ಗ್ರಾಮಗಳ ಮುಖ್ಯ ರಸ್ತೆಗಳನ್ನು ಗ್ರಾಮಸ್ಥರೇ ಬಂದ್ ಮಾಡಿದ್ದಾರೆ. ಕೊರೊನೊ ತಡೆಗಟ್ಟಲು ಗ್ರಾಮಸ್ಥರು ತಾವೇ ಖುದ್ದಾಗಿ ರಸ್ತೆಗಳಲ್ಲಿ ಮುಳ್ಳು, ತಂತಿ ಬೇಲಿ ಹಾಕುತ್ತಿದ್ದಾರೆ. ಊರಿನಿಂದ ಹೊರ ಹೋದವರು ಮತ್ತೆ ಗ್ರಾಮಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ.

ದಾವಣಗೆರೆ ನಗರದಾದ್ಯಂತ ನಿನ್ನೆ ಡಿಸಿ, ಎಸ್ಪಿ ಲಾಟಿ ಹಿಡಿದು ನಗರ ಸಂಚಾರ ನಡೆಸಿದ್ದರು.
ಸಾರ್ವಜನಿಕರಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆಯನ್ನ ಜಿಲ್ಲಾಧಿಕಾರಿ  ನೀಡಿದ್ದರು. ಅದರಂತೆ ಇಂದು ದಾವಣಗೆರೆಯಲ್ಲಿ ಸಾರ್ವಜನಿಕರು ಸ್ವಯಂ ದಿಗ್ಬಂದನ ಏರಿಕೊಂಡಿದ್ದಾರೆ. ಇನ್ನು ದಾವಣಗೆರೆಗೆ ಆಗಮಿಸುವ ಪ್ರವೇಶದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದುನಗರಕ್ಕೆ ಆಗಮಿಸುವವರ ಬಗ್ಗೆ ಕಟ್ಟಚ್ಚರ ವಹಿಸಲಾಗಿದೆ

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಸೊಂಕಿನ ಪಾಸಿಟಿವ್ ವರದಿ ದಾಖಲಾಗಿಲ್ಲ .ವಿದೇಶದಿಂದ ಬಂದಿರುವ ವ್ಯಕ್ತಿಗಳನ್ನ ಗೃಹ ಬಂಧನದಲ್ಲಿಟ್ಟು ಅವರ ಬಗ್ಗೆ ಬೆಳಗ್ಗೆ ಸಂಜೆ ಪೊಲೀಸ್​ ಹಾಗೂ ವೈದ್ಯರು ನಿಗಾ ಇಟ್ಟಿದ್ದಾರೆ. ಚಿತ್ರದುರ್ಗದ ಓರ್ವ ಮಹಿಳೆಗೆ ಕೊರೋನಾ ಸೊಂಕು ದೃಡ ಹಿನ್ನೆಲೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : ಕೊರೋನಾ ನಿಗ್ರಹ ಹೋರಾಟ ಬೆಂಬಲಿಸಿ ಮೂರು ತಿಂಗಳ ವೇತನ ನೀಡಿದ ಶಾಸಕ ಯತ್ನಾಳ್ಮಾರಕ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ನೆನ್ನೆಗೆ ಒಟ್ಟು 55 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ಇದೀಗ ಮತ್ತೆ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಈವರೆಗೆ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

 
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading