HOME » NEWS » Coronavirus-latest-news » CORONAVIRUS EFFECT YOGASANA PUNISHMENT TO THOSE WHO DO NOT FOLLOW RULES IN KALBURGI POLICE HK

ಲಾಕ್ ಡೌನ್ ಉಲ್ಲಂಘಿಸಿದವರಿಗೆ ಯೋಗ ಶಿಕ್ಷೆ - ಮೇಣದ ಬತ್ತಿ ಕೊಟ್ಟು ನಾಳೆ ಬೆಳಗುವಂತೆ ಸೂಚನೆ

ನಾಳೆ ಪ್ರಧಾನಿ ನರೇಂದ್ರ ಮೋದಿಯವರಿಂದ ದೀಪ ಬೆಳಗಲು ಕರೆ ಹಿನ್ನಲೆ ಕ್ಯಾಂಡಲ್ ವಿತರಣೆ ಮಾಡಿದ್ದಾರೆ. ನಾಳೆ ರಾತ್ರಿ 9 ಗಂಟೆಗೆ ಮನೆ ಮುಂದೆ ಕ್ಯಾಂಡಲ್ ಬೆಳಗಿಸಲು ಪೊಲೀಸರು ಸೂಚನೆ ನೀಡಿದ್ದಾರೆ

news18-kannada
Updated:April 4, 2020, 7:53 PM IST
ಲಾಕ್ ಡೌನ್ ಉಲ್ಲಂಘಿಸಿದವರಿಗೆ ಯೋಗ ಶಿಕ್ಷೆ - ಮೇಣದ ಬತ್ತಿ ಕೊಟ್ಟು ನಾಳೆ ಬೆಳಗುವಂತೆ ಸೂಚನೆ
ಯೋಗ ಶಿಕ್ಷೆ ನೋಡಿದ ಪೊಲೀಸರು
  • Share this:
ಕಲಬುರ್ಗಿ(ಏ.04): ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆಯಾಗಿದ್ದೂ ಕಲಬುರ್ಗಿ ನಗರದಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿಲ್ಲ. ಅನಗತ್ಯವಾಗಿ ಅಡ್ಡಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬೆಕ್ಕಾಬಿಟ್ಟಿ ಓಡಾಡುವವರಿಗೆ ಖಾಕಿ ಸಖತ್​ ಕ್ಲಾಸ್ ನೀಡಿದೆ. ಗಂಜ್ ಪ್ರದೇಶದಲ್ಲಿ ಪುಂಡ ಪೋಕರಿಗಳ ಬೈಕ್ ಗಳನ್ನು ಸೀಜ್ ಮಾಡಲಾಗಿದೆ. ಯೋಗ ಮಾಡಿಸುವ ಮೂಲಕ ವಿಭಿನ್ನವಾಗಿ ಶಿಕ್ಷೆಯನ್ನುಕೊಡಲಾಗಿದೆ.ಯೋಗ ಶಿಕ್ಷೆ ನಂತರ ಪುಂಡಪೋಕರಿಗಳಿಗೆ ಪೊಲೀಸರು ಕ್ಯಾಂಡಲ್ ವಿತರಣೆ ಮಾಡಿದ್ದಾರೆ. 

ನಾಳೆ ಪ್ರಧಾನಿ ನರೇಂದ್ರ ಮೋದಿಯವರಿಂದ ದೀಪ ಬೆಳಗಲು ಕರೆ ಹಿನ್ನಲೆ ಕ್ಯಾಂಡಲ್ ವಿತರಣೆ ಮಾಡಿದ್ದಾರೆ. ನಾಳೆ ರಾತ್ರಿ 9 ಗಂಟೆಗೆ ಮನೆ ಮುಂದೆ ಕ್ಯಾಂಡಲ್ ಬೆಳಗಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಅನವಶ್ಯಕವಾಗಿ ಲಾಕ್‌ ಡೌನ್ ಮಧ್ಯೆ ಓಡಾಡಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚೌಕ್ ಠಾಣೆ ಸಿಪಿಐ ಶಕೀಲ್ ಅಂಗಡಿ ಎಚ್ಚರಿಕೆ ಕೊಟ್ಟಿದ್ದಾರೆ.

ಎಸ್.ಪಿ.ಯಿಂದ ಶಹಾಬಾದ್ ಕಂಟೈನ್‌ ಮೆಂಟ್ ಝೋನ್ ಪರಿಶೀಲನೆ:

ಕಲಬುರ್ಗಿ ನಗರ ಹೊರತುಪಡಿಸಿ ಶಹಾಬಾದ್ ಪಟ್ಟಣದಲ್ಲಿ ಓರ್ವ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಪಟ್ಟಣದ ಅಪ್ಪರ್ ಮಡ್ಡಿ ಪ್ರದೇಶದ ಮಹಿಳೆಗೆ ಕೊರೋನಾ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಸದರಿ ಪ್ರದೇಶವನ್ನು ಕಂಟೇನ್ ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕಂಟೈನ್ ಮೆಂಟ್ ಝೋನ್ ಪರಿಶೀಲನೆ ನಡೆಸಿದರು. ನಂತರ ಶಹಾಬಾದ್ ನ ವಿವಿಧೆಡೆ ಸಂಚರಿಸಿ, ಲಾಕ್ ಡೌನ್ ಅನುಷ್ಠಾನದ ಪರಿಶೀಲನೆ ನಡೆಸಿದರು. ಜಿಲ್ಲೆಯಾದ್ಯಂತ ಲಾಕ್ ಡೌನ್ ಇದ್ದು, 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಎಸ್.ಪಿ. ನಿರ್ದೇಶನ ನೀಡಿದರು.

ಇದನ್ನೂ ಓದಿ : ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

ಕಂಟೋನ್​​ಮೆಂಟ್ ಝೋನ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳಾದ ಕಿರಾಣಿ ದಿನಸಿಗಳು, ಹಾಲು, ಹಣ್ಣು, ತರಕಾರಿಗಳನ್ನು ಮನೆ ಬಳಿಯೇ ಸಿಗುವಂತೆ ಅಗತ್ಯ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಸುರೇಶ ವರ್ಮಾಗೆ ಎಸ್.ಪಿ. ತಿಳಿಸಿದರು.ಕಂಟೋನ್​​ಮೆಂಟ್ ಝೋನ್ ಪ್ರದೇಶದಲ್ಲಿ ಸ್ಯಾನಿಟೈಸರ್, ಸಾಂಕ್ರಾಮಿಕ ಸೋಂಕು ಹರಡದಂತೆ ಫಾಗಿಂಗ್  ಮಾಡುವಂತೆ ಹಾಗೂ ಇನ್ನೀತರ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಈ ವೇಳೆ ಸೂಚಿಸಲಾಯಿತು.
First published: April 4, 2020, 7:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading