Coron Effect: ರಿಯಲ್​ಮಿ ನೋರ್ಜೊ ಸ್ಮಾರ್ಟ್​ಫೋನ್ ಬಿಡುಗಡೆ ದಿನಾಂಕ ಮುಂದೂಡಿಕೆ

ಜಗತ್ತಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಜನರು ಕೊರೋನಾ ಭೀತಿಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ 562  ಜನರಲ್ಲಿ ಕೊರೋನಾ ಸೊಂಕು ಇರುವುದು ಪತ್ತೆಯಾಗಿದೆ. 11 ಜನರು ಸಾವನಪ್ಪಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು 21 ದಿನಗಳ ಸಂಪೂರ್ಣ ಲಾಕ್​ ಡೌನ್​ ಮಾಡುವ ಆದೇಶ ಹೊರಡಿಸಿದ್ದಾರೆ

news18-kannada
Updated:March 25, 2020, 3:10 PM IST
Coron Effect: ರಿಯಲ್​ಮಿ ನೋರ್ಜೊ ಸ್ಮಾರ್ಟ್​ಫೋನ್ ಬಿಡುಗಡೆ ದಿನಾಂಕ ಮುಂದೂಡಿಕೆ
ರಿಯಲ್​ಮಿ ನೋರ್ಜೊ10
  • Share this:
ಚೀನಾ ಪತ್ರಿಷ್ಠಿತ ಸ್ಮಾರ್ಟ್​ಫೋನ್​ಗಲ್ಲಿ ಒಂದಾದ ರಿಯಲ್​​ ಮಿ ನೋರ್ಜೊ ಸಿರೀಸ್​ ಅನ್ನು ತಯಾರಿಸಿದ್ದು , ಮಾರ್ಚ್​ 26ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿತ್ತು. ಆದರೀಗ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.

ಜಗತ್ತಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಜನರು ಕೊರೋನಾ ಭೀತಿಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ 562  ಜನರಲ್ಲಿ ಕೊರೋನಾ ಸೊಂಕು ಇರುವುದು ಪತ್ತೆಯಾಗಿದೆ. 11 ಜನರು ಸಾವನಪ್ಪಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು 21 ದಿನಗಳ ಸಂಪೂರ್ಣ ಲಾಕ್​ ಡೌನ್​ ಮಾಡುವ ಆದೇಶ ಹೊರಡಿಸಿದ್ದಾರೆ. ಜನರು ಮನೆಯಿಂದ ಹೊರ ಬರದಂತೆ ಎಚ್ಚರಿಕೆ ಜಾಗೃತಿ ಸಂದೇಶ ಸಾರಿದ್ದಾರೆ.

 

ಈ ಪರಿಸ್ಥಿತಿಯಲ್ಲಿ ರಿಯಲ್​ಮಿ ಸಂಸ್ಥೆ ನೂತನ ನೋರ್ಜೊ 10 ಮತ್ತು ರಿಯಲ್​ಮಿ ನಾಜೋ 10ಎ ಸ್ಮಾರ್ಟ್​ಫೋನಿನ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಈ ಫೋನ್​ಗಳು​ 5 ಸಾವಿರ ಎಮ್​ಎಎಚ್ ಬ್ಯಾಟರಿಯ ಜೊತೆಗೆ, 6.5 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಕೊರೋನಾ ಜಗತ್ತಿನಾದ್ಯಂತ ದೊಡ್ಡ ಅವಾಂತರವನ್ನೇ ಸೃಷ್ಠಿ ಮಾಡಿದೆ. ಸಾಕಷ್ಟು ಉದ್ಯಮಗಳ ಮೇಲೆ ಹೊಡೆತ ಬಿದ್ದಿಗೆ, ಜನ ಸಾಮಾನ್ಯರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿವೆ. ಮತ್ತೊಂದೆಡೆ ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಪಣತೊಡುತ್ತಿದೆ. ಹೀಗಿರುವಾಗ ರಿಯಲ್​ಮಿ ಕಂಪೆನಿ ಸಿದ್ಧಪಡಿಸಿದ್ದ ನೂತನ ಸ್ಮಾರ್ಟ್​ಪೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಹಿಂದೇಟು ಹಾಕುತ್ತಿದೆ.

ರಿಯಲ್​ಮಿ ನೋರ್ಜೊ10 ಸ್ಮಾರ್ಟ್​ಫೋನ್​ ವಿಶೇಷತೆಗಳು:

ಡಿಸ್​ಪ್ಲೇ: 6.5 ಇಂಚಿನ ಎಚ್​ಡಿ+ ಡಿಸ್​ಪ್ಲೇ

ಪ್ರೊಸೆಸರ್​​: ಮೀಡಿಯೋಟೆಕ್​ ಹೆಲಿಯೋ ಜಿ80 ಎಸ್​ಒಸಿ

ರ್ಯಾಮ್:​ 3ಜಿಬಿ ಮತ್ತು 3ಜಿಬಿ

ಸ್ಟೊರೇಜ್​: 128ಜಿಬಿ

ಕ್ಯಾಮೆರಾ: 48ಮೆಗಾಫಿಕ್ಸೆಲ್​+ 8 ಮೆಗಾಫಿಕ್ಸೆಲ್​​ +ಮೊನೋಕ್ರೋಮ್​ ಮತ್ತು ಮ್ಯಾಕ್ರೋ ಸೆನ್ಸಾರ್​

ಸೆಲ್ಫಿಕ್ಯಾಮೆರಾ: 16 ಮೆಗಾಫಿಕ್ಸೆಲ್​

ರಿಯಲ್​ಮಿ ನೋರ್ಜೊ10A ಸ್ಮಾರ್ಟ್​ಫೋನ್​ ವಿಶೇಷತೆಗಳು:

ಡಿಸ್​ಪ್ಲೇ: 6.5 ಇಂಚಿನ ಎಚ್​ಡಿ+ ಡಿಸ್​ಪ್ಲೇ

ಪ್ರೊಸೆಸರ್​: ಮೀಡಿಯೋಟೆಕ್​ ಹೆಲಿಯೋ ಜಿ80 ಎಸ್​ಒಸಿ

ರ್ಯಾಮ್​: 3ಜಿಬಿ ಮತ್ತು 3ಜಿಬಿ

ಸ್ಟೊರೇಜ್​: 128ಜಿಬಿ

ಕ್ಯಾಮೆರಾ: ತ್ರಿವಳಿ ಕ್ಯಾಮೆರಾದ ಜೊತೆಗೆ 12 ಮೆಗಾಫಿಕ್ಸೆಲ್​ ಮೈನ್​​ ಶೂಟರ್​


ಇದನ್ನೂ ಓದಿ: ಜಾಹೀರಾತು ಲೋಕದಲ್ಲಿ ಮಿಂಚುತ್ತಿದ್ದಾರೆ ಸ್ಯಾಂಡಲ್​​ವುಡ್​​ನ ಈ ಸ್ಟಾರ್ ನಟನ ಹೆಂಡತಿ


ಇದನ್ನೂ ಓದಿ: ಮೊಬೈಲ್​ನಲ್ಲಿ ಹೊಸ ಆವಿಷ್ಕಾರ; ಬ್ಯಾಟರಿ ಇಲ್ಲದೆ ಈ ಫೋನ್​ ಬಳಸಬಹುದು
First published:March 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ