ಕೊರೋನಾ ವೈರಸ್ ಪ್ರಭಾವ; ಶೇ.11 ರಷ್ಟು ಇಳಿದ ಭಾರತದ ತೈಲ ಬೇಡಿಕೆ

ಕಳೆದ ವರ್ಷ ಮಾರ್ಚ್ 2019ರ ಈ ವೇಳೆಗಾಗಲೇ ದೇಶ 19.5 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನವನ್ನು ಬಳಸಿತ್ತು ಎಂದು ಅಂಕಿ ಅಂಶಗಳು ಹೇಳುತ್ತಿವೆ. ಆದರೆ, ಈ ವರ್ಷ ಇದೇ ಅವಧಿಯಲ್ಲಿ ಕೇವಲ 10 ಮಿಲಿಯನ್ ಟನ್ ತೈಲ ಉತ್ಪನ್ನಗಳನ್ನು ಮಾತ್ರ ಬಳಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಮಾರಣಾಂತಿಕ ಕೊರೋನಾ ವೈರಸ್‍ನಿಂದಾಗಿ ಇಡೀ ವಿಶ್ವ ಇಂದು ತಲ್ಲಣಕ್ಕೆ ಒಳಗಾಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಕೊರೋನಾದಿಂದಾಗಿ ವಿಮಾನ ನಿಲ್ದಾಣಗಳು ಸ್ಥಗಿತವಾಗಿವೆ, ಕೈಗಾರಿಕೆಗಳು ಮತ್ತು ಸಾರಿಗೆ ವ್ಯವಸ್ಥೆ ತನ್ನ ಕಾರ್ಯಚಟುವಟಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ. ಪರಿಣಾಮ ಕಳೆದ ಎರಡು ವಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ತೈಲ ಬೇಡಿಕೆ ಪ್ರಮಾಣ ಶೇ.10 ರಿಂದ 11 ರಷ್ಟು ಕಡಿಮೆಯಾಗಿದೆ.

ಕಳೆದ ವರ್ಷ ಮಾರ್ಚ್ 2019ರ ಈ ವೇಳೆಗಾಗಲೇ ದೇಶ 19.5 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನವನ್ನು ಬಳಸಿತ್ತು ಎಂದು ಅಂಕಿ ಅಂಶಗಳು ಹೇಳುತ್ತಿವೆ. ಆದರೆ, ಈ ವರ್ಷ ಇದೇ ಅವಧಿಯಲ್ಲಿ ಕೇವಲ 10 ಮಿಲಿಯನ್ ಟನ್ ತೈಲ ಉತ್ಪನ್ನಗಳನ್ನು ಮಾತ್ರ ಬಳಸಲಾಗಿದೆ.

“ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದ ಮೇಲೆ ಕೊರೋನಾ ವೈರಸ್ ಪ್ರಭಾವ ಬೀರಿದೆ. 2020 ಮಾರ್ಚ್ ತಿಂಗಳ ಮೊದಲ 15 ದಿನಗಳಲ್ಲಿ ದ್ರವ ಇಂಧನದ ಒಟ್ಟಾರೆ ಬೇಡಿಕೆ ಶೇ. 10-11 ರಷ್ಟು ಕಡಿಮೆಯಾಗಿದೆ” ಎಂದು ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಕಂಪೆನಿ (ಐಒಸಿ) ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಯಲ್ಲಿ ಮಂದಗತಿಯ ಕೈಗಾರಿಕಾ ಚಟುಚಟಿಕೆ ಮತ್ತು ಪ್ರಯಾಣದ ಮೇಲಿನ ನಿರ್ಬಂಧಗಳೇ ಇಂಧನದ ಬೇಡಿಕೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಕಳೆದ ಎರಡು-ಮೂರು ವಾರದಲ್ಲಿ ಡೀಸೆಲ್ ಮಾರಾಟ ಶೇ.13ಕ್ಕಿಂತಲೂ ಕಡಿಮೆಯಾಗಿದೆ. ಜೆಟ್ ಇಂಧನ ಮಾರಾಟ ಶೇ.10ಕ್ಕಿಂತಲೂ ಕಡಿಮೆಯಾಗಿದೆ. ಇನ್ನೂ ಪೆಟ್ರೋಲ್ ಮಾರಟ ಶೇ.2ಕ್ಕಿಂತ ಕುಸಿದಿದೆ. ಅಲ್ಲದೆ, ಚಲನೆ ಮತ್ತು ಪ್ರಯಾಣ ಸಲಹೆ-ನಿರ್ಬಂಧದಿಂದಾಗಿ ವಾಯುಯಾನ ಟರ್ಬೈನ್ ಇಂಧನ ಮಾರಾಟವೂ ಶೇ.10ಕ್ಕಿಂತಲೂ ಕಡಿಮೆಯಾಗಿದೆ. ಬಂಕರ್ ಇಂಧನ ಮಾರಾಟದಲ್ಲೂ ಶೇ.10ಕ್ಕಿಂತಲೂ ಕುಸಿದಿದೆ.

"ವಿಮಾನಯಾನ ಉದ್ಯಮದ ಒಟ್ಟು ಕಚ್ಚಾತೈಲ ಬೇಡಿಕೆಯ ಶೇ. 6-8ರಷ್ಟು ಈಗಾಗಲೇ ಕುಸಿದಿದೆ. ಹೆಚ್ಚಿನ ದೇಶಗಳು COVID-19 ಪರಿಣಾಮದಿಂದಾಗಿ ಅಂತರರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣದಲ್ಲಿ ನಿಷೇಧವನ್ನು ಜಾರಿಗೊಳಿಸಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ಮುಂದಿನ ದಿನಗಳಲ್ಲಿ ತಹಬಂದಿದೆ ತರದಿದ್ದಲ್ಲಿ ಪರಿಣಾಮ ಮತ್ತಷ್ಟು ತೀವ್ರವಾಗಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ : ಚೀನಾದಲ್ಲಿ ಸ್ಥಳೀಯವಾಗಿ ತಹಬಂದಿಗೆ ಬಂದ ಕೊರೋನಾ; ವಿದೇಶಿ ಪ್ರವಾಸಿಗರಿಂದ ಮತ್ತೆ ಹೆಚ್ಚುತ್ತಿದೆ ಸೋಂಕು
First published: