HOME » NEWS » Coronavirus-latest-news » CORONAVIRUS EFFECT KALBURGI DC ORDER FOR PETROL BUNK BUND HK

ಲಾಕ್ ಡೌನ್ ಇದ್ದರೂ ರಸ್ತೆಗೆ ಬಂದವರಿಗೆ ಕಪ್ಪೆ ಜಿಗಿತದ ಶಿಕ್ಷೆ ; ಜನರ ಕಾಟಕ್ಕೆ ತಾಳದೆ ಪೆಟ್ರೋಲ್ ಬಂಕ್ ಬಂದ್ ಗೆ ಆದೇಶ

ಜನರ ವರ್ತನೆಯಿಂದ ಬೇಸತ್ತ ಜಿಲ್ಲಾಡಳಿತ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಬಂದ್ ಮಾಡಿ ಡಿಸಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

news18-kannada
Updated:March 28, 2020, 12:16 AM IST
ಲಾಕ್ ಡೌನ್ ಇದ್ದರೂ ರಸ್ತೆಗೆ ಬಂದವರಿಗೆ ಕಪ್ಪೆ ಜಿಗಿತದ ಶಿಕ್ಷೆ ; ಜನರ ಕಾಟಕ್ಕೆ ತಾಳದೆ ಪೆಟ್ರೋಲ್ ಬಂಕ್ ಬಂದ್ ಗೆ ಆದೇಶ
ಕಪ್ಪೆ ಜಿಗಿತದ ಶಿಕ್ಷೆ ಕೊಟ್ಟ ಪೊಲೀಸರು
  • Share this:
ಕಲಬುರ್ಗಿ(ಮಾ.27) : ಜಿಲ್ಲೆಯಲ್ಲಿ ಕರ್ಫ್ಯೂ ಮತ್ತು ಲಾಕ್​​​ ಡೌನ್ ಜಾರಿಯಿದ್ದರೂ ಜನರ ಅಡ್ಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಜನರ ವರ್ತನೆಯಿಂದ ಬೇಸತ್ತ ಜಿಲ್ಲಾಡಳಿತ ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ನಾಳೆಯಿಂದ ಪೆಟ್ರೋಲ್ ಬಂಕ್ ಮುಚ್ಚಿಸಲು ತೀರ್ಮಾನ ಕೈಗೊಂಡಿದೆ.

ಪೆಟ್ರೋಲ್ ಬಂಕ್ ಬಂದ್ ಮಾಡಿ ಡಿಸಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ. ಸರ್ಕಾರಿ ವಾಹನ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್, ಔಷಧ ವ್ಯಾಪಾರಿಗಳು ಮತ್ತು ಪತ್ರಕರ್ತರಿಗೆ ವಿನಾಯಿತಿ ನೀಡಲಾಗಿದೆ. ಗುರುತಿನ ಚೀಟಿ ತೋರಿಸಿದರೆ ಮಾತ್ರ ಪೆಟ್ರೋಲ್ ಹಾಕಲು ಸೂಚನೆ ನೀಡಿರೋ ಜಿಲ್ಲಾಡಳಿತ, ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದೆ.

petrol-bunk-1
ಪೆಟ್ರೋಲ್ ಬಂಕ್ ಬಂದ್ ಆದೇಶ


ಜಿಲ್ಲಾಡಳಿತದ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್ ಭರ್ತಿಯಾಗಿವೆ. ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್ ಗಳೂ ಭರ್ತಿಯಾಗಿವೆ. ನಾಳೆಯಿಂದ ಪೆಟ್ರೋಲ್ ಸಿಗಲ್ಲವೆಂದು ಜನ ಮುಗಿಬಿದ್ದಿದ್ದಾರೆ.

ಲಾಕ್ ಡೌನ್ ಇದ್ರೂ ರಸ್ತೆಗೆ ಬಂದವರಿಗೆ ಕಪ್ಪೆ ಜಿಗಿತದ ಶಿಕ್ಷೆ:

ಭಾರತ್ ಲಾಕ್‌ಡೌನ್ ಮತ್ತು 144 ಸೆಕ್ಷನ್ ನಿಷೇಧಾಜ್ಞೆ ಉಲ್ಲಂಘನೆ ಹಿನ್ನೆಲೆ ಚಿಂಚೋಳಿಯಲ್ಲಿ ವಾಹನಸವಾರರಿಗೆ ಖಾಕಿ ಪಡೆ ವಿಭಿನ್ನ ಶಿಕ್ಷೆ ನೀಡಿದೆ. ಖಡಕ್ ಬಿಸಿಲಿನಲ್ಲಿ ಹೆದ್ದಾರಿಯಲ್ಲಿ ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತ ಕಪ್ಪೆ ಜಿಗಿದಂತೆ ರಸ್ತೆ ಮೇಲೆ ಜಿಗಿಯುವ ಶಿಕ್ಷೆ ವಿಧಿಸಿದ್ದಾರೆ. ಖಾಕಿ ಪಡೆಯ ವಿಭಿನ್ನ ಶಿಕ್ಷೆಗೆ ಹೆದರಿ ಕೆಲ ವಾಹನ ಸವಾರರು ಹೊರಬರಲು ಹೆದರಿದ್ದಾರೆ.

ಆದರೆ ಪೋಲಿ ಹುಡುಗರು ಮಾತ್ರ ರಸ್ತೆಯಲ್ಲಿ ಅಡ್ಡಾ ಡುವುದನ್ನು ಬಿಟ್ಟಿಲ್ಲ. ಇದರಿಂದ ಕುಪಿತಗೊಂಡ ಚಿಂಚೋಳಿ ಪೊಲೀಸರು, ರಸ್ತೆ ಮೇಲೆ ಬಸ್ಕಿ ಹೊಡೆಯಿಸಿದ್ದಾರೆ. ಸಾಲದೆಂಬಂತೆ ಕಪ್ಪೆ ಜಿಗಿತದ ಶಿಕ್ಷೆಯನ್ನೂ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ಮಾತ್ರ ಮನೆ ಬಿಟ್ಟು ಹೊರಬರಲು ಪೊಲೀಸರು ಮನವಿ ಮಾಡಿದ್ದಾರೆ. ಖಾಕಿ ಪಡೆಯ ಡಿಫ್ರೆಂಟ್ ಟ್ರೀಟ್ ಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.ಕೊರೋನಾ ನಿಯಂತ್ರಿಸುವಂತೆ ದೇವರ ಮೊರೆ :

ಕೊರೋನಾ ಮಾಹಾಮಾರಿ ತೊಗಲೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಜೆ.ಎಮ್.ಕೊರಬು ಫೌಂಡೇಶನ್ ನಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ : ಲಾಕ್​ಡೌನ್ ಮಧ್ಯೆಯೂ ಹೊರಗೆ ಬಂದವರಿಗೆ ಬಸ್ಕಿ, ಲಾಠಿ ರುಚಿ ತೋರಿಸಿದ ಪೊಲೀಸರು

201 ತೆಂಗಿನಕಾಯಿ ಹೊಡೆದು ದೇವರಿಗೆ ವಿಶೇಷ ಪೂಜೆ ಮಾಡಲಾಯಿತು. ಜೊತೆಗೆ ಮಾಶ್ಯಾಳ ಗ್ರಾಮದಲ್ಲಿ ಜೆಎಮ್ ಫೌಂಡೇಶನ್ ವತಿಯಿಂದ ಉಚಿತ್ ಮಾಸ್ಕ್ ವಿತರಣೆ ಮಾಡಲಾಯಿತು. ಇಲ್ಲಿಯವರೆಗೂ 15000 ಕ್ಕೂ ಅಧಿಕ ಮಾಸ್ಕ್ ಹಂಚಿರುವ ಕೊರಬು ಫೌಂಡೇಶನ್ ಮಾಸ್ಕ್ ಜೊತೆಗೆ ಕೊರೊನಾ ಜಾಗೃತಿಯ ಬಗ್ಗೆ ಮನೆ ಮನೆಗೆ ಕರಪತ್ರ ಹಂಚಿಕೆ ಮಾಡಿದೆ.  ಭಾರತ ದೇಶದಿಂದ ಕೊರೊನಾ ಮಾಹಾಮಾರಿ ತೊಲಗಲೆಂದು ವಿಶೇಷ ಪೂಜೆ ಸಲ್ಲಿಸಿದೆ.
First published: March 28, 2020, 12:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories