ಕೊರೋನಾ ಪರಿಣಾಮ; ತುರ್ತುಪರಿಸ್ಥಿತಿ ಬಳಿಕ ಇದೇ ಮೊದಲ ಬಾರಿಗೆ ನಾಳೆಯಿಂದ ಲಾಲ್ ಬಾಗ್ ಪ್ರವೇಶ ನಿರ್ಬಂಧ

ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಮಾತ್ರ‌ ಲಾಲ್​​ಬಾಗ್​​​​ ಗೇಟ್​​ಗಳು ಮುಚ್ಚಿದ್ದವು. ಅದನ್ನು ಹೊರತು ಪಡಿಸಿ ಸದಾ ಜನರನ್ನು ಕೈಬೀಸಿ ಕರೆಯುತ್ತಿದ್ದ ಲಾಲ್​ಬಾಗ್​ಗೆ ಸಾವಿರಾರು ಜನರು ಪ್ರತಿನಿತ್ಯ ಬರುತ್ತಿದ್ದರು

ಲಾಲ್​​​ ಬಾಗ್​​​​​

ಲಾಲ್​​​ ಬಾಗ್​​​​​

 • Share this:
  ಬೆಂಗಳೂರು(ಮಾ.20) : ಕೊರೋನಾ ಎಫೆಕ್ಟ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸೂಚನೆಯಂತೆ ಸಸ್ಯಕಾಶಿ ಲಾಲ್​​​​​ ಬಾಗ್​​​ ನಾಳೆಯಿಂದ ಬಂದ್​ ಮಾಡಲಾಗುತ್ತಿದೆ. ಮುಂದಿನ ಸೂಚನೆ ಬರುವವರಗೆ ಸಸ್ಯಕಾಶಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 

  ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಮಾತ್ರ‌ ಲಾಲ್​​ಬಾಗ್​​​​ ಗೇಟ್​​ಗಳು ಮುಚ್ಚಿದ್ದವು. ಅದನ್ನು ಹೊರತು ಪಡಿಸಿ ಸದಾ ಜನರನ್ನು ಕೈಬೀಸಿ ಕರೆಯುತ್ತಿದ್ದ ಲಾಲ್​ಬಾಗ್​ಗೆ ಸಾವಿರಾರು ಜನರು ಪ್ರತಿನಿತ್ಯ ಬರುತ್ತಿದ್ದರು. ನಾಳೆಯಿಂದ ನಡಿಗೆದಾರರು ಮತ್ತು ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ.

  ಪಾರ್ಕ್‌ಗಳಲ್ಲಿ ಜನ ಸಂದಣಿ ಇರುತ್ತೆ. ಹೀಗಾಗಿ ಸೋಂಕು ಹರಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ಪಾರ್ಕ್‌ಗಳನ್ನು ಬಂದ್ ಮಾಡಿ ಎಂದು ಸಿಎಂ ಆದೇಶ ಮಾಡಿದ್ದಾರೆ. ಆದರೂ ಲಾಲಾ ಬಾಗ್ ತೋಟಗಾರಿಕೆ ಆಡಳಿತ ಮಂಡಳಿ, ಪಾರ್ಕ್ ಅನ್ನು ಮುಚ್ಚಿರಲಿಲ್ಲ. ಇದೀಗ ಕಟ್ಟುನಿಟ್ಟಿನ ಆದೇಶದ ಬಳಿಕ ಪಾಕ್​ ಮುಚ್ಚಲಾಗುತ್ತಿದೆ.

  ಇದನ್ನೂ ಓದಿ : ಕೊರೋನಾ ಭೀತಿ ಹಿನ್ನೆಲೆ - ಬಿಸಿಯೂಟದ ಬದಲು ಆಹಾರಧಾನ್ಯ ವಿತರಿಸುವಂತೆ ಶಿಕ್ಷಣ ಇಲಾಖೆ ಆದೇಶ

  ಕೊರೋನಾ ವೈರಸ್ ಸೋಂಕು ಹರಡುವ ವೇಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಇನ್ನಷ್ಟು ಬಿಗಿ ಕ್ರಮಗಳನ್ನ ಕೈಗೊಳ್ಳುತ್ತಿವೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ವಿವಿಧ ಕ್ರಮಗಳನ್ನ ಜಾರಿಗೊಳಿಸುತ್ತಿದೆ. ನಾಳೆಯಿಂದ ಪಬ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್​ಗಳನ್ನ ಮುಚ್ಚಲು ಸಿಎಂ ಸೂಚಿಸಿದ್ದಾರೆ. ಹೋಟೆಲ್​ಗಳಲ್ಲಿ ನಿರ್ಬಂಧಗಳನ್ನ ಹೇರಲಾಗಿದೆ. ಹೋಟೆಲ್​ನ ಕಿಚನ್ ಮಾತ್ರ ತೆರೆದಿರುತ್ತದೆ. ಮಾರ್ಚ್ 31ರವರೆಗೆ ಈ ನಿಷೇಧ ಮತ್ತು ನಿರ್ಬಂಧಗಳು ಜಾರಿಯಲ್ಲಿರುತ್ತವೆ.
  First published: