ಮದ್ಯಪ್ರಿಯರಿಗೆ ಶಾಕ್; ಏಪ್ರಿಲ್ 14ರವರೆಗೆ ಲಿಕ್ಕರ್ ಮಾರಾಟ ಇಲ್ಲ!

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ  ಹಿನ್ನೆಲೆಯಲ್ಲಿ ಮದ್ಯ ಮಾರಾಟದ ಮೇಲಿನ ನಿರ್ಬಂಧ ಏಪ್ರಿಲ್ 14ರವರೆಗೆ ಮುಂದುವರಿಯಲಿದೆ. ನಾಳೆಯಿಂದ ಎಣ್ಣೆ ಸಿಗಲಿದೆ ಎಂದು ಖುಷಿಯದಲ್ಲಿದ್ದ ಮದ್ಯಪ್ರಿಯರಿಗೆ ಈ ಆದೇಶ ತೀವ್ರ ನಿರಾಸೆ ಮೂಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಮಾ. 31): ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕಿಂಗ್​ ಸುದ್ದಿಯನ್ನು ಕೊಟ್ಟಿದೆ. ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಏಪ್ರಿಲ್ 14 ರವರೆಗೆ ಮದ್ಯ ಮಾರಾಟ ಬಂದ್​​ ಮಾಡಿ ಆದೇಶ ಹೊರಡಿಸಿದೆ. 

  ಅಬಕಾರಿ ಇಲಾಖೆ ಆಯುಕ್ತರು ಮಾರ್ಚ್​ 21 ಹೊರಡಿಸಿದ್ದ ಆದೇಶದ ಪ್ರಕಾರ ಮಾರ್ಚ್​ 31ರ ಮಧ್ಯರಾತ್ರಿಗೆ ಮದ್ಯ ಮಾರಾಟ ನಿಷೇಧ ಅಂತ್ಯವಾಗಲಿತ್ತು. ಆದರೆ, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ  ಹಿನ್ನೆಲೆಯಲ್ಲಿ ಮದ್ಯ ಮಾರಾಟದ ಮೇಲಿನ ನಿರ್ಬಂಧ ಏಪ್ರಿಲ್ 14ರವರೆಗೆ ಮುಂದುವರಿಯಲಿದೆ. ನಾಳೆಯಿಂದ 'ಎಣ್ಣೆ' ಸಿಗಲಿದೆ ಎಂದು ಖುಷಿಯದಲ್ಲಿದ್ದ ಮದ್ಯಪ್ರಿಯರಿಗೆ ಈ ಆದೇಶ ತೀವ್ರ ನಿರಾಸೆ ಮೂಡಿಸಿದೆ.

  order
  ಆದೇಶದ ಪ್ರತಿ


  ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಮದ್ಯದ ಅಂಗಡಿಗಳು ತೆರೆದಿದ್ದರೆ ಅದಕ್ಕೆ ಅಬಕಾರಿ ಉಪ ಆಯುಕ್ತರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅಬಕಾರಿ ಇಲಾಖೆ ಆಯುಕ್ತರು ಎಚ್ಚರಿಕೆಯನ್ನು ನೀಡಿದ್ದಾರೆ.

  ಇದನ್ನೂ ಓದಿ : ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ - ಕಲ್ಲಂಗಡಿ ಮಾರಲಾಗದೆ ರೈತ ನೇಣಿಗೆ ಶರಣು

  ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ವಾರದಿಂದ ಮದ್ಯ ಸಿಗದ ಕಾರಣ ರಾಜ್ಯದಲ್ಲಿಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
  First published: