• Home
  • »
  • News
  • »
  • coronavirus-latest-news
  • »
  • ಜಿಮ್ಸ್ ಎಡವಟ್ಟು - ಬಸವೇಶ್ವರ ಆಸ್ಪತ್ರೆಗೆ ಆಪತ್ತು ; 83 ಜನ ಸಿಬ್ಬಂದಿ ಕ್ವಾರಂಟೈನ್​​ಗೆ

ಜಿಮ್ಸ್ ಎಡವಟ್ಟು - ಬಸವೇಶ್ವರ ಆಸ್ಪತ್ರೆಗೆ ಆಪತ್ತು ; 83 ಜನ ಸಿಬ್ಬಂದಿ ಕ್ವಾರಂಟೈನ್​​ಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋಡ್ಲಿ ಗ್ರಾಮದ ಬಹುತೇಕ ಕಡೆ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಈತನ ತಪ್ಪಿನಿಂದಾಗಿ ಊರಿನ ಜನ ಪರಿತಪಿಸುವಂತಾಗಿದೆ. ಇನ್ನು ಈತನಿಗೆ ಚಿಕಿತ್ಸೆ ಕೊಟ್ಟ ಪರಿಣಾಮ ಹಲವು ವಾರ್ಡ್ ಗಳು ಬಂದ್ ಆಗಿವೆ

  • Share this:

ಕಲಬುರ್ಗಿ(ಮೇ.07): ಜಿಮ್ಸ್ ಆಸ್ಪತ್ರೆ ಮಾಡಿದ ಎಡವಟ್ಟಿನಿಂದ ಕಲಬುರ್ಗಿಯ ಪ್ರತಿಷ್ಠಿತ ಬಸವೇಶ್ವರ ಆಸ್ಪತ್ರೆ ಆಪತ್ತು ಎದುರಿಸುವಂತಾಗಿದೆ. ಸೋಂಕಿತ ಎಂದು ಗೊತ್ತಿಲ್ಲದೆ ಪೇಷೆಂಟ್ ಒಬ್ಬನನ್ನು ದಾಖಲಿಸಿಕೊಂಡಿದ್ದ ಬಸವೇಶ್ವರ ಆಸ್ಪತ್ರೆಯಲ್ಲಿ ಬರೋಬ್ಬರಿ 83 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆ ಇರುವುದಾಗಿ ಆಸ್ಪತ್ರೆಗೆ ಹೋಗಿದ್ದ ಕೋಡ್ಲಿ ಗ್ರಾಮದ 37 ವರ್ಷದ ವ್ಯಕ್ತಿಯನ್ನು ಸರ್ಜರಿಗೆ ಒಯ್ಯಬೇಕೆನ್ನುವಷ್ಟರಲ್ಲಿಯೇ ಪಾಸಿಟಿವ್ ಎಂದು ದೃಢಪಟ್ಟಿದೆ. ಅದರ ಪರಿಣಾಮ ಬರೋಬ್ಬರಿ 83 ಸಿಬ್ಬಂದಿ ಕ್ವಾರಂಟೈನ್ ಆಗುವಂತಾಗಿದೆ. ಪಿ.ಜಿ. ವೈದ್ಯರು, ನರ್ಸ್ ಮತ್ತಿತರರು ಕ್ವಾರಂಟೈನ್ ಆಗುವಂತಾಗಿದೆ.


ಹೈದರಾಬಾದ್ ನಿಂದ ಕಾಳಗಿಗೆ ಬಂದಿದ್ದ ವ್ಯಕ್ತಿ ಗೆಳೆಯನ ಜೊತೆ ಬೈಕ್ ನಲ್ಲಿ ಬಂದು ಮೇ 1 ರಂದು ಜಿಮ್ಸ್ ಗೆ ಹೋಗಿದ್ದ. ಈ ವೇಳೆ ಜಿಮ್ಸ್ ಸಿಬ್ಬಂದಿ ಆತನ ಗಂಟಲ ದ್ರವ ಪರೀಕ್ಷೆಗೆ ಗುರಿಪಡಿಸಿದ್ದಾರೆ. ನಂತರ ಆ ವ್ಯಕ್ತಿ ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಹೋಗಿದ್ದ. ಹೈದರಾಬಾದ್ ನಿಂದ ಬಂದದ್ದು, ಜಿಮ್ಸ್ ಗೆ ಹೋಗಿದ್ದನ್ನು ವ್ಯಕ್ತಿ ಮುಚ್ಚಿಟ್ಟು, ಕೇವಲ ತನ್ನ ಕಿಡ್ನಿ ತೊಂದರೆಯ ಮಾಹಿತಿಯನ್ನಷ್ಟೇ ನೀಡಿದ್ದ. ಎಲ್ಲವನ್ನೂ ಪರೀಕ್ಷಿಸಿದ್ದ ವೈದ್ಯರು, ಕಿಡ್ನಿ ಸ್ಟೋನ್ ಅಪರೇಷನ್ ಮಾಡಲು ಸಿದ್ಧಮಾಡಿಕೊಂಡಿದ್ದರು. ಅಷ್ಟರೊಳಗೆ ಆತನಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಅಂಶ ಗೊತ್ತಾಗಿದೆ. ಅಪರೇಷನ್ ಗೂ ಮುನ್ನ ಪೊಲೀಸರು ಪೇಷಂಟ್ ನನ್ನು ಹುಡುಕಿಕೊಂಡು ಬಂದಿದ್ದದಾರೆ. ನಂತರ ಕೊರೋನಾ ಐಸೋಲೇಷನ್ ವಾರ್ಡ್ ಗೆ ವ್ಯಕ್ತಿಯನ್ನು ದಾಖಲಿಸಲಾಗಿದೆ.


ಜಿಮ್ಸ್ ಎಡವಟ್ಟಿನಿಂದ ಬಸವೇಶ್ವರ ಆಸ್ಪತ್ರೆ ಹಲವು ವಾರ್ಡ್ ಬಂದ್ ಆಗುವಂತಾಗಿದೆ. ಸರ್ಜರಿ ವಾರ್ಡ್, ಮೆಡಿಸಿನ್ ವಾರ್ಡ್, ಫಿವರ್ ಕ್ಲಿನಿಕ್ ವಾರ್ಡ್ ಬಂದ್ ಆಗಿವೆ. ಬಹುತೇಕ ಸಿಬ್ಬಂದಿ ಕ್ವಾರಂಟೈನ್ ಆಗಿರುವುದರಿಂದ ಚಿಕಿತ್ಸೆ ನೀಡಲು ಸಿಬ್ಬಂದಿ ಕೊರತೆ ಎದುರಾಗಿದ್ದು, ಒಂದರ್ಥದಲ್ಲಿ ಮುಚ್ಚಿದ ಸ್ಥಿತಿಯಲ್ಲಿದೆ ಬಸವೇಶ್ವರ ಆಸ್ಪತ್ರೆ. ಜಿಮ್ಸ್ ಕಾರ್ಯವೈಖರಿಗೆ ಬಸವೇಶ್ವರ ಆಸ್ಪತ್ರೆ ವೈದ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಥ್ರೋಟ್ ಸ್ಯಾಂಪಲ್ ತೆಗೆದುಕೊಂಡ ಮೇಲೆ ಶಂಕಿತ ವ್ಯಕ್ತಿಯನ್ನು ಹೊರಗೆ ಬಿಟ್ಟರು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಕನಿಷ್ಟ ಕ್ವಾರಂಟೈನ್ ಮಾಡಿರುವುದಾಗಿ ಸೀಲ್ ಆದರೂ ಹಾಕಿಲ್ಲ. ಗೊತ್ತಿಲ್ಲದೆ ದಾಖಲಿಸಿಕೊಂಡು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಂಕಿತರನ್ನು, ಸಾಮಾನ್ಯ ರೋಗಿಗಳನ್ನು ಒಂದೇ ವಾರ್ಡ್ ನಲ್ಲಿ ಅಡ್ಮಿಟ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದ ಜಿಮ್ಸ್ ಈಗ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ. ಕೊರೋನಾ ವಿಷಯದಲ್ಲಿ ಪದೇ ಪದೇ ನಿರ್ಲಕ್ಷ್ಯ ತೋರುತ್ತಿರೋ ಜಿಮ್ಸ್ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಸೋಂಕಿತನ ಎಡವಟ್ಟಿನಿಂದ ಇಡೀ ಊರೇ ಲಾಕ್ ಡೌನ್ :


ಜಿಮ್ಸ್ ನಲ್ಲಿ ಥ್ರೋಟ್ ಸ್ಯಾಂಪಲ್ ನೀಡಿ ಬಸವೇಶ್ವರ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದ 37 ವರ್ಷದ ವ್ಯಕ್ತಿ ಕೋಡ್ಲಿ ಗ್ರಾಮದಲ್ಲಿಯೂ ಅವಾಂತರ ಸೃಷ್ಟಿಸಿ ಬಂದಿದ್ದಾನೆ. ಹೈದರಾಬಾದ್ ನಿಂದ ಕೋಡ್ಲಿಗೆ ಬಂದಿದ್ದ ವ್ಯಕ್ತಿ ಊರಿನ ಹಲವೆಡೆ ಸುತ್ತಾಡಿ ಬಂದಿದ್ದ. ನಂತರ ಕಿಡ್ನಿ ಸ್ಟೋನ್ ನೋವು ತಾಳದೆ ಗೆಳೆಯನ ಜೊತೆ ಬೈಕ್ ನಲ್ಲಿ ಜಿಮ್ಸ್ ಗೆ ಬಂದಿದ್ದ. ಅಲ್ಲಿ ಥ್ರೋಟ್ ಸ್ಯಾಂಪಲ್ ಕೊಟ್ಟು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಹೋಗಿದ್ದ. ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆಯಲ್ಲಿಯೇ ಈತನಿಗೆ ಪಾಸಿಟಿವ್ ಇರೋದು ದೃಢಪಟ್ಟಿದೆ.


ಅಲ್ಲಿಂದ ನೇರವಾಗಿ ಐಸೋಲೇಷನ್ ವಾರ್ಡ್ ಗೆ ಕರೆದೊಯ್ಯಲಾಗಿದೆ. ಈತ ಎಲ್ಲೆಲ್ಲಿ ಅಡ್ಡಾಡಿದ್ದನೋ ಅಲ್ಲೆಲ್ಲಾ ಲಾಕ್ ಡೌನ್ ಮಾಡಲಾಗಿದೆ. ಕೋಡ್ಲಿ ಗ್ರಾಮದ ಬಹುತೇಕ ಕಡೆ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಈತನ ತಪ್ಪಿನಿಂದಾಗಿ ಊರಿನ ಜನ ಪರಿತಪಿಸುವಂತಾಗಿದೆ. ಇನ್ನು ಈತನಿಗೆ ಚಿಕಿತ್ಸೆ ಕೊಟ್ಟ ಪರಿಣಾಮ ಹಲವು ವಾರ್ಡ್ ಗಳು ಬಂದ್ ಆಗಿವೆ. ಈತನಿಂದಾಗಿ 35 ವರ್ಷದ ವ್ಯಕ್ತಿಗೂ ಸೋಂಕು ತಗುಲಿದ್ದು, ಆತನಿಗೆ ಐಸೋಲೇಷನ್ ವಾರ್ಡ್ ನಲ್ಲಿಡಲಾಗಿದೆ.


ಲಾರಿ ಚಾಲಕನಿಗೂ ಸೋಂಕು:


ಕೋಡ್ಲಿ ಗ್ರಾಮದ 37 ವರ್ಷದ ವ್ಯಕ್ತಿಯಿಂದ ಲಾರಿ ಚಾಲಕನಿಗೂ ಸೋಂಕು ವ್ಯಾಪಿಸಿದೆ. ಹೈದರಾಬಾದ್ ನಿಂದ ಪಾಸಿಟಿವ್ ವ್ಯಕ್ತಿಯನ್ನು ಕರೆತಂದಿದ್ದ ಲಾರಿ ಚಾಲಕನಿಗೂ ಸೋಂಕಿರೋದು ದೃಢಪಟ್ಟಿದೆ. 35 ವರ್ಷದ ಲಾರಿ ಚಾಲಕನಿಗೆ ಪಿ-642 ರಿಂದ ಸೋಂಕು ಹರಡಿದೆ. 37 ವರ್ಷದ ಪಿ-642 ಕಾಳಗಿ ತಾಲೂಕಿನ ಕೋಡ್ಲಿ ನಿವಾಸಿಯಾಗಿದ್ದು, ಹೈದರಾಬಾದ್ ನಿಂದ ಲಾರಿ ಮೂಲಕ ವಾಪಸ್ಸಾಗಿದ್ದ. ಆತನನ್ನು ಕರೆತಂದ ಲಾರಿ ಚಾಲಕ ಕಲಬುರ್ಗಿಯ ಕರೀಂ ನಗರದ ನಿವಾಸಿ 35 ವರ್ಷದ ವ್ಯಕ್ತಿಗೂ ಸೋಂಕು ಹರಡಿದೆ. ಇದರ ಜೊತೆ ಇಂದು ಮತ್ತಿಬ್ಬರಿಗೆ ಸೋಂಕು ದೃಢಪಟ್ಟಿದೆ.


ಇದನ್ನೂ ಓದಿ : ಅಂತರ್ಜಲ ಹೆಚ್ಚಳ ಕಾಮಗಾರಿಗೆ ಚಾಲನೆ ; ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿದೆ 252 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ


36 ವರ್ಷದ ಮಹಿಳೆಯಿಂದ(ಪಿ-641) ರಿಂದ ಇಬ್ಬರಿಗೆ ಸೋಂಕು ಹರಡಿದೆ. 36 ವರ್ಷದ ಮಹಿಳೆ ಹಾಗೂ 41 ವರ್ಷದ ಪುರುಷನಿಗೆ ಸೋಂಕು ವ್ಯಾಪಿಸಿದೆ. ಪೇಷಂಟ್ – 641 ಮೋಮಿನಪುರದ ನಿವಾಸಿಯಾಗಿದ್ದಾಳೆ. ಇದರೊಂದಿಗೆ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದ್ದು, ಸೋಂಕಿತರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು